– ವಿಜ್ಞಾನಿಗಳ ಟೀಕಿಸೋ ಭರದಲ್ಲಿ ಮಂಗಳಯಾನ-3 ಅಂತ ಉಲ್ಲೇಖಿಸಿ ಪೇಚಿಗೆ ಸಿಲುಕಿದ ಪ್ರಗತಿಪರರು
ಬೆಂಗಳೂರು: ಚಂದ್ರಯಾನ-3 (Chandrayaan-3) ಯಶಸ್ಸಿಗಾಗಿ ತಿರುಪತಿಗೆ ತೆರಳಿ ದೇವರಲ್ಲಿ ಪ್ರಾರ್ಥಿಸಿದ ಇಸ್ರೋ ವಿಜ್ಞಾನಿಗಳ ನಡೆಗೆ ಪ್ರಗತಿಪರ ಚಿಂತಕರು ಖಂಡನೆ ವ್ಯಕ್ತಪಡಿಸಿದ್ದಾರೆ.
Advertisement
ಚಂದ್ರಯಾನಕ್ಕೂ ಮುನ್ನ ವಿಜ್ಞಾನಿಗಳು ನಿನ್ನೆ ತಿರುಪತಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ ಚಂದ್ರಯಾನ-3 ಯಶಸ್ಸಿಗಾಗಿ ಪ್ರಾರ್ಥಿಸಿದ್ದರು. ಈ ಸುದ್ದಿ ವೈರಲ್ ಆಗಿತ್ತು. ವಿಜ್ಞಾನಿಗಳ ನಡೆಗೆ ಪ್ರಗತಿಪರರು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಚಂದ್ರಯಾನ-3 ಯಶಸ್ವಿ ಆಗಲೆಂದು ತಿರುಪತಿಯಲ್ಲಿ ಪೂಜೆ ಸಲ್ಲಿಸಿದ ಇಸ್ರೋ ವಿಜ್ಞಾನಿಗಳು
Advertisement
Advertisement
Advertisement
ಈ ಬಗ್ಗೆ ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಪೋಸ್ಟ್ ಹಾಕಿ ಹಿರಿಯ ಸಾಹಿತಿ ಸನತ್ ಕುಮಾರ್ ಬೆಳಗಲಿ ಆಕ್ರೋಶ ಹೊರಹಾಕಿದ್ದಾರೆ. ಪ್ರಪಂಚದಲ್ಲೇ ಖ್ಯಾತಿ ಹೊಂದಿರುವ ಇಸ್ರೋದಂತಹ ಸರ್ಕಾರಿ ಸ್ವಾಮ್ಯ ಸಂಸ್ಥೆ ನಡೆ ಸಾಮಾನ್ಯ ಜನರ ದಿಕ್ಕು ತಪ್ಪಿಸುವಂತಿದೆ ಎಂದು ಟೀಕಿಸಿದ್ದಾರೆ.
ತಾವೇ ಪರೀಕ್ಷಿಸಿ, ಸಂಶೋಧಿಸಿ ರೂಪಿಸಿರುವ ಯಾನದ ಬಗ್ಗೆ ತಮಗೆ ನಂಬಿಕೆ ಇಲ್ಲ ಎಂಬುದನ್ನ ಈ ಮೂಲಕ ಸಾಬೀತುಮಾಡಿದ್ದಾರೆ. ಇದರಿಂದ ಆತ್ಮಸ್ಥೈರ್ಯ ಮತ್ತು ಸಂಶೋಧನೆಗಳ ಬಗೆಗೆ ಇರುವ ಅನುಮಾನಗಳು ವ್ಯಕ್ತವಾಗುತ್ತೆ. ಈ ನಿಟ್ಟಿನಲ್ಲಿ ಈ ಕೃತ್ಯವು ಖಂಡನರ್ಹವಾಗಿದೆ ಎಂದು ಪತ್ರದಲ್ಲಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಚಂದ್ರಯಾನ-3 ಗಗನನೌಕೆ ಉಡಾವಣೆಗೆ ಕೌಂಟ್‌ಡೌನ್
ಪತ್ರದ ಕೆಳಗೆ ಹಿರಿಯ ಸಾಹಿತಿಗಳಾದ ಮೂಡ್ನಾಕೂಡು ಚಿನ್ನಸ್ವಾಮಿ, ಪ್ರೊ.ಅಲ್ಲಮಪ್ರಭು ಬೆಟ್ಟದೂರು, ವೆಂಕಟಯ್ಯ ಅಪ್ಪಗೆರೆ, ಸನತ್ ಕುಮಾರ್ ಬೆಳಗಲಿ, ಎಲ್.ಎನ್.ಮುಕುಂದರಾಜ್, ಆರ್.ಎನ್.ರಾಜಾನಾಯಕ್, ಕೆ.ಬಿ.ಮಹದೇವಪ್ಪ, ನಾಗೇಶ್ ಅರಳಕುಪ್ಪೆ, ಹುಲಿಕುಂಟಿಮೂರ್ತಿ, ಹೆಚ್.ಕೆ.ವಿವೇಕಾನಂದ, ಹೆಚ್.ಕೆ.ಎಸ್.ಸ್ವಾಮಿ, ಡಿ.ಎಂ.ಮಂಜುನಾಥಸ್ವಾಮಿ, ಕೆ.ಮಹಂತೇಶ್, ಡಾ.ಕೆ.ಎನ್.ನಾಗೇಶ್, ಪ್ರಭಾ ಬೆಳವಂಗಲ, ಆಲ್ಬೂರು ಶಿವರಾಜ ಹೆಸರನ್ನು ಉಲ್ಲೇಖಿಸಲಾಗಿದೆ.
ಮಂಗಳಯಾನ-3 ಅಂತ ತಪ್ಪಾಗಿ ಉಲ್ಲೇಖ
ಇಸ್ರೋ ಇಂದು ಉಡಾವಣೆ ಮಾಡುತ್ತಿರುವುದು ಚಂದ್ರಯಾನ-3 ಗಗನನೌಕೆ. ಆದರೆ ಇಸ್ರೋ ವಿಜ್ಞಾನಿಗಳನ್ನು ಟೀಕಿಸುವ ಭರದಲ್ಲಿ ಪ್ರಗತಿಪರ ಚಿಂತಕರು ಪೇಚಿಗೆ ಸಿಲುಕಿದ್ದಾರೆ. ಚಂದ್ರಯಾನ-3 ಬದಲಿಗೆ ಮಂಗಳಯಾನ-3 ಎಂದು ತಪ್ಪಾಗಿ ಉಲ್ಲೇಖಿಸಿದ್ದಾರೆ. ಈ ತಪ್ಪಿಗೆ ಪ್ರಗತಿಪರ ಚಿಂತಕರನ್ನು ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
Web Stories