ಬೆಂಗಳೂರು: ರಾಜ್ಯದಲ್ಲಿ ಧರ್ಮ ಸಂಘರ್ಷಕ್ಕೆ ಕಾರಣವಾಗಿದ್ದ ಹಿಜಬ್ ವಿವಾದದ ತೀರ್ಪು ಇಂದು ಪ್ರಕಟವಾಗಲಿದೆ. ಹಿಜಬ್ ಧಾರ್ಮಿಕ ಹಕ್ಕಿಗಾಗಿ ಹೈಕೋರ್ಟ್ ಮೆಟ್ಟಿಲೇರುವ ವಿದ್ಯಾರ್ಥಿಗಳು ಮತ್ತು ಇಡೀ ದೇಶ ಹೈಕೋರ್ಟ್ ತೀರ್ಪಿನ ಮೇಲೆ ಕಣ್ಣಿಟ್ಟಿದೆ.
ರಾಜ್ಯದಲ್ಲಿ ಹಿಜಬ್ ವಿವಾದದ ಕಿಡಿ ಹೊತ್ತಿದ್ದೇ ಉಡುಪಿಯ ಸರ್ಕಾರಿ ಪಿಯು ಕಾಲೇಜಿನಿಂದ. 2021 ಡಿಸೆಂಬರ್ ತಿಂಗಳಿನಲ್ಲಿ ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಹಿಜಬ್ ಬೇಡಿಕೆ ಶುರುವಾಗಿತ್ತು. ಮನವಿ ಪತ್ರಗಳಿಗೆ ಪುರಸ್ಕಾರ ನೀಡದ ಪ್ರಾಂಶುಪಾಲರು, ಹಿಜಬ್ ಧರಿಸಿದ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರಗೆ ಹಾಕಿದ್ದರು. ಡಿಸೆಂಬರ್ 31ಕ್ಕೆ ವಿದ್ಯಾರ್ಥಿನಿಯರು ಕಾಲೇಜಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
Advertisement
Advertisement
ಇದಾಗಿ ಒಂದು ತಿಂಗಳ ನಂತರ ಅಂದ್ರೆ ಜನವರಿ 31ರಂದು ಹೈಕೋರ್ಟ್‍ನಲ್ಲಿ ವಿದ್ಯಾರ್ಥಿನಿ ಅಲ್ಮಾಸ್ ದೂರು ನೀಡಿದ್ದರು. ಇದಾದ ಬಳಿಕ ರಾಜ್ಯದಲ್ಲಿ ಧರ್ಮ ಸಂಘರ್ಷವೇ ಶುರುವಾಯ್ತು. ಇಷ್ಟೆಲ್ಲ ವಿವಾದ ಎಬ್ಬಿಸಿರುವ ಹಿಜಬ್ ಕುರಿತ ತೀರ್ಪು ಬರಲಿದೆ. ತೀರ್ಪು ಯಾರ ಪರವೇ ಬಂದರೂ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.
Advertisement
Advertisement
ಹೇಗಿತ್ತು ವಾದ- ಪ್ರತಿವಾದ..?
ಕಾಲೇಜಿಗೆ ದಾಖಲಾದಾಗಿನಿಂದ ಹಿಜಬ್ ಧರಿಸ್ತಿದ್ದಾರೆ. ಸಮವಸ್ತ್ರ ಬಣ್ಣದ ಹಿಜಬ್‍ನ್ನೇ ಧರಿಸ್ತಿದ್ದಾರೆ. ಹಿಜಬ್, ಬುರ್ಖಾ ಧರಿಸಬೇಕು ಎಂದು ಧರ್ಮಗ್ರಂಥದಲ್ಲಿ ಇದೆ. ಶಾಸಕರಿಗೆ ಸಮವಸ್ತ್ರದ ಅಧಿಕಾರ ನೀಡಿದ್ದು ಸರಿಯಲ್ಲ. ಸರ್ಕಾರ ತನ್ನ ಜವಾಬ್ದಾರಿಯನ್ನು ಇತರರಿಗೆ ಹಸ್ತಾಂತರ ಮಾಡುವಂತಿಲ್ಲ. ಕೇರಳ, ಮದ್ರಾಸ್, ಬಾಂಬೆ ಕೋರ್ಟ್‍ಗಳ ತೀರ್ಪನ್ನು ಉಲ್ಲೇಖಿಸಿ ವಿದ್ಯಾರ್ಥಿ ಪರ ವಕೀಲ ದೇವದತ್ ಕಾಮತ್ ವಾದ ಮಂಡಿಸಿದ್ದರು.
ಕಾಲೇಜು ಅಭಿವೃದ್ಧಿಗೆ ಶಾಸನಬದ್ಧ ಅಧಿಕಾರವಿಲ್ಲ. ಸರ್ಕಾರ ತನ್ನ ಅಧಿಕಾರವನ್ನು ಗೆ ಹಸ್ತಾಂತರಿಸಲು ಸಾಧ್ಯವಿಲ್ಲ. ಶಾಸಕರ ನೇತೃತ್ವದ ಅಭಿವೃದ್ಧಿ ಸಮಿತಿ ಸಮರ್ಥಿಸಿಕೊಂಡಿದ್ದಾರೆ. ಸಿಡಿಸಿಯ ಇತರೆ ಸದಸ್ಯರನ್ನು ಶಾಸಕರೇ ಆಯ್ಕೆ ಮಾಡುತ್ತಾರೆ. ಶಾಸಕರಿಗೆ ಕಾಲೇಜಿನ ಆಡಳಿತ ನೀಡುವುದೇ ಕಾನೂನುಬಾಹಿರ ಎಂದು ಅರ್ಜಿದಾರರ ಪರ ವಕೀಲ ರವಿವರ್ಮ ಕುಮಾರ್ ವಾದಿಸಿದ್ದರು. ಇದನ್ನೂ ಓದಿ: ತೀರ್ಪು ಏನೇ ಬಂದ್ರೂ ಗೌರವಿಸಿ, ಶಾಂತಿ ಕಾಪಾಡಿ: ಗೃಹ ಸಚಿವರ ಮನವಿ
ಸಿಡಿಸಿ 1983ರ ಶಿಕ್ಷಣ ಕಾಯ್ದೆಯ ಅನುಗುಣವಾಗಿ ಸಮವಸ್ತ್ರ ಜಾರಿಗೆ ತಂದಿದೆ. ಸಮವಸ್ತ್ರ ಜಾರಿಗೆ ತರೋದು ಸಮಾನತೆಗಾಗಿ. ಸಿಡಿಸಿಗೆ ಸಮವಸ್ತ್ರ ಜಾರಿಗೆ ತರುವ ಅವಕಾಶ 2014ರಲ್ಲಿ ಒಪ್ಪಿಗೆ ಇತ್ತು. ಸಿಡಿಸಿಗೆ ಕಾಲೇಜಿನ ಅಭಿವೃದ್ಧಿ ಸಮಿತಿ, ಕಾಲೇಜಿನ ಬಗ್ಗೆ ತೀರ್ಮಾನಿಸುವ ಅಧಿಕಾರವಿದೆ. ಸಿಡಿಸಿಯಲ್ಲಿ ಒಬ್ಬರೇ ಅಧಿಕಾರ ಚಲಾಯಿಸುವುದಿಲ್ಲ. ಶಾಲೆಯ ಮಕ್ಕಳು, ಪೋಷಕರು, ಶಾಸಕರು, ಉಪನ್ಯಾಸಕರು ಎಲ್ಲರೂ ಇರ್ತಾರೆ ಎಂದು ಶಾಲಾ ಆಡಳಿತ ಮಂಡಳಿ ಪರ ವಕೀಲ ಸಜ್ಜನ್ ಪೂವಯ್ಯ ವಾದಿಸಿದ್ದರು.
ಸರ್ಕಾರಿ ಪರ ವಕೀಲ ಪ್ರಭುಲಿಂಗ ನಾವಡಗಿ ಅವರು, ವಿದ್ಯಾರ್ಥಿನಿಯರು, ಹಿಜಬ್ ಧರಿಸುವುದು ಧಾರ್ಮಿಕ ಆಚರಣೆಯಾಗಿದೆ ಎಂಬುದನ್ನು ಸಾಬೀತುಪಡಿಸಿಲ್ಲ. ಸಮವಸ್ತ್ರ ಸಂಹಿತೆಯ ಸರ್ಕಾರದ ವಾದಕ್ಕೆ ಹೆಚ್ಚಿನ ತೂಕವಿದೆ. ವಿಷಯವು ಧರ್ಮದ ಮೂಲ ಅಂಶದ ಭಾಗವಾಗಿದ್ದರೆ ಮಾತ್ರ ಆಚರಣೆ ಕಡ್ಡಾಯವಾಗುತ್ತದೆ. ಈ ಪ್ರಕರಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ವಾದ ಮಂಡಿಸಲಾಗ್ತಿದೆ ಎಂದು ಪ್ರತಿವಾದ ಮಾಡಿದ್ದರು.