ಉಡುಪಿ: ಹಿಜಬ್ ಹಕ್ಕಿಗಾಗಿ ಕಾಲೇಜಿನಲ್ಲಿ ರಾಜ್ಯವ್ಯಾಪಿ ಹೋರಾಟ ಆರಂಭವಾಗಿದೆ. ಕಾಲೇಜು ಆವರಣದಲ್ಲಿ ಕೇಸರಿ ಮತ್ತು ಹಿಜಬ್ ತಿಕ್ಕಾಟ ಪ್ರತಿದಿನ ನಡೆಯುತ್ತಿದೆ. ಪ್ರೊಟೆಸ್ಟ್ ಫೀಲ್ಡಿಗೆ ಮುಸಲ್ಮಾನ ಒಕ್ಕೂಟ, ಪ್ರಗತಿಪರ ಪಿಎಫ್‍ಐ ಎಸ್ ಡಿಪಿಐ ಸಂಘಟನೆಗಳು ಇಂದಿನಿಂದ ಎಂಟ್ರಿ ಆಗಲಿವೆ.
Advertisement
ಹಿಜಬ್ ಧರಿಸುವ ವಿಚಾರಕ್ಕೆ ಶಿಕ್ಷಣ ಸಂಸ್ಥೆಯೊಳಗೆ ಕಳೆದ ಒಂದೂವರೆ ತಿಂಗಳಿಂದ ತಿಕ್ಕಾಟ ನಡೆಯುತ್ತಿದೆ. ಹತ್ತಕ್ಕೂ ಹೆಚ್ಚು ಬಾರಿ ಸಂಧಾನ ಸಭೆಗಳು ನಡೆದಿದ್ರು ಪ್ರಯೋಜವಾಗಿಲ್ಲ. ಇಷ್ಟುದಿನ ಕಾಲ ವಿದ್ಯಾರ್ಥಿಗಳ ಮಧ್ಯೆ ನಡೆಯುತ್ತಿದ್ದ ಪ್ರತಿಭಟನೆ. ಇವತ್ತು ಸಾರ್ವಜನಿಕ ವಲಯದಲ್ಲಿ ಶುರುವಾಗಲಿದೆ.
Advertisement
Advertisement
ಕಳೆದ ಒಂದು ವಾರದಿಂದ ಕಾಲೇಜು ಕಾಂಪೌಂಡ್‍ನಿಂದ ಹೊರಗೂ ಹಗ್ಗ-ಜಗ್ಗಾಟ ನಡೆಯುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಹಿಜಬ್ ಕೇಸರಿ ಶಾಲು ತೊಟ್ಟು ನಾಲ್ಕಾರು ಮೆರವಣಿಗೆಯಾಗಿದೆ. ಪರ-ವಿರೋಧ ಘೋಷಣೆಗಳು ಮೊಳಗಿವೆ. ಇದೀಗ ಈ ಪ್ರತಿಭಟನೆಗೆ ಪೋಷಕರು ಕೂಡ ಇಳಿಯಲಿದ್ದಾರೆ. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಎಸ್‍ಡಿಪಿಐ, ಜಿಲ್ಲಾ ಮುಸ್ಲಿಮ್ ಒಕ್ಕೂಟ, ಪ್ರಗತಿಪರ ಸಂಘಟನೆಗಳು ಹಿಜಬ್ ಹೋರಾಟಗಾರ್ತಿಯರಿಗೆ ಅವರ ಕುಟುಂಬಕ್ಕೆ ಬೆಂಬಲ ನೀಡಿವೆ.
Advertisement
ಜಿಲ್ಲಾ ಕೇಂದ್ರ ಸಹಿತ ಪ್ರತಿ ತಾಲೂಕಿನಲ್ಲಿ ಪ್ರತಿಭಟನೆ ಮಾಡಲು ನಿರ್ಧಾರ ಮಾಡಲಾಗಿದೆ. ಬಾಹ್ಯ ಪ್ರತಿಭಟನೆಯ ಜೊತೆ ತಾಲೂಕಿನ ಬೇರೆಬೇರೆ ವಿದ್ಯಾರ್ಥಿಗಳು, ಮುಸ್ಲಿಂ ಸಮುದಾಯದ ಮುಖಂಡರು ಕಾನೂನು ಹೋರಾಟಕ್ಕೂ ಸಿದ್ಧತೆ ನಡೆಸಲಾಗಿದೆ. ಇದನ್ನೂ ಓದಿ: ಧರ್ಮವನ್ನು ಮನೆಗಳಲ್ಲಿ ಆಚರಿಸಿ, ಶಿಕ್ಷಣಕ್ಕೆ ತರಬೇಡಿ: ಸುರಯ್ಯ ಅಂಜುಮ್