ಬೆಂಗಳೂರು: ಹಿಜಬ್ ವಿವಾದದ ಬಗ್ಗೆ ಹೈಕೋರ್ಟ್‍ನ ಪೂರ್ಣ ಪೀಠದಲ್ಲಿ ಮೂರನೇ ದಿನವೂ ವಿಚಾರಣೆ ನಡೀತು. ಹೈಕೋರ್ಟ್‍ನ ಮಧ್ಯಂತರ ಆದೇಶದಿಂದ ಮೂಲಭೂತ ಹಕ್ಕು ಅಮಾನತು ಆಗಿದೆ. ಹೀಗಾಗಿ ಮಧ್ಯಂತರ ಆದೇಶ ಬದಲಿಸಿ, ಸಮವಸ್ತ್ರದ ಜೊತೆಗೆ ಹಿಜಬ್‍ಗೂ ಅವಕಾಶ ಕೊಡಬೇಕು ಅಂತ ಅರ್ಜಿದಾರರ ಪರ ವಕೀಲ ದೇವದತ್ತ ಕಾಮತ್ ವಾದ ಮುಗಿಸಿದ್ರು. ಇದನ್ನೂ ಓದಿ: ಎಷ್ಟು ದಿನ ಇರ್ತೀನೋ ಗೊತ್ತಿಲ್ಲ, ಮಾತಾಡೋಕೆ ಅವಕಾಶ ಕೊಡಿ: ಪರಿಷತ್‍ನಲ್ಲಿ ಸಿ.ಎಂ. ಇಬ್ರಾಹಿಂ ಅಳಲು!
Advertisement
ಇದಕ್ಕೂ ಮುನ್ನ ಸಾರ್ವಜನಿಕ ಸುವ್ಯವಸ್ಥೆ ಎಂಬ ಸರ್ಕಾರದ ಬಗ್ಗೆ ವಾದ ಮುಂದುವರಿಸಿದ ಅರ್ಜಿದಾರ ಪರ ವಕೀಲರು, ಸಾರ್ವಜನಿಕ ಸುವ್ಯವಸ್ಥೆ ಭಾಷಾಂತರ ಕುರಿತ ಸರ್ಕಾರದ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ರು. ‘ಸಾರ್ವಜನಿಕ ಸುವ್ಯವಸ್ಥೆ’ ಎಂಬ ಪದದ ಬಗ್ಗೆ ಸರ್ಕಾರದ ಭಾಷಾಂತರಕ್ಕೆ ಆಕ್ಷೇಪಿಸಿದರು. ಇದನ್ನೂ ಓದಿ: ಹಿಜಬ್ ತೆಗೆಯಿರಿ ಅನ್ನೋದಕ್ಕೆ ಹೆತ್ತವರಿಗೆ ರೈಟ್ಸ್ ಇಲ್ಲ, ಅವನ್ಯಾವನು ಹೇಳೋಕೆ: ಶಿಕ್ಷಕರ ವಿರುದ್ಧ ವಿದ್ಯಾರ್ಥಿನಿಯರು ರೆಬೆಲ್
Advertisement
Advertisement
ಸಂವಿಧಾನದಲ್ಲಿ ಹೇಳಿದ ಅರ್ಥ ಬಿಟ್ಟು ಬೇರೆ ಅರ್ಥ ಹೇಳಲಾಗದು. ಸಾರ್ವಜನಿಕ ಸುವ್ಯವಸ್ಥೆ ಕಾರಣ ಕೊಟ್ಟು, ಹಕ್ಕುಗಳನ್ನು ನಿರ್ಬಂಧಿಸುವಂತಿಲ್ಲ ಅಂತ ಸುಪ್ರೀಂಕೋರ್ಟ್ ತೀರ್ಪು ಹೇಳಿದೆ. ಮೂಗುತಿ ವಿಚಾರದಲ್ಲಿ ದಕ್ಷಿಣ ಆಫ್ರಿಕಾದ ಶಾಲೆ ಹಾಕಿದ್ದ ನಿರ್ಬಂಧವನ್ನು ಕೋರ್ಟ್ ವಜಾ ಮಾಡಿತ್ತು ಎಂದು ತಿಳಿಸಿದ್ರು. ಹಿಜಬ್ ಧರಿಸುವುದರಿಂದ ಗಲಾಟೆ ಆಗುತ್ತದೆ ಎಂದು ಸರ್ಕಾರ ಹೇಳುವುದಾದರೆ, ಅದು ಒಪ್ಪತಕ್ಕ ವಾದ ಅಲ್ಲ. ನಮ್ಮ ದೇಶದ್ದು ಸಕಾರಾತ್ಮಕ ಜಾತ್ಯಾತೀತತೆ. ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಧಾರ್ಮಿಕ ಹಕ್ಕು ನಿರ್ಬಂಧಕ್ಕೆ ಸರ್ಕಾರಕ್ಕೆ ಅಧಿಕಾರ ಇಲ್ಲ ಅಂತ ಕಾಮತ್ ವಾದಿಸಿದ್ರು.
Advertisement
ಮತ್ತೊಂದು ಅರ್ಜಿಯಲ್ಲಿ ವಾದ ಮಂಡಿಸಿದ ರವಿವರ್ಮ ಕುಮಾರ್, ಸರ್ಕಾರ ಸಮಸವ್ತ್ರದ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಉನ್ನತ ಮಟ್ಟದ ಸಮಿತಿ ರಚಿಸಿದೆ. ಸರ್ಕಾರ ಹಿಜಬ್ ಮೇಲೆ ನಿರ್ಬಂಧ ಹೇರಿಲ್ಲ. ಯೂನಿಫಾರಂ ಅನ್ನು ಕಾಲೇಜು ಸಮಿತಿ ನಿರ್ಧರಿಸಲಿದೆ ಅಂತಷ್ಟೇ ಹೇಳಲಾಗಿದೆ ಅಂದ್ರು. ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿಗಳ ಪೂರ್ಣ ಪೀಠ ನಾಳೆ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿತು.