ಬೆಂಗಳೂರು: ಆನ್‍ಲೈನ್ ಗೇಮಿಂಗ್ ನಿಷೇಧಿಸಿದ ಸರ್ಕಾರ ಹೊರಡಿಸಿದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
Advertisement
ಆನ್‍ಲೈನ್ ಗೇಮಿಂಗ್ ನಿಷೇಧದ ಬಗ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ರಿತುರಾಜ್ ಅವಸ್ಥಿ ಮತ್ತು ನ್ಯಾ.ಕೃಷ್ಣ ಎಸ್ ದೀಕ್ಷಿತ್ ಅವರನ್ನೊಳಗೊಂಡ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠವು ಮಹತ್ವದ ತೀರ್ಪು ನೀಡಿದೆ. ಇದನ್ನೂ ಓದಿ: ಚೀನಾದ 54 ಆ್ಯಪ್‌ಗಳು ಬ್ಯಾನ್: ಕೇಂದ್ರ
Advertisement
ಸರ್ಕಾರದ ಕ್ರಮ ಸಂವಿಧಾನಬದ್ಧವಾಗಿಲ್ಲ. ಆನ್‍ಲೈನ್ ಗೇಮಿಂಗ್ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತಿಲ್ಲ. ಸಂವಿಧಾನಬದ್ಧವಾದ ಶಾಸನ ರೂಪಿಸಲು ಸರ್ಕಾರ ಸ್ವತಂತ್ರವಿದೆ ಎಂದು ಹೈಕೋರ್ಟ್ ವಿಭಾಗೀಯ ಪೀಠ ಆದೇಶದಲ್ಲಿ ತಿಳಿಸಿದೆ.
Advertisement
Advertisement
ಈ ಹಿಂದೆ ಕರ್ನಾಟಕ ಪೊಲೀಸ್ ಕಾಯ್ದೆ ತಿದ್ದುಪಡಿ ಮಾಡಿ ಆನ್‍ಲೈನ್ ಗೇಮಿಂಗ್‍ಗೆ ಸರ್ಕಾರ ನಿಷೇಧ ಹೇರಿತ್ತು. ವಿಧಾನಸಭೆಯಲ್ಲಿ ಆನ್‍ಲೈನ್ ಬೆಟ್ಟಿಂಗ್ ಪ್ರತಿಬಂಧಕ ಕಾಯ್ದೆಯ ವಿಧೇಯಕವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಡಿಸಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಆನ್‍ಲೈನ್ ಬೆಟ್ಟಿಂಗ್ ನಿಷೇಧ: ಅರಗ ಜ್ಞಾನೇಂದ್ರ
ಈ ತಿದ್ದುಪಡಿ ವಿಧೇಯಕ ಲಾಟರಿ, ಕುದುರೆ ರೇಸ್‍ಗೆ ಅನ್ವಯವಾಗಿರಲಿಲ್ಲ. ಉಳಿದಂತೆ ಮೊಬೈಲ್, ಕಂಪ್ಯೂಟರ್ ಸೇರಿದಂತೆ ಇನ್ನಿತರ ಆನ್‍ಲೈನ್ ಜೂಜಾಟ, ಬೆಟ್ಟಿಂಗ್‍ಗಳಿಗೆ ಅನ್ವಯವಾಗಿತ್ತು. ಅಲ್ಲದೆ ಆನ್‍ಲೈನ್ ಗ್ಯಾಂಬ್ಲಿಂಗ್ ತೊಡಗುವವರಿಗೆ ಸಹಾಯ ಮಾಡುವವರಿಗೆ ಹಾಗೂ ಆಶ್ರಯ ನೀಡುವವರಿಗೂ 6 ತಿಂಗಳು ಜೈಲುಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸುವ ಅವಕಾಶ ಕಾನೂನಿನಲ್ಲಿತ್ತು. ಇದೀಗ ಹೈಕೋರ್ಟ್ ಆದೇಶವನ್ನು ರದ್ದು ಪಡಿಸಿದೆ.