ಉಡುಪಿ: ಪ್ರಾಂಶುಪಾಲರು ನಮ್ಮನ್ನು ಸ್ವಂತ ಮಗಳಂತೆ ನೋಡಿಕೊಂಡಿದ್ದಾರೆ. ಪುಟ್ಟಿಪುಟ್ಟಿ ಎಂದು ನಮಗೆ ಪರಿಸ್ಥಿತಿಯ ಬಗ್ಗೆ ತಿಳಿಸಿದ್ದಾರೆ. ನಾವು ನಮ್ಮ ಕಾಲೇಜಿನ ಜೊತೆ ನಿಲ್ಲುತ್ತೇವೆ. ನಮಗೆ ಶಿಕ್ಷಣ ಮುಖ್ಯ. ನಾವು ಹಿಜಬ್ ತೆಗೆದು ಕ್ಲಾಸಿನಲ್ಲಿ ಕುಳಿತುಕೊಳ್ಳುತ್ತೇವೆ ಎಂದು ಉಡುಪಿಯ ಜಿ. ಶಂಕರ್ ಡಿಗ್ರಿ ಕಾಲೇಜಿನ ಹಲವು ಮುಸ್ಲಿಂ ವಿದ್ಯಾರ್ಥಿನಿಯರು ನಿರ್ಧಾರ ತೆಗೆದುಕೊಂಡಿದ್ದಾರೆ.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುನೈನಾ ರುಬಾ, ನಾನು ಸಂಪ್ರದಾಯಸ್ಥ ಮನೆಯ ಹುಡುಗಿ. ಸಂಪ್ರದಾಯ ಮನೆಯಲ್ಲಿ ಪಾಲಿಸುತ್ತೇನೆ. ನಮ್ಮ ಮತದಲ್ಲಿ ಹಿಜಬ್ ಧರಿಸದೇ ಇರಲು ಅವಕಾಶ ಇಲ್ಲ. ಕಾಲೇಜಿನ ನಿಯಮ ಕೂಡಾ ನಿಯಮವೇ ಅಲ್ವಾ? ಹಾಗಾಗಿ ಕ್ಲಾಸಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಹೇಳಿದ್ದಾಳೆ.
Advertisement
ರಾಜ್ಯ ಸರ್ಕಾರ ಸಮವಸ್ತ್ರ ಕಡ್ಡಾಯ ಮಾಡಿದ್ದೇ ತಡ ಹೆಚ್ಚಿನ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಬ್ ಗಾಗಿ ಹೋರಾಟ ಶುರು ಮಾಡಿದ್ದಾರೆ. ಆದರೆ ಉಡುಪಿಯ ಸರ್ಕಾರಿ ಡಿಗ್ರಿ ಕಾಲೇಜಿನ 40 ಮುಸ್ಲಿಂ ವಿದ್ಯಾರ್ಥಿನಿಯರ ನಿಲುವೇ ಬೇರೆ. ಪ್ರಾಂಶುಪಾಲರು ಸರ್ಕಾರ ಮತ್ತು ಹೈಕೋರ್ಟ್ ಮಧ್ಯಂತರ ಆದೇಶದ ವಿರುದ್ಧ ಮಾತನಾಡದೆ ಕಾಲೇಜಿನ ಲೈಬ್ರೇರಿ ಕ್ಯಾಂಟೀನಲ್ಲಿ ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ.
Advertisement
Advertisement
ಜಿ.ಶಂಕರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾಲೇಜಿನಲ್ಲಿ ಹಿಜಾಬ್ ಧರಿಸದೇ ತರಗತಿಗೆ ಹಾಜರಾಗಲು ಸಾಧ್ಯವಿಲ್ಲ. ನಮಗೆ ಆನ್ ಲೈನ್ ಕ್ಲಾಸ್ ಮಾಡಿ ಎಂದು 50 ಮುಸ್ಲಿಂ ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ಭಾಸ್ಕರ್ ಶೆಟ್ಟಿಗೆ ವಿನಂತಿ ಮಾಡಿದರು. ಕಾಲೇಜಿನಲ್ಲಿ ಒಟ್ಟು 2376 ವಿದ್ಯಾರ್ಥಿನಿಯರು, ಅವರಲ್ಲಿ 196 ಮುಸ್ಲಿಂ ವಿದ್ಯಾರ್ಥಿನಿಯರಿದ್ದಾರೆ. ಅವರಲ್ಲಿ ಕೇವಲ 40 ಮಂದಿ ನಿತ್ಯ ಹಿಜಬ್ ಧರಿಸುತ್ತಿದ್ದರು. ಬುಧವಾರ ಅರ್ಧದಷ್ಟು ಮಂದಿ ಮಾತ್ರ ಕಾಲೇಜಿಗೆ ಬಂದಿದ್ದಾರೆ. ಪ್ರಾಂಶುಪಾಲರು ವಿದ್ಯಾರ್ಥಿನಿಯರ ಜೊತೆ ಮಾತುಕತೆಯ ನಡೆಸಿದ ನಂತರ 20ಕ್ಕೂ ಹೆಚ್ಚು ಮಂದಿ ಹಿಜಬ್ ತೆಗೆದು ತರಗತಿಗೆ ತೆರಳಿದರು. ಇದನ್ನೂ ಓದಿ: ರಾಷ್ಟ್ರ ದ್ರೋಹಿ: ನಾನಲ್ಲ ರಾಷ್ಟ್ರದ್ರೋಹಿ ನೀನು – ವಿಧಾನಸಭೆಯಲ್ಲಿ ಡಿಕೆಶಿ vs ಈಶ್ವರಪ್ಪ
ಕಾಲೇಜ್ ಕ್ಯಾಂಪಸ್ ನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ನಮಗೆ ಕ್ಯಾಂಪಸ್ ನ ಒಳಗೆ, ಕಾರಿಡಾರ್ ನಲ್ಲಿ ಹಿಜಬ್ ಧರಿಸಲು ಅವಕಾಶ ನೀಡಿದ್ದಾರೆ. ತರಗತಿಯಲ್ಲಿ ಮಾತ್ರ ಅವಕಾಶ ಇಲ್ಲ. ತರಗತಿ ಕೋಣೆಯಲ್ಲಿ ಹಿಜಬ್ ಧರಿಸದೇ ಕೂರಲು ನಮಗೆ ಸಾಧ್ಯವಿಲ್ಲ. ಆನ್ ಲೈನ್ ತರಗತಿ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ನಾವು ಒಪ್ಪಿ ಮನೆಗೆ ಹೋಗುತ್ತಿರುವುದಾಗಿ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಹೇಳಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯು ದಿ.ರಾಜೀವ್ ಗಾಂಧಿ ಮಗ ಎಂಬುದಕ್ಕೆ ಬಿಜೆಪಿ ಪುರಾವೆ ಕೇಳಿತ್ತೇ? – ಅಸ್ಸಾಂ ಸಿಎಂ ವಿರುದ್ಧ ಪ್ರಕರಣ