ನವದೆಹಲಿ: ವಿಶ್ವಾದ್ಯಂತ ಸುದ್ದಿಯಾಗಿದ್ದ ಕರ್ನಾಟಕದ ಹಿಜಬ್ ನಿಷೇಧ(Karnataka Hijab Ban) ಪ್ರಕರಣ ಇನ್ನಷ್ಟು ದಿನಗಳ ಕಾಲ ನಡೆಯಲಿದೆ. ಸುಪ್ರೀಂ ಕೋರ್ಟ್‌ನಿಂದ(Supreme Court) ಭಿನ್ನ ತೀರ್ಪು ಪ್ರಕಟವಾಗಿದ್ದು ಪ್ರಕರಣದ ವಿಚಾರಣೆ ಮುಖ್ಯ ನ್ಯಾಯಾಧೀಶರು ಇರುವ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ.
ಶಾಲೆ-ಕಾಲೇಜುಗಳ ತರಗತಿ ಒಳಗಡೆ ಹಿಜಬ್ ನಿರ್ಬಂಧ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಮೂರು ವಾರಗಳ ಹಿಂದೆ ತೀರ್ಪನ್ನು ಕಾಯ್ದಿರಿಸಿತ್ತು. ಸೆಪ್ಟೆಂಬರ್ 22ರವರೆಗೂ ನಿರಂತರವಾಗಿ 10 ದಿನ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ವಾದ- ಪ್ರತಿವಾದ ಆಲಿಸಿ ಇಂದು ತೀರ್ಪು ಪ್ರಕಟಿಸಿದೆ. ಇದನ್ನೂ ಓದಿ: ಬಲವಂತವಾಗಿ ಮಂಗಳಮುಖಿಯ ಮುಂದೆಲೆ ಕತ್ತರಿಸಿ ಹಲ್ಲೆ – ಇಬ್ಬರು ಅರೆಸ್ಟ್
Advertisement
Advertisement
ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದರೆ ನ್ಯಾಯಮೂರ್ತಿ ಸುಧಾಂಶು ಧುಲಿಯಾ ವಜಾಗೊಳಿಸಿದರು.
Advertisement
ನ್ಯಾ. ಹೇಮಂತ್ ಗುಪ್ತಾ ಆದೇಶದಲ್ಲಿ ಏನಿದೆ?
ನನ್ನ ಆದೇಶದಲ್ಲಿ11 ಪ್ರಶ್ನೆಗಳ ಪ್ರಸ್ತಾಪ ಇದ್ದು ಮೇಲ್ಮನವಿಯ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ತರಗತಿಗಳಲ್ಲಿ ಹಿಜಬ್ ನಿಷೇಧಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಆದೇಶ ಸರಿಯಿದೆ. ಹೀಗಾಗಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ್ದೇನೆ.
Advertisement
ನ್ಯಾ. ಸುಧಾಂಶು ಧುಲಿಯಾ ಆದೇಶದಲ್ಲಿ ಏನಿದೆ?
ಮೂಲಭೂತ ಧಾರ್ಮಿಕ ಆಚರಣೆಗಳನ್ನು ವಿವಾದಗೊಳಿಸುವ ಅವಶ್ಯಕತೆ ಇಲ್ಲ. ಕರ್ನಾಟಕ ಹೈಕೋರ್ಟ್ ಆದೇಶ ತಪ್ಪಾಗಿದೆ. ಈ ಪ್ರಕರಣವನ್ನು ಇಸ್ಲಾಂ ಅತ್ಯಗತ್ಯ ಆಚರಣೆಯ ಭಾಗ ಹೌದೋ? ಅಲ್ಲವೇ ಎಂದು ಚರ್ಚೆ ಮಾಡಿದ್ದೇ ತಪ್ಪು. ಹಿಜಬ್ ಖಂಡಿತವಾಗಿಯೂ ಆಯ್ಕೆಯ ವಿಷಯವಾಗಿದೆ. ಬಿಜೋ ಇಮ್ಯಾನುಯೆಲ್ ಪ್ರಕರಣದಂತೆ ಸಂವಿಧಾನದ ವಿಧಿ 14 ಮತ್ತು ವಿಧಿ 19ಕ್ಕೆ ಸಂಬಂಧಿಸಿದ್ದು ಇದರಲ್ಲಿ ಹೆಚ್ಚೂ ಇಲ್ಲ, ಕಡಿಮೆಯೂ ಇಲ್ಲ.
ನನಗೆ ಅತ್ಯಂತ ಪ್ರಮುಖವಾದ ವಿಷಯವೆಂದರೆ ಹೆಣ್ಣು ಮಕ್ಕಳ ಶಿಕ್ಷಣ. ಹಲವು ಪ್ರದೇಶಗಳಲ್ಲಿ ಹೆಣ್ಣು ಮಗು ಶಾಲೆಗೆ ಹೋಗುವ ಮೊದಲು ಮನೆ ಕೆಲಸವನ್ನು ಮಾಡುತ್ತದೆ. ನಾವು ಹಿಜಬ್ ನಿಷೇಧಗೊಳಿಸುವ ಮೂಲಕ ಆಕೆಯ ಶೈಕ್ಷಣಿಕ ಭವಿಷ್ಯವನ್ನು ನಾವು ಸುಧಾರಿಸುತ್ತಿದ್ದೆವೆಯೇ? ಈ ಪ್ರಶ್ನೆ ನನ್ನ ಮನಸ್ಸಿನಲ್ಲಿ ಬಹುವಾಗಿ ಕಾಡುತ್ತಿದೆ. ಈ ಕಾರಣಕ್ಕೆ ಫೆ.5ರ ಕರ್ನಾಟಕ ಹೈಕೋರ್ಟ್ ಆದೇಶವನ್ನು ವಜಾಗೊಳಿಸುತ್ತಿದ್ದೇನೆ.