ಬೆಂಗಳೂರು: ಹನಿಟ್ರ್ಯಾಪ್ (Honey Trap) ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಸಹಕಾರ ಸಚಿವ ರಾಜಣ್ಣ (Rajanna) ದೂರು ನೀಡುವ ಸಾಧ್ಯತೆಯಿದೆ.
ಕಳೆದ ಮೂರು ದಿನಗಳಿಂದ ಪ್ರಕರಣ ದಾಖಲಿಸಲು ಮನಸ್ಸು ಮಾಡದೇ ಇದ್ದ ರಾಜಣ್ಣಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ (CM Siddaramaiah) ಅಭಯ ಹಸ್ತ ನೀಡಿದ್ದು, ಮಂಗಳವಾರ ಪ್ರಕರಣ ದಾಖಲು ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಪತ್ನಿಗೆ 9 ಕೋಟಿ ಜೀವನಾಂಶ, ತಿಂಗಳಿಗೆ 4 ಲಕ್ಷ – ಭಾರೀ ಸಂಚಲನ ಸೃಷ್ಟಿಸಿದ ಟೆಕ್ಕಿ ಪೋಸ್ಟ್
ಪ್ರಕರಣ ದಾಖಲಾದ ಬಳಿಕ ಅಧಿಕೃತ ತನಿಖೆ ಪ್ರಾರಂಭ ಆಗಲಿದೆ. ಮಾಹಿತಿಯ ಪ್ರಕಾರ ವಿಶೇಷ ತನಿಖಾ ತಂಡ (SIT)ಮೂಲಕವೇ ತನಿಖೆ ಮಾಡಿಸುವ ಸಾಧ್ಯತೆ ಇದೆ.
ಕಳೆದ ಮೂರು ತಿಂಗಳಿಂದ ತುಮಕೂರು (Tumakuru) ಮತ್ತು ಬೆಂಗಳೂರಿನ (Bengaluru) ವಿವಿಧ ಭಾಗದಲ್ಲಿ ಈ ಪ್ರಯತ್ನ ನಡೆದಿದೆ ಎನ್ನಲಾಗಿದ್ದು, ತನಿಖೆ ದೃಷ್ಟಿಯಿಂದ ಎಸ್‌ಐಟಿ ರಚನೆಗೆ ಸರ್ಕಾರ ಮುಂದಾಗಿದೆ.