ನವದೆಹಲಿ: ಬೆಂಗಳೂರಿನ ಚಾಮರಾಜಪೇಟೆಯ ಮೈದಾನದ ಗಣೇಶೋತ್ಸವ ಪ್ರಕರಣ ಸುಪ್ರೀಂ ಕೋರ್ಟ್ ಮುಖ್ಯ ತ್ರಿಸದಸ್ಯರ ಪೀಠಕ್ಕೆ ವರ್ಗಾವಣೆ
ಹೈಕೋರ್ಟ್ ದ್ವಿಸದಸ್ಯ ಪೀಠ ಗಣೇಶೋತ್ಸವ ಆಚರಣೆ ಅನುಮತಿ ನೀಡುವುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ ಎಂದು ಆದೇಶ ಪ್ರಕಟಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ವಕ್ಫ್ ಬೋರ್ಡ್ ಸುಪ್ರೀಂ ಮೊರೆ ಹೋಗಿತ್ತು. ಇಂದು ನ್ಯಾ. ಹೇಮಂತ್ ಗುಪ್ತಾ ನೇತೃತ್ವದ ದ್ವಿ ಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ವಕ್ಫ್ ಬೋರ್ಡ್ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು. ಸರ್ಕಾರ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.
Advertisement
ಎರಡು ಕಡೆಯ ವಾದ ಆಲಿಸಿದ ಜಡ್ಜ್‌ಗಳ ಮಧ್ಯೆ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಮಧ್ಯಂತರ ಆದೇಶ ನೀಡಲು ಕೋರ್ಟ್ ನಿರಾಕಣೆ ಮಾಡಿತು. ಈ ಹಿನ್ನೆಲೆಯಲ್ಲಿ ಈ ಪ್ರಕರಣ ಸುಪ್ರೀಂ ಕೋರ್ಟ್ ನ್ಯಾ.ಇಂದಿರಾ ಬ್ಯಾನರ್ಜಿ, ನ್ಯಾ. ಎಎಸ್ ಒಕಾ, ನ್ಯಾ. ಎಂಎಂ ಸುಂದರೇಶ್ ಅವರ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ.
Advertisement
ವಕ್ಫ್ ಬೋರ್ಡ್ ವಾದ ಏನು?
ಸರ್ವೆ 40 ಜಾಗ ಸಾಕಷ್ಟು ವರ್ಷಗಳಿಂದ ಬಳಕೆಯಾಗುತ್ತಿದ್ದು, ವಕ್ಫ್ ತನ್ನ ಆಸ್ತಿ ಎಂದು ಘೋಷಣೆ ಮಾಡಿದೆ. ಈಗ ವಕ್ಫ್ ತಿರ್ಮಾನವನ್ನು ಪ್ರಶ್ನೆ ಮಾಡಲಾಗುತ್ತಿದೆ. 200 ಅಧಿಕ ವರ್ಷಗಳಿಂದ ಒಂದು ಸಮುದಾಯ ಬಳಕೆ ಮಾಡುತ್ತಿದೆ.
Advertisement
ಇಲ್ಲಿ ಬೇರೆ ಸಮುದಾಯದವರು ಹಬ್ಬ ಆಚರಿಸುವುದು ಸರಿಯಲ್ಲ. ಇದು ಸಮಸ್ಯೆಗೆ ಕಾರಣ ಆಗಬಹುದು. ಹೈಕೋರ್ಟ್ ಏಕ ಸದಸ್ಯ ಪೀಠ ನೀಡಿದ ಆದೇಶದ ಬೆನ್ನಲ್ಲೇ ದ್ವಿಸದಸ್ಯ ಪೀಠ ಅದರ ವಿರುದ್ಧ ಆದೇಶ ನೀಡಿದೆ. ಆದರೆ ಈದ್ಗಾ ವಕ್ಪ್ ಆಸ್ತಿಯಾಗಿದ್ದು ಮುಸ್ಲಿಂ ಸಮುದಾಯ ಇದನ್ನು ಪ್ರಾರ್ಥನೆಗೆ ಬಳಸುತ್ತಿದೆ. ವರ್ಷಕ್ಕೆ ಎರಡು ಹಬ್ಬಗಳನ್ನು ಇಲ್ಲಿ ಆಚರಣೆ ಮಾಡಲಾಗುತ್ತಿದೆ. ಬಯಲು ಜಾಗ ಎನ್ನುವ ಕಾರಣಕ್ಕೆ ಬೇಕಾದ ಹಾಗೆ ಬಳಕೆ ಮಾಡಲು ಸಾಧ್ಯವಿಲ್ಲ. ವಕ್ಫ್ ಆಸ್ತಿ ಎನ್ನುವುದಕ್ಕೆ ಎಲ್ಲಾ ದಾಖಲೆಗಳು ಇದೆ.
Advertisement
ಕಂದಾಯ ಅಧಿಕಾರಿಗಳು ಈ ಆಸ್ತಿ ಬಗ್ಗೆ ನಿರ್ಧರಿಸಲು ಸಾಧ್ಯವಿಲ್ಲ. ವಕ್ಪ್ ಆಸ್ತಿ ಅಲ್ಲ ಎನ್ನುವುದಾದರೆ ಅದನ್ನು ಪ್ರಶ್ನೆ ಮಾಡಬಹುದು. ಆದರೆ ಯಾರು ಇದನ್ನು ಪ್ರಶ್ನೆ ಮಾಡಿಲ್ಲ. ಹೈಕೋರ್ಟ್ ನಲ್ಲಿ ಒಂದೇ ದಿನದ ಅಂತರದಲ್ಲಿ ಹೇಗೆ ಆದೇಶಗಳು ಬದಲಾದವು? ಕರ್ನಾಟಕದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗ ಏಕಾಏಕಿ ಈ ವಿಚಾರ ಮುನ್ನಲೆಗೆ ಬಂದಿದೆ.
ಸರ್ಕಾರದ ವಾದ ಏನು?
ಎರಡು ದಿನ ಸರ್ಕಾರ ಈ ಸ್ಥಳ ಬಳಕೆ ಮಾಡಲಿದೆ. ಬಳಿಕ ಆಟದ ಮೈದಾನವಾಗಿ ಮುಂದುವರೆಯಲಿದೆ. ಭದ್ರತೆ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ. ಗಣೇಶ ಚತುರ್ಥಿ ಆಚರಿಸಲು ಬಳಕೆ ಮಾಡಲಾಗುತ್ತದೆ.
ವಕ್ಪ್ ಆಸ್ತಿ ಎನ್ನಲು ತೃಪ್ತಿಕರ ದಾಖಲೆಗಳಿಲ್ಲ. ಇದಕ್ಕೆ ಯಾವುದೇ ಮಾಲೀಕರು ಇಲ್ಲ. ಇದೊಂದು ಖಾಲಿ ಮೈದಾನ. 1930ರಲ್ಲಿ ಈದ್ಗಾ ಎಂದು ದಾಖಲಿಸಲಾಗಿದೆ. ಆಸ್ತಿ ಬಗ್ಗೆ ಸಿವಿಲ್ ಕೋರ್ಟ್ ನಿರ್ಧರಿಸಬೇಕು. ವಕ್ಫ್ ಬೋರ್ಡ್ ಇಲ್ಲಿಯವರೆಗೂ ಸಿವಿಲ್ ನ್ಯಾಯಾಲಯಕ್ಕೆ ಹೋಗಿಲ್ಲ. ಸರ್ಕಾರ ಹಲವು ದಾಖಲೆಗಳಲ್ಲಿ ಸರ್ಕಾರಿ ಜಾಗ, ಇನ್ನು ಕೆಲವು ದಾಖಲೆಗಳಲ್ಲಿ ಆಟದ ಮೈದಾನ ಎಂದು ದಾಖಲೆಗಳಿವೆ.
ಸುಪ್ರೀಂ ಪ್ರಶ್ನೆ
ಹಳೆಯ ಸ್ಥಳಗಳನ್ನು ಏಕಾಏಕಿ ಬದಲಿಸಲು ಸಾಧ್ಯವಿಲ್ಲ. ಈ ಬಗ್ಗೆ ಸುಪ್ರೀಂಕೋರ್ಟ್ ಈ ಹಿಂದೆ ಆದೇಶ ನೀಡಿದೆ. ಈದ್ಗಾ ಆಗಿ ಇದು ಬಹಳಷ್ಟು ವರ್ಷಗಳಿಂದ ಬಳಕೆ ಮಾಡಲಾಗುತ್ತಿದೆ. ಮೆಹ್ತಾ ನಿಮಗೆ ಈ ಕಾನೂನು ಬಗ್ಗೆ ಗೊತ್ತಿದೆ ಅಲ್ವಾ? ತುಷಾರ್ ಮೆಹ್ತಾಗೆ ನ್ಯಾಯಾಧೀಶರ ಪ್ರಶ್ನೆ ಮಾಡಿದರು.
Live Tv
[brid partner=56869869 player=32851 video=960834 autoplay=true]