ಬೆಂಗಳೂರು: ರಾಕ್‌ಲೈನ್ ಮಾಲ್‌ಗೆ (Rockline Mall) ಬಿಬಿಎಂಪಿ ಹಾಕಿರುವ ಸೀಲ್ ಓಪನ್ ಮಾಡುವಂತೆ ಕರ್ನಾಟಕ ಹೈಕೋರ್ಟ್ (Karnataka High Court) ಆದೇಶ ಹೊರಡಿಸಿದೆ.
ಮಾಲ್‌ಗೆ ಬಿಬಿಎಂಪಿ ಬೀಗ ಹಾಕಿದ್ದ ಕ್ರಮವನ್ನು ಪ್ರಶ್ನಿಸಿ ರಾಕ್‌ಲೈನ್ ಮಾಲ್ ಆಡಳಿತ ಮಂಡಳಿ ಹೈಕೋರ್ಟ್‌ಗೆ ಮನವಿ ಮಾಡಿತ್ತು. ವಿಚಾರಣೆ ನಡೆಸಿದ ನ್ಯಾ. ಸುನಿಲ್ ದತ್ ಯಾದವ್ ಅವರ ಪೀಠವು ಈ ಆದೇಶ ಹೊರಡಿಸಿದೆ. ಇದನ್ನೂ ಓದಿ: ವಿಧಾನಸೌಧದಲ್ಲೇ ಶಾಸಕರಿಗೆ ಮಧ್ಯಾಹ್ನದ ಬಿಸಿಯೂಟ- ಖಾದರ್ ಘೋಷಣೆ
Advertisement
Advertisement
ಕಳೆದ ಬುಧವಾರ ಬಿಬಿಎಂಪಿ ಜಾಲಹಳ್ಳಿ ಕ್ರಾಸ್ ಬಳಿ ಇರೋ ರಾಕ್‌ಲೈನ್ ಮಾಲ್ ಸೀಜ್ ಮಾಡಲಾಗಿತ್ತು. ಸೀಜ್ ಮಾಡಿದ್ದನ್ನ ಪ್ರಶ್ನಿಸಿ ರಾಕ್‌ಲೈನ್ ಮಾಲ್ ಆಡಳಿತ ಮಂಡಳಿ ಕೋರ್ಟ್ ಮೆಟ್ಟಿಲೇರಿತ್ತು. ಇಂದು (ಸೋಮವಾರ) ಹೈಕೋರ್ಟ್ ಸೀಲ್ ತೆರವಿಗೆ ಸೂಚನೆ ನೀಡಿದೆ.
Advertisement
ತಕ್ಷಣವೇ ಸೀಲ್ ಓಪನ್ ಮಾಡಬೇಕು. ವ್ಯಾಪಾರಕ್ಕೆ ಯಾವುದೇ ತೊಂದರೆಗಳನ್ನು ಮಾಡಬಾರದು. ತೆರಿಗೆ ಹಣದ ವಿಚಾರವಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಎಂದು ಬಿಬಿಎಂಪಿಗೆ ಕೋರ್ಟ್ ಸೂಚಿಸಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರಿಗೆ ಸುಪ್ರೀಂನಿಂದ ತಾತ್ಕಾಲಿಕ ರಿಲೀಫ್
Advertisement
ಹೈಕೋರ್ಟ್ ಆದೇಶ ಕುರಿತು ಮಾತನಾಡಿರುವ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಬೀಗ ಯಾಕೆ ಹಾಕಿದರು, ಏನು ಉದ್ದೇಶ ಇತ್ತು ಗೊತ್ತಿಲ್ಲ. ಟ್ಯಾಕ್ಸ್ ಕಟ್ಟಿಕೊಂಡು ಬರ್ತಾ ಇದ್ರು. ಒಬ್ಬರು ಬಂದು ಅಬ್ ನಾರ್ಮಲ್ ಆಗಿ ಬಂದು ಟ್ಯಾಕ್ಸ್ ಕಟ್ಟಿ ಅಂತಾ ಹೇಳಿದ್ರು. ಏಳು ಪ್ಲೋರ್ ಇದೇ ಅಂತಾ ಕೇಳಿದ್ರು. ಅಲ್ಲಿ ಗ್ರೌಂಡ್ ಪ್ಲೋರ್ ಅಷ್ಟೇ ಇದ್ದಿದ್ದು 40 ಥಿಯೇಟರ್ ಕಟ್ಟಡ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
ನಾನು ಸರಿಯಾಗಿ ಇದ್ದೀನಿ, ನಾನೇನು ತಪ್ಪು ಮಾಡಿಲ್ಲ. ತಪ್ಪು ಮಾಡಿದ್ದೀನಿ ಅಂತಾ ತೋರಿಸಿ, ನಾನು ಬಹಿರಂಗವಾಗಿ ಕ್ಷಮೆ ಕೇಳ್ತೀನಿ. ಕತ್ತಲಲ್ಲಿ ಬಂದು ನೋಟಿಸ್ ಕೊಡೋದು ಏನಿದೆ? ಕತ್ತಲಲ್ಲಿ ಬಂದು ನೋಟಿಸ್ ಕೊಡೋದು ಯಾರು ಹೇಳಿ? ಇರೋದೆ 4 ಪ್ಲೋರ್. ಆದರೆ ಅವರು 7 ಪ್ಲೋರ್ ಅಂತಾ ಹೇಳಿದ್ರು. ಜಂಟಿ ಸರ್ವೆ ಮಾಡಿದ್ರು. ಆದ ಮೇಲೂ ನಾವೇ ತೆರಿಗೆ ಕಟ್ಟುತ್ತೇವೆ ಅಂದರೂ ಕಟ್ಟಿಸಿಕೊಳ್ಳಲಿಲ್ಲ. ಒಮ್ಮೆ ಬರೀ ಖಾಲಿ ಪೇಪರ್ ಕೊಟ್ಟಿದ್ರು. ಬರೀ ಎನ್‌ವಲಪ್ ಕೊಟ್ಟಿದ್ರು, ನೋಟಿಸ್ ಏನಿರಲಿಲ್ಲ. ಇವತ್ತು ಕೋರ್ಟ್ ಸೀಲ್ ಓಪನ್ ಮಾಡಿ ಅಂತಾ ಹೇಳಿದೆ. ವ್ಯಾಪಾರಕ್ಕೆ ಅಡ್ಡಿ ಪಡಿಸಬೇಡಿ ಅಂತಾ ಹೇಳಿದೆ ಎಂದು ಖುಷಿ ವ್ಯಕ್ತಪಡಿಸಿದರು. ಇದನ್ನೂ ಓದಿ: ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ: ಸರ್ಕಾರದ ಮುಟ್ಟಾಳತನ: ಜೋಶಿ ಆಕ್ರೋಶ