ಬೆಂಗಳೂರು: ಪಿಎಸ್‍ಐ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಮೇಲೆ ಹೈಕೋರ್ಟ್ ಗರಂ ಆಗಿದೆ. ನೀವೇ ಸರಿಯಾಗಿ ಕೆಲಸ ಮಾಡ್ತಿರೋ? ಅಥ್ವಾ ಬೇರೆ ತನಿಖಾ ಸಂಸ್ಥೆಗೆ ಪ್ರಕರಣವನ್ನು ವಹಿಸಬೇಕಾ ಎಂದು ಖಡಕ್ಕಾಗಿ ಪ್ರಶ್ನಿಸಿದೆ.
Advertisement
ಇದು ಸಮಾಜಕ್ಕೆ ಒಂದು ರೀತಿಯಲ್ಲಿ ಭಯೋತ್ಪಾದನಾ ಕೃತ್ಯ. ಕೆಲವು ಕ್ರಿಮಿನಲ್ಸ್ ಕೂಡ ರ್‍ಯಾಂಕ್ ಪಡೆದು ಹುದ್ದೆ ಪಡೆಯುತ್ತಿದ್ದಾರೆ. ಪರೀಕ್ಷೆ ರದ್ದು ಮಾಡುವುದು ಮಾತ್ರ ಪರಿಹಾರ ಅಲ್ಲ. ಇದರಲ್ಲಿ ಯಾವುದೇ ಮಿನಿಸ್ಟರ್ ಇದ್ರೂ ಸರಿ, ಅಧಿಕಾರಿಗಳು ಇದ್ರೂ ಸರಿ ಕ್ರಮ ಆಗಬೇಕು. ನಮಗೆ ಡಿಜಿಪಿ ಸಂಧು ಅವರ ಮೇಲೆ ಗೌರವ ಇದೆ. ಅವರ ಮೇಲ್ವಿಚಾರಣೆಯಲ್ಲಿ ತನಿಖೆ ಆಗಲಿ. ನಿಮಗೆ ಸ್ವತಂತ್ರವಾದ ಅಧಿಕಾರವನ್ನು ಕೊಟ್ಟಿದ್ದೇವೆ ಎಂದು ಹೈಕೋರ್ಟ್ ತಿಳಿಸಿದೆ. ಇದನ್ನೂ ಓದಿ: ಜುಲೈ 1ರಿಂದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳು ಬ್ಯಾನ್ – ಮಾರಾಟ ಮಾಡಿದ್ರೆ ದುಬಾರಿ ದಂಡ
Advertisement
Advertisement
ಇದು ಕೇವಲ ಪಿಎಸ್‍ಐ ಪರೀಕ್ಷೆಯಲ್ಲಿ ಮಾತ್ರವಲ್ಲ, ಎಲ್ಲಾ ಪರೀಕ್ಷೆಗಳಲ್ಲಿ ಅಕ್ರಮ ನಡೆಯುತ್ತಿವೆ. ಈ ಪ್ರಕರಣ ಸಂಪೂರ್ಣ ವರದಿ ಕೊಡಬೇಕು ಎಂದು ಡಿಜಿ ಸಂಧು ಅವರಿಗೆ ಹೈಕೋರ್ಟ್ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಜುಲೈ 7ಕ್ಕೆ ನಿಗದಿ ಮಾಡಿದ್ದು, ಈ ಸಂದರ್ಭದಲ್ಲಿ ತನಿಖಾ ಪ್ರಗತಿಯ ವರದಿ ಸಲ್ಲಿಸಲು ಹೆಚ್ಚು ಸಮಯ ನೀಡುವಂತೆ ಎಜಿ ಮಾಡಿದ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಲಿಲ್ಲ. ತಪ್ಪಿತಸ್ಥರ ವಿರುದ್ಧ ಶೀಘ್ರ ತನಿಖೆ ನಡೆಸಲು ಸೂಚಿಸಿದೆ.