ಬೆಂಗಳೂರು: ಓಲಾ (Ola), ಊಬರ್ (Uber) ಓಡಿಸಬಾರದು ಎಂದು ಸರ್ಕಾರ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೈಕೋರ್ಟ್ (Karnataka High Court) ಮಧ್ಯಂತರ ಆದೇಶ ಮಾಡಿದೆ.
ಓಲಾ, ಊಬರ್ ಸೇವೆಗೆ ಸಂಬಂಧಿಸಿದಂತೆ ಹೈಕೋರ್ಟ್‌ನ ಏಕಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿತು. ನಿನ್ನೆ ನಡೆದ ಸಭೆ ಕುರಿತು ಮಾಹಿತಿ ಪಡೆದ ನ್ಯಾಯಮೂರ್ತಿಗಳು, ಓಲಾ ಹಾಗೂ ಊಬರ್ ಓಡಿಸದಂತೆ ಸಾರಿಗೆ ಇಲಾಖೆ ಕೈಗೊಂಡಿದ್ದ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಐಷಾರಾಮಿ ವಾಹನದಲ್ಲಿ ಸರ್ವೀಸ್ ಚಾರ್ಜ್ ತೆಗದುಕೊಳ್ತಾ ಇದ್ದೇವೆ – ಆಟೋ ರಿಕ್ಷಾ ಐಷಾರಾಮಿನಾ? ಓಲಾ, ಉಬರ್‌ಗೆ ಹೈಕೋರ್ಟ್ ಪ್ರಶ್ನೆ
Advertisement
Advertisement
ಆಟೋಗೆ ಮಾತ್ರ ಅನುಮತಿ ಕೇಳುತ್ತಿದ್ದೀರಿ ಅಲ್ವಾ? ಕೇಂದ್ರ ಸರ್ಕಾರದ ನಿಯಮಾವಳಿ ಇದೆ. ಈ ನಿಯಮಾವಳಿ ಬಗ್ಗೆ ನಿನ್ನೆ ಯಾಕೆ ಹೇಳಿಲ್ಲ? ಸಭೆಯ ತೀರ್ಮಾನ ಏನು ಎಂದು ಪೀಠ ಪ್ರಶ್ನಿಸಿತು. ಕೆಲವೊಂದು ವಿಚಾರ ಪ್ರಸ್ತಾಪಕ್ಕೆ ಕಾಲಾವಕಾಶ ನೀಡುವಂತೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಮನವಿ ಮಾಡಿದರು. 12 ದಿನ ಕಾಲಾವಕಾಶ ಕಲ್ಪಿಸುವಂತೆ ಕೋರಿದರು. ಇದಕ್ಕೆ ಸಮ್ಮತಿಸಿದ ಪೀಠ, ಅಲ್ಲಿಯವರೆಗೂ ಯಾವುದೇ ಕ್ರಮಕೈಗೊಳ್ಳುವ ಹಾಗೇ ಇಲ್ಲ ಎಂದು ತಿಳಿಸಿತು.
Advertisement
ಸಾರಿಗೆ ಇಲಾಖೆ ಕ್ರಮವನ್ನು ಪ್ರಶ್ನಿಸಿದ ಪೀಠ, ಸರ್ಕಾರ ಯಾವುದೇ ಬಲವಂತದ ಕ್ರಮಕೈಗೊಳ್ಳುವಂತೆ ಇಲ್ಲ. ಓಲಾ, ಊಬರ್ ಕಂಪನಿ ಅನುಕೂಲಕರ ದರವನ್ನು ವಿಧಿಸಬೇಕು. ಪರವಾನಗಿ ಕಾಲಾವಕಾಶ ವಿಸ್ತರಿಸಬೇಕು ಎಂದು ಆದೇಶ ಹೊರಡಿಸಿತು. ಇದನ್ನೂ ಓದಿ: ಸರ್ಕಾರದಿಂದಲೇ ಆ್ಯಪ್ ಮಾಡಿ ಆಟೋ ಸೇವೆಗೆ ಅವಕಾಶ: ಶ್ರೀರಾಮುಲು
Advertisement
2021ರಲ್ಲಿ ಸಾರಿಗೆ ಇಲಾಖೆ ನಿಗದಿಪಡಿಸಿದ ದರವನ್ನು ಪಾಲಿಸಬೇಕು. ಹೆಚ್ಚುವರಿ ಸೇವೆಯ ಚಾರ್ಜ್ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಬೇಕು. 10 ರಿಂದ 15 ದಿನದ ಒಳಗೆ ಸರ್ಕಾರ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದ ನ್ಯಾಯಾಲಯ, ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿದೆ.