ಬೆಂಗಳೂರು: ಮೇ 11 ಅಂದ್ರೆ ನಾಡಿದ್ದು ಗುರುವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ.
ಮೇ 11ರಂದು ವೆಬ್‍ಸೈಟ್‍ನಲ್ಲಿ ಪಿಯುಸಿ ಫಲಿತಾಂಶ ಲಭ್ಯವಿರಲಿದ್ದು, ಮೇ 12ಕ್ಕೆ ಆಯಾ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟ ಮಾಡಲಾಗುತ್ತದೆ.
Advertisement
ಆರಂಭದಲ್ಲಿ ಬುಧವಾರ ಫಲಿತಾಂಶ ಪ್ರಕಟವಾಗಲಿದೆ ಎನ್ನುವ ಸುದ್ದಿ ಮೂಲಗಳಿಂದ ಸಿಕ್ಕಿತ್ತು. ಆದರೆ ಈಗ ಅಧಿಕೃತವಾಗಿ ಪಿಯು ಬೋರ್ಡ್ ನಿಂದ ಗುರುವಾರ ಫಲಿತಾಂಶ ಪ್ರಕಟವಾಗಲಿದೆ ಎನ್ನುವ ಸುದ್ದಿ ಪ್ರಕಟವಾಗಿದೆ.
Advertisement
ಮಾರ್ಚ್ 9ರಿಂದ 27 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲಾಗಿತ್ತು. ಈ ವರ್ಷ 6 ಲಕ್ಷದ 84 ಸಾವಿರದ 490 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದಾರೆ. ಇದ್ರಲ್ಲಿ 3 ಲಕ್ಷದ 48 ಸಾವಿರದ 562 ವಿದ್ಯಾರ್ಥಿಗಳು ಹಾಗೂ 3 ಲಕ್ಷದ 35 ಸಾವಿರದ 909 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದಾರೆ. 19 ಜನ ತೃತೀಯ ಲಿಂಗಿಗಳು ಪರೀಕ್ಷೆ ಬರೆದಿರೋದು ವಿಶೇಷ.
Advertisement
ಕಳೆದ ವರ್ಷ ಪೇಪರ್ ಲೀಕ್‍ನಿಂದಾದ ಸಮಸ್ಯೆಯಿಂದ ಎಚ್ಚೆತ್ತ ಪಿಯುಸಿ ಬೋರ್ಡ್ ಈ ವರ್ಷ ಭಾರೀ ಭದ್ರತೆಯೊಂದಿಗೆ ಪರೀಕ್ಷೆ ನಡೆಸಿತ್ತು. ಕರ್ನಾಟಕ ಸೆಕ್ಯೂರ್ ಎಕ್ಸಾಂಮೀನೇಷನ್ ಸಿಸ್ಟಮ್ ಪ್ರೋಗ್ರಾಂ ಅಳವಡಿಸಿಕೊಂಡಿದ್ದು, ಜಿಲ್ಲಾ ಖಜಾನೆಗಳಿಗೆ ಸಿಸಿಟಿವಿ, ಮ್ಯಾಗ್ನೆಟಿಕ್ ಡೋರ್ಗಳು, ಬಯೋ ಮೆಟ್ರಿಕ್ ಪದ್ಧತಿ ಸೇರಿದಂತೆ ಇನ್ನಿತರ ಹೈ ಸೆಕ್ಯುರಿಟಿ ಸಿಸ್ಟಮ್ ಅಳವಡಿಕೆ ಮಾಡಲಾಗಿತ್ತು.