ಗೇಮ್ಸ್‌ಕ್ರಾಫ್ಟ್ ಜಿಎಸ್‍ಟಿ ಶೋಕಾಸ್ – ರದ್ದುಗೊಳಿಸಿದ ಹೈಕೋರ್ಟ್

Public TV
1 Min Read

ಬೆಂಗಳೂರು: ಆನ್‍ಲೈನ್ ಗೇಮಿಂಗ್ ಪ್ಲಾಟ್‍ಫಾರ್ಮ್ ಗೇಮ್ಸ್‌ಕ್ರಾಫ್ಟ್ (Gameskraft) ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯ (Directorate General of Goods and Services Tax Intelligence) ನೀಡಿದ್ದ ಶೋಕಾಸ್ ನೋಟಿಸ್‍ನ್ನು ಕರ್ನಾಟಕ ಹೈಕೋರ್ಟ್ (High Court) ಗುರುವಾರ ರದ್ದುಗೊಳಿಸಿದೆ.

ಶೋಕಾಸ್ ನೋಟಿಸ್‍ಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‍ಆರ್ ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯತ್ವ ಪೀಠವು ವಿಚಾರಣೆ ನಡೆಸಿತು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ಈ ಆದೇಶ ನೀಡಿತು. ಇದನ್ನೂ ಓದಿ: ಸಲಿಂಗ ವಿವಾಹ ಕಾನೂನು ಮಾನ್ಯತೆ ವಿಚಾರಣೆ – ಸಿಜೆಐ ಹಿಂದೆ ಸರಿಯುವಂತೆ ಸಲ್ಲಿಸಿದ್ದ ಮನವಿ ತಿರಸ್ಕೃತ

GST

ಗೇಮ್ಸ್‌ಕ್ರಾಫ್ಟ್ ಕಂಪನಿಯು 21,000 ಕೋಟಿ ರೂ. ತೆರಿಗೆ ಪಾವತಿಸಬೇಕು ಎಂದು ಈ ಹಿಂದೆ ನೀಡಿದ್ದ ನೋಟಿಸ್‍ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಆದರೂ ಸಹ ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯ ಶೋಕಾಸ್ ನೋಟಿಸ್ ನೀಡಿರುವುದು ಕಾನೂನು ಬಾಹಿರ ಮತ್ತು ದುರುದ್ದೇಶದಿಂದ ಕೂಡಿದೆ. ಅಲ್ಲದೆ ಸ್ವತಃ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ರಮೇಶ್ ಪ್ರಭು ಅವರಿಗೆ ವೈಯಕ್ತಿಕ ದಂಡ ವಿಧಿಸಲಾಗಿದೆ ಎಂದು ಅರ್ಜಿಯಲ್ಲಿ ಎತ್ತಿ ತೋರಿಸಲಾಗಿದೆ ಎಂದು ಕಂಪನಿ ನ್ಯಾಯಾಲಯದ ಮುಂದೆ ಹೇಳಿದೆ.

ಅಲ್ಲದೆ ಜಿಎಸ್‍ಟಿ ಅಧಿಕಾರಿಗಳು (GST Authorities)ನೀಡಿದ ಶೋಕಾಸ್ ನೋಟಿಸ್‍ನಲ್ಲಿರುವ ಆರೋಪಗಳು ಈಗಾಗಲೇ ತಡೆಹಿಡಿದಿರುವ ನೋಟಿಸಿನಂತೆಯೇ ಇದೆ. ಇದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ.

2022ರ ಸೆ.23 ರಂದು ನಡೆದ ಹಿಂದಿನ ನೋಟಿಸ್ ವಿಚಾರಣೆ ವೇಳೆ ಪ್ರಕರಣದಲ್ಲಿ ಹಲವಾರು ವಿವಾದಾತ್ಮಕ ವಿಷಯಗಳಿವೆ ಎಂದು ಕೋರ್ಟ್ ಹೇಳಿತ್ತು. ಅಲ್ಲದೆ ನೀಡಲಾದ ನೋಟಿಸ್‍ಗೆ ನ್ಯಾಯಾಲಯ ತಡೆ ನೀಡಿತ್ತು. ಇದನ್ನೂ ಓದಿ: ಕೇಂದ್ರ VS ದೆಹಲಿ ಸರ್ಕಾರ – ಸುಪ್ರೀಂ ಆದೇಶದಿಂದ ಆಪ್‌ಗೆ ಬಿಗ್‌ ವಿಕ್ಟರಿ

Share This Article