ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ವಿಚಾರಣೆ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ (DK Shivakumar) ಬಿಗ್ ರಿಲೀಫ್ ಸಿಕ್ಕಿದೆ.
ಚುನಾವಣಾ ಸಂದರ್ಭದಲ್ಲಿ ಡಿಕೆಶಿಗೆ ಮತ್ತು ಅವರ ಕುಟುಂಬಕ್ಕೆ ಸಿಬಿಐ (CBI) ನೋಟಿಸ್ ಕೊಡುತ್ತಾ ಇದೆ. ಸುಖಾಸುಮ್ಮನೆ ಹಿಂಸೆ ಕೊಡುವ ಕೆಲಸವನ್ನು ಮಾಡುತ್ತಾ ಇದ್ದಾರೆ ಎಂಬ ವಿಚಾರವನ್ನು ಡಿಕೆಶಿ ಪರ ವಕೀಲ ಜಾದವ್ ಕೋರ್ಟ್ ಗಮನಕ್ಕೆ ತಂದಿದ್ದರು.
Advertisement
Advertisement
ಡಿಕೆ ಶಿವಕುಮಾರ್ ಈ ಪ್ರಕರಣದಲ್ಲಿ ಆರೋಪಿ. ಅವರನ್ನು ಹೊರತುಪಡಿಸಿ ಅವರ ಮಗಳನ್ನು ವಿಚಾರಣೆಗೆ ಕರೆಯುತ್ತಿದ್ದಾರೆ. ಇದರಿಂದ ಅವರ ಕುಟುಂಬಕ್ಕೆ ತೊಂದರೆ ಆಗುತ್ತಿದೆ. ಚುನಾವಣೆಗೆ ಅಡ್ಡಿಪಡಿಸಬೇಕು, ಮಾನಸಿಕ ಹಿಂಸೆ ಕೊಡಬೇಕು ಅಂತಲೇ ಈ ರೀತಿ ಮಾಡಲಾಗುತ್ತಿದೆ ಎಂದು ಕೋರ್ಟ್ ಗಮನಕ್ಕೆ ತಂದರು. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದ್ರೆ ಸರ್ಕಾರಿ ಕಟ್ಟಡದ ಮೇಲಿನ ಗುಮ್ಮಟ ಕೆಡವುತ್ತೇವೆ – ಬಂಡಿ ಸಂಜಯ್
Advertisement
ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಅವರ ಮಗಳು ಚುನಾವಣೆ ಸ್ಪರ್ಧೆ ಮಾಡುತ್ತಿಲ್ಲ ಅಲ್ವಾ? ವಿಚಾರಣೆಗೆ ಹಾಜರಾಗಲು ತೊಂದರೆ ಏನಿದೆ? ವಿಚಾರಣೆಗೆ ಸಹಕರಿಸಬೇಕು ಅಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿಬಿಐ ಪರ ವಕೀಲ ಪ್ರಸನ್ನಕುಮಾರ್ ವಾದ ಮಂಡಿಸಿ, ಡಿಕೆಶಿ ಅವರ ಮಗಳ ಹೆಸರಿನಲ್ಲಿ 150 ಕೋಟಿ ರೂ. ಆಸ್ತಿ ಇದೆ. ಅದರ ಮೌಲ್ಯ ಏನು ಅಂತ ತಿಳಿದುಕೊಳ್ಳಬೇಕು. ತನಿಖೆ ಇನ್ನೂ 6 ತಿಂಗಳು ನಡೆಯಲಿದೆ. ಬಳಿಕ ಅಂತಿಮ ವರದಿ ಸಲ್ಲಿಸಬೇಕು ಎಂದಿದ್ದಾರೆ.
Advertisement
ಮೂಲ ಅರ್ಜಿಯೊಂದು ವಿಚಾರಣೆಗೆ ಬಾಕಿ ಉಳಿದಿದೆ. ಅದು ಇನ್ನೂ ಇತ್ಯರ್ಥ ಆಗದೇ ಇರುವ ಹಿನ್ನೆಲೆ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿತು. ಫೆಬ್ರವರಿ 24ರ ತನಕ ಮಧ್ಯಂತರ ತಡೆ ನೀಡಿದ್ದು, 24ಕ್ಕೆ ತನಿಖಾ ಪ್ರಗತಿ ವರದಿಯನ್ನು ಸಲ್ಲಿಸಲು ಸೂಚಿಸಿ ನ್ಯಾಯಾಲಯ ವಿಚಾರಣೆ ಮುಂದೂಡಿದೆ. ಇದನ್ನೂ ಓದಿ: ಕೇಸರಿ ಭದ್ರಕೋಟೆಗೆ ಚಾಣಕ್ಯ: ಮಂಗಳೂರಿನಲ್ಲಿ ಶಾ ಚುನಾವಣಾ ರಣತಂತ್ರ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k