Connect with us

Latest

ಉತ್ತರಪ್ರದೇಶದಲ್ಲಿ ಕರ್ನಾಟಕ ಐಎಎಸ್ ಅಧಿಕಾರಿಯ ನಿಗೂಢ ಸಾವು

Published

on

– ಜನ್ಮದಿನದಂದೇ ಶವವಾಗಿ ಪತ್ತೆಯಾದ ಅನುರಾಗ್ ತಿವಾರಿ

ಲಕ್ನೋ: ಕರ್ನಾಟಕ ಕೇಡರ್‍ನ ಐಎಎಸ್ ಅಧಿಕಾರಿಯೊಬ್ಬರು ಉತ್ತರಪ್ರದೇಶದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ

36 ವರ್ಷದ ಅನುರಾಗ್ ತಿವಾರಿ ಅವರ ಶವ ಉತ್ತರಪ್ರದೇಶದ ಹಜರತ್‍ಗಂಜ್‍ನಲ್ಲಿ ಪತ್ತೆಯಾಗಿದೆ. ಅನುರಾಗ್ ತಿವಾರಿ ಅವರ ಜನ್ಮದಿನವಾದ ಇಂದೇ ಇಲ್ಲಿನ ಮೀರಾ ಬಾಯಿ ಗೆಸ್ಟ್‍ಹೌಸ್ ಬಳಿ ಶವವಾಗಿ ಪತ್ತೆಯಾಗಿದ್ದಾರೆ. 2007ನೇ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿರುವ ಇವರು ಸದ್ಯ ಆಹಾರ ಸರಬರಾಜು ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ರು. ಉತ್ತರಪ್ರದೇಶದ ಬಾಹ್ರಿಯಾಚ್‍ನಲ್ಲಿ ನೆಲೆಸಿದ್ದು, ಎರಡು ದಿನಗಳಿಂದ ಮೀರಾಬಾಯಿ ಗೆಸ್ಟ್‍ಹೌಸ್‍ನಲ್ಲಿ ತಂಗಿದ್ರು ಎಂದು ವರದಿಯಾಗಿದೆ.

ತಿವಾರಿ ಅವರ ಗಲ್ಲದ ಮೇಲೆ ಗಾಯದ ಗುರುತು ಪತ್ತೆಯಾಗಿದೆ. ಸದ್ಯ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನುರಾಗ್ ತಿವಾರಿ ಈ ಹಿಂದೆ ಬೀದರ್, ಕೊಡಗು ಜಿಲ್ಲಾಧಿಕಾರಿಯಾಗಿ, ತುಮಕೂರು ಪಾಲಿಕೆ ಆಯುಕ್ತರಾಗಿ, ಮಧುಗಿರಿ ಎಸಿಯಾಗಿ, ರಾಜ್ಯ ಹಣಕಾಸು ಇಲಾಖೆಯ ಉಪಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ರು.

ಪಬ್ಲಿಕ್ ಟಿವಿಗೆ ಸಿಕ್ಕ ಮೂಲಗಳ ಮಾಹಿತಿ ಪ್ರಕಾರ ಅನುರಾಗ್ ತಿವಾರಿ ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದಿದ್ದು, ಮಾನಸಿಕವಾಗಿ ವಿಚಲಿತವಾಗಿದ್ದರು. ಇದೀಗ ಮನೆಯವರ ಒತ್ತಾಯದ ಮೇರೆಗೆ 2ನೇ ಮದುವೆಯಾಗಲು ಒಪ್ಪಿ, ಅದೇ ಕಾರಣಕ್ಕಾಗಿ 4 ವಾರ ರಜೆ ಪಡೆದು ಉತ್ತರಪ್ರದೇಶಕ್ಕೆ ಹುಡುಗಿ ಹುಡುಕಲು ತೆರಳಿದ್ದರು ಎನ್ನಲಾಗಿದೆ. ಮಂಗಳವಾರದಂದು ಮೀರಾಬಾಯಿ ಗೆಸ್ಟ್ ಹೌಸ್‍ನ ಎಲ್‍ಡಿಎವಿಸಿ ಪ್ರಭುನಾರಾಯಣ್ ಅವರ ಕೊಠಡಿಯಲ್ಲಿ ಉಳಿದಿದ್ರು. ಆದ್ರೆ ಇಂದು ಬೆಳಗ್ಗೆ 8 ಗಂಟೆಗೆ ವಾಕಿಂಗ್ ಹೋಗಿದ್ದ ಅನುರಾಗ್ ತಿವಾರಿ ಶವವಾಗಿ ಪತ್ತೆಯಾಗಿದ್ದಾರೆ.

Click to comment

Leave a Reply

Your email address will not be published. Required fields are marked *