– ಚುನಾವಣೆಗೂ ಮುನ್ನ ನೀರಿಗಾಗಿ ಪಾದಯಾತ್ರೆ ಮಾಡಿದ್ದರು
– ಮಗು ಅಳುವುದಕ್ಕೂ ಮೊದಲೇ ಹಾಲು ಕೊಡ್ತಿದ್ದಾರೆ
ಮಂಡ್ಯ: ಕರ್ನಾಟಕ ಕಾಂಗ್ರೆಸ್ (Karnataka Congress) ಐಎನ್‌ಡಿಐಎ (INDIA) ಮೈತ್ರಿಗಾಗಿ ನೀರು ಬಿಟ್ಟಿದೆ. ಸ್ಟಾಲಿನ್ ಸ್ನೇಹಕ್ಕೆ (MK Stalin) ಕರ್ನಾಟಕ ಬಲಿಯಾಗುತ್ತಿದೆ. ಕಾಂಗ್ರೆಸ್ ಮಂಡ್ಯ (Mandya) ಜನರಿಗೆ ಶಾಪವಾಗುತ್ತಿದ್ದು, ತಮಿಳುನಾಡಿಗೆ (Tamil Nadu) ವರವಾಗುತ್ತಿದೆ. ನಿಮ್ಮ ಲಾಭಕ್ಕೆ ರಾಜ್ಯದ ಜನತೆಗೆ ನೀವು ಶಾಪ ಆಗಿದ್ದೀರಿ ಎಂದು ಮಾಜಿ ಸಚಿವ ಸಿಟಿ ರವಿ (CT Rvai) ಕಿಡಿಕಾರಿದ್ದಾರೆ.
Advertisement
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಕೆಆರ್‌ಎಸ್ ಡ್ಯಾಂನಿಂದ (KRS Dam) ತಮಿಳುನಾಡಿಗೆ ನೀರು ಹರಿಸುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಕಾವೇರಿ (Kaveri River) ಕರ್ನಾಟಕದ ಸ್ವಾಭಿಮಾನದ ಪ್ರತೀಕ ಮಾತ್ರವಲ್ಲ ಜೀವನಾಡಿ. ಮಂಡ್ಯ, ಮೈಸೂರು ಭಾಗದ ರೈತರ ಬದುಕನ್ನು ಹಸನು ಮಾಡಿದೆ. ಕಾವೇರಿ ಇಲ್ಲದೇ ಬೆಂಗಳೂರು ಉಳಿಯೋಕು ಆಗಲ್ಲ ಎಂದಿದ್ದಾರೆ.
Advertisement
Advertisement
ಕಾವೇರಿ ವಿವಾದ ಇವತ್ತು ನಿನ್ನೆಯದಲ್ಲ. ಅದಕ್ಕೆ ಶತಮಾನದ ಇತಿಹಾಸ ಇದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಮುಖಂಡರು, ಡಿಕೆಶಿ ಸೇರಿ ಎಲ್ಲರೂ ಪಾದಯಾತ್ರೆ ಮಾಡಿದ್ರು. ನಮ್ಮ ನೀರು, ನಮ್ಮ ಹಕ್ಕು ಅಂತ ಪಾದಯಾತ್ರೆ ಮಾಡಿದ್ರು. ರೈತರು ಎಂದರೆ ಎಲ್ಲರೂ ಒಂದೇ. ಕರ್ನಾಟಕ-ತಮಿಳುನಾಡು ಎನ್ನುವ ಬೇಧಭಾವ ಇಲ್ಲ. ಆದರೆ ಸಂಕಷ್ಟ ಇದ್ದಾಗ ಸೂತ್ರದ ಅನುಗುಣವಾಗಿ ನೀರಿನ ವಿಚಾರದಲ್ಲಿ ವ್ಯವಹಾರ ಮಾಡಬೇಕು. ಈಗ ಮಳೆ ಇಲ್ಲ, ಸಂಕಷ್ಟ ಇದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡು ಅಳುವುದಕ್ಕೂ ಮೊದಲೇ ನೀರು ಕೊಟ್ಟಿದ್ದೀರಿ. ಮಕ್ಕಳು ಅತ್ತಾಗ ಮಾತ್ರ ತಾಯಿ ಹಾಲು ಕೊಡೋದು. ಆದರೆ ತಮಿಳುನಾಡು ಕೇಳೋದಕ್ಕೂ ಮೊದಲೇ ನೀರು ಬಿಟ್ಟಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
Advertisement
ಸರ್ಕಾರ ಐಎನ್‌ಡಿಐಎ ಮೈತ್ರಿಗೋಸ್ಕರ ನೀರು ಬಿಡುತ್ತಿದೆ. ಸ್ಟಾಲಿನ್ ಸ್ನೇಹಕ್ಕೆ ಕರ್ನಾಟಕ ಬಲಿಯಾಗುತ್ತಿದೆ. ಕಾಂಗ್ರೆಸ್ ಮಂಡ್ಯ ಜನರಿಗೆ ಶಾಪವಾಗಿದ್ದು ತಮಿಳುನಾಡಿಗೆ ವರವಾಗುತ್ತಿದೆ. ನಿಮ್ಮ ಲಾಭಕ್ಕೆ ರಾಜ್ಯದ ಜನತೆಗೆ ನೀವು ಶಾಪ ಆಗಿದ್ದೀರಿ. ಸಂಕಷ್ಟದ ಸೂತ್ರ ಮರೆತು ನೀರು ಬಿಟ್ಟಿದ್ದೀರಿ. ಸಂಕಷ್ಟದ ಸೂತ್ರ ಬದಿಗೊತ್ತಿ ರಾಜಕೀಯ ಮಾಡುತ್ತಿದ್ದೀರಿ. ನಾಳೆ ಸರ್ವಪಕ್ಷಗಳ ಸಭೆ ಮಾಡುತ್ತಿದ್ದೀರಿ. ನಿಮ್ಮ ಪಾಪಕ್ಕೆ ಸೀಲ್ ಹಾಕಿಸಿಕೊಳ್ಳಲು. ಹೇಗೂ ಒಂದಷ್ಟು ಜನ ಹೊಗಳು ಭಟ್ಟರನ್ನು ಇಟ್ಟುಕೊಂಡಿದ್ದೀರಿ. ಅವರ ಬಳಿ ಸೀಲ್ ಹಾಕೊಸಿಕೊಳ್ಳೊಕೆ ಸಭೆ ಮಾಡುತ್ತಿದ್ದೀರಿ. ತಮಿಳುನಾಡಿಗೆ ಮೊದಲೇ ನೀರು ಬಿಟ್ಟು ಈಗ ಸಭೆ ಮಾಡಿದರೆ ಏನು ಪ್ರಯೋಜನ? ನೀರು ಬಿಡುವ ಮೊದಲೇ ಸಭೆ ಮಾಡಬೇಕಿತ್ತು. ಇದು ಕಾಂಗ್ರೆಸ್ ಕರ್ನಾಟಕಕ್ಕೆ ಮಾಡಿರುವ ಅನ್ಯಾಯ ಎಂದರು. ಇದನ್ನೂ ಓದಿ: ಆಪರೇಷನ್ ಹಸ್ತ ಬೆನ್ನಲ್ಲೇ ಯಶವಂತಪುರ ಕ್ಷೇತ್ರಕ್ಕೆ ಬಂಪರ್
ರಾಜ್ಯದಲ್ಲಿ ಉತ್ತಮ ಮಳೆ ಆಗಿದ್ದರೆ ನೀರು ಬಿಡಿ. ಆದರೆ ಬರಗಾಲದಲ್ಲೂ ನೀರು ಬಿಡುವ ಅವಶ್ಯಕತೆ ಏನಿತ್ತು? ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೀರಿ. ಶಕ್ತಿ ಯೋಜನೆ, ಗೃಹಜ್ಯೋತಿಗಳನ್ನು ತಂದಿದ್ದೀರಿ. ವಾಸ್ತವವಾಗಿ ರಾಜ್ಯದಲ್ಲಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಬಂದಮೇಲೆ ರಾಜ್ಯ ಕತ್ತಲಲ್ಲಿ ಮುಳುಗಿದೆ. ರಾಜ್ಯಕ್ಕೆ 15-16 ಸಾವಿರ ಮೆಗಾ ವ್ಯಾಟ್ ಪವರ್ ಬೇಕು. ಆದರೆ ಇಲ್ಲಿ ಉತ್ಪಾದನೆಯೇ ಆಗುತ್ತಿಲ್ಲ. ಕೇವಲ 8-9 ಸಾವಿರ ಮೆಗಾವ್ಯಾಟ್ ಉತ್ಪಾದನೆ ಆಗುತ್ತಿದೆ. ರಾಜ್ಯ ಕತ್ತಲಲ್ಲಿ ಮುಳುಗಿದೆ. ಆದರೆ ಉಚಿತ ಕರೆಂಟ್ ಹಾಸ್ಯಾಸ್ಪದ. ಮೊದಲು ಉತ್ಪಾದನೆ ಮಾಡಿ, ಬಳಿಕ ಉಚಿತ ವಿದ್ಯುತ್ ಕೊಡಿ ಎಂದು ಹೇಳಿದರು.
ಕಾಂಗ್ರೆಸ್ ಕಾಲ್ಗುಣ ರಾಜ್ಯದಲ್ಲಿ ಮಳೆ ಆಗುತ್ತಿಲ್ಲ. ಅದು ಕಾಕತಾಳೀಯವೋ ಅಥವಾ ಪ್ರಕೃತಿಯೋ ಗೊತ್ತಿಲ್ಲ. ಮೊದಲೇ ಇವಕ್ಕೆ ದೇವರ ಮೇಲೆ ನಂಬಿಕೆ ಇಲ್ಲ. ಮತ್ತೆ ದೇವರು ಹೇಗೆ ಮಳೆಬೆಳೆ ಕೊಡ್ತಾನೆ? ಅದು ನಂಬಿಕೆಯೋ ಅಥವಾ ಮೂಢನಂಬಿಕೆಯೋ ಗೊತ್ತಿಲ್ಲ. ದೇವರ ಮೇಲೆ ಭಯಭಕ್ತಿ ಇಲ್ಲದ ಇವರ ಕಾಲ್ಗುಣ ಇದು. ಕಾಂಗ್ರೆಸ್ ಸರ್ಕಾರಕ್ಕೆ ಶ್ವೇತ ಪತ್ರದ ಅವ್ಯಶ್ಯಕತೆ ಇಲ್ಲ. ಜಿಲ್ಲಾಧಿಕಾರಿ ಕಾರಿಗೆ ಡೀಸೆಲ್ ಇಲ್ಲ, ಮಕ್ಕಳಿಗೆ ಮೊಟ್ಟೆ ಇಲ್ಲ. ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಸಂಬಳವೇ ಇಲ್ಲ. ಇನ್ನೂ ಎಣ್ಣೆ ರೇಟ್ ಹೇಗಿದೆ ಅಂತ ಕುಡಿಯುವವರಿಗೆ ಗೊತ್ತು, ನನಗೆ ಗೊತ್ತಿಲ್ಲ. ಮಧ್ಯಮವರ್ಗದವರಿಗೆ ಈ ಸರ್ಕಾರ ಬರೆ ಮೇಲೆ ಬರೆ ಹಾಕ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಹಿಳಾ ಪ್ರಯಾಣಿಕರಿಂದ ಕೆಕೆಆರ್‌ಟಿಸಿ ಆದಾಯ ಭಾರೀ ಏರಿಕೆ
Web Stories