ಬೆಂಗಳೂರು: ಯಡಿಯೂರಪ್ಪ (Yediyurappa) ಹಾಗೂ ಅವರ ಕುಟುಂಬದ ವಿರುದ್ಧ ಸಲ್ಲಿಕೆಯಾಗಿದ್ದ ಭ್ರಷ್ಟಾಚಾರ(Corruption) ಆರೋಪ ಪ್ರಕರಣದ ಮರು ವಿಚಾರಣೆ ನಡೆಸುವಂತೆ ಹೈಕೋರ್ಟ್(High Court) ಆದೇಶಿಸಿದೆ.
ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಸಿಗದಿದ್ದಕ್ಕೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಾಂ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನೀಡಿದ್ದ ಆದೇಶವನ್ನು ರದ್ದು ಮಾಡಿ ಮರು ವಿಚಾರಣೆ ನಡೆಸುವಂತೆ ಸೂಚಿಸಿದೆ.
Advertisement
Advertisement
ಅಂದು ವಜಾಗೊಂಡಿದ್ದು ಯಾಕೆ?
ಬಿ.ಎಸ್ ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಶಶಿಧರ ಮರಡಿ, ಸಂಜಯ್ ಶ್ರೀ, ಚಂದ್ರಕಾಂತ ರಾಮಲಿಂಗಮ್, ಎಸ್.ಟಿ.ಸೋಮಶೇಖರ್, ಡಾ.ಜಿ.ಸಿ.ಪ್ರಕಾಶ್, ಕೆ.ರವಿ, ವಿರುಪಾಕ್ಷಪ್ಪ ಯಮಕನಮರಡಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಯಡಿಯೂರಪ್ಪ ಹಾಗೂ ಅವರ ಕುಟುಂಬದ 8 ಸದಸ್ಯರು ಬಿಡಿಎ ಪ್ರಾಧಿಕಾರದ ವಸತಿ ಯೋಜನೆಗಾಗಿ ಖಾಸಗಿ ಕಂಪನಿಗಳ ಜೊತೆಗಿನ ಒಪ್ಪಂದದಲ್ಲಿ ಲಂಚ ಪಡೆದಿದ್ದಾರೆ. ಈ ಕುರಿತು ಎಫ್‌ಐಆರ್ ದಾಖಲಿಸಿ ತನಿಖೆಗೆ ಆದೇಶಿಸುವಂತೆ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಾಂ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಫಸ್ಟ್ ಟೈಂ ಪೆಟ್ಟಿಗೆಯಲ್ಲಿ ಹೂಳುವ ಸಂಪ್ರದಾಯ ಕೈಬಿಟ್ಟ ಕೇರಳ ಚರ್ಚ್
Advertisement
ರಾಜ್ಯಪಾಲರು ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಅಬ್ರಾಹಂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಖಾಸಗಿ ಅರ್ಜಿಯನ್ನು 2021ರ ಜುಲೈನಲ್ಲಿ ಕೋರ್ಟ್ ವಜಾ ಮಾಡಿತ್ತು. ಯಡಿಯೂರಪ್ಪ ಮತ್ತು ಇತರ 8 ಜನರ ವಿರುದ್ಧದ ಸಲ್ಲಿಕೆಯಾಗಿರುವ ಭ್ರಷ್ಟಾಚಾರ ಆರೋಪ ದೂರಿಗೆ ರಾಜ್ಯಪಾಲರ ಅನುಮೋದನೆಯ ಇಲ್ಲದ ಕಾರಣ ದೂರನ್ನು ಪರಿಗಣಿಸುವುದಿಲ್ಲ ಎಂದು ಕೋರ್ಟ್ ಹೇಳಿತ್ತು.
Advertisement
ಆರೋಪ ಏನು?
ಕೋಲ್ಕತ್ತಾ ಮೂಲದ ಶೆಲ್ ಕಂಪನಿಗಳಲ್ಲಿ ಯಡಿಯೂರಪ್ಪ ಕುಟುಂಬಸ್ಥರು ಹೂಡಿಕೆ ಮಾಡಿದ್ದಾರೆ. ಗುತ್ತಿಗೆದಾರ ಚಂದ್ರಕಾಂತ್ ರಾಮಲಿಂಗಮ್ ಜೊತೆ ವಿಜಯೇಂದ್ರ, ಶಶಿಧರ ಮರಡಿ ಸಂಬಂಧ ಇದೆ. ಸರ್ಕಾರದ ವಿವಿಧ ಕಾಮಗಾರಿಗಳಿಗೆ ಫಂಡ್ ರಿಲೀಸ್ ಮಾಡಲು ಸಿಎಂ ಆಪ್ತರು ಒತ್ತಡ ಹಾಕಿದ್ದಾರೆ. ಸರ್ಕಾರ ವಿವಿಧ ಇಲಾಖೆ ಯೋಜನೆಗಳಲ್ಲಿ ಒತ್ತಡ ಹಾಕಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಜನೋತ್ಸವ ಕಾರ್ಯಕ್ರಮ ನಿಗದಿಯಂತೆ ನಾಳೆ ನಡೆಯಲಿದೆ: ಸುಧಾಕರ್
ದೂರಿಗೆ ಪೂರಕವಾಗಿ ವಾಟ್ಸಪ್ ಚಾಟ್ ಸಲ್ಲಿಕೆಯಾಗಿದ್ದು, 2020ರ ಅಕ್ಟೋಬರ್ 19 ರಂದು ಶಶಿಧರ್, ಚಂದ್ರಕಾಂತ್ ಅವರಲ್ಲಿ ಮೆಸೇಜ್ ಮಾಡಿ ಹಣ ಕೇಳಿದ್ದಾರೆ. ಯಾವಾಗ ತಮ್ಮ ಬ್ಯಾಲೆನ್ಸ್ ಕ್ಲೀಯರ್ ಮಾಡ್ತಿರಾ ಎಂದು ಪ್ರಶ್ನೆ ಮಾಡಿದ್ದಾರೆ. ಮಧ್ಯಾಹ್ನ 2:36ಕ್ಕೆ ಮೆಸೇಜ್ ಮಾಡಿ ಕೇಳಿರುವ ಸಾಕ್ಷಿಗಳಿದೆ. ಅದಕ್ಕೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ಹಣ ನೀಡುತ್ತೇನೆ ಎಂದು ಚಂದ್ರಕಾಂತ್ ಹೇಳಿದ್ದಾರೆ. ಈ ಚಾಟ್ ನಲ್ಲಿ ಶಶಿಧರ್ ಅವರಿಗೆ 3 ಕೋಟಿ ನೀಡುವ ಬಗ್ಗೆ ಮಾತುಕತೆ ನಡೆಸಿದ ಬಗ್ಗೆ ದಾಖಲೆ ಪತ್ತೆಯಾಗಿದೆ.
ಯಡಿಯೂರಪ್ಪ ಹಾಗೂ ಅವರ ಕುಟುಂಬ ಕೋಟ್ಯಂತರ ರೂಪಾಯಿ ಅಕ್ರಮ ಆದಾಯಗಳಿಸಿದ್ದಾರೆ. ಈ ಆದಾಯವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಯಡಿಯೂರಪ್ಪ ಅವರ ಕುಟುಂಬ ಸದಸ್ಯರ ಒಡೆತನದ ಕಂಪನಿಗಳಿಗೆ ಹಣ ವರ್ಗಾವಣೆಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.