ಬೆಂಗಳೂರು: ನಂದಿ ಬೆಟ್ಟದ ಬಳಿಯ ಆವಲಗುರ್ಕಿ ಗ್ರಾಮದಲ್ಲಿ ಇಶಾ ಫೌಂಡೇಷನ್ (Isha Foundation) ಸ್ಥಾಪಿಸಿರುವ ಆದಿಯೋಗಿ ಪ್ರತಿಮೆಯನ್ನು(Adiyogi Statue) ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಸಕ್ತಿ ಅರ್ಜಿಯನ್ನು (PIL) ಹೈಕೋರ್ಟ್ ವಜಾಗೊಳಿಸಿದೆ.
ಅರ್ಜಿದಾರರು ತಪ್ಪು ಮಾಹಿತಿ ನೀಡಿ ಪಿಐಎಲ್ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್ (High Court) ಅರ್ಜಿಯನ್ನು ವಜಾಗೊಳಿಸಿತು.
Advertisement
ಬೇರೆಯವರ ಮೇಲೆ ಬೆರಳು ತೋರಿಸುವ ಮುನ್ನ ನೀವು ಸರಿಯಾಗಿರಬೇಕು. ಉದ್ದೇಶ ಮಾತ್ರವಲ್ಲ, ಮಾರ್ಗವೂ ಶುದ್ಧವಿರಬೇಕು ಎಂದು ಮಹಾತ್ಮ ಗಾಂಧಿ ಹೇಳಿಕೆಯನ್ನು ಉಲ್ಲೇಖಿಸಿದ ಸಿಜೆ ಪ್ರಸನ್ನ ಬಿ ವರಾಳೆ ಅರ್ಜಿ ವಜಾಗೊಳಿಸಿ ಉತ್ತಮ ಹಿನ್ನೆಲೆಯುಳ್ಳವರು ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿದರು. ಇದನ್ನೂ ಓದಿ: ಭಾರತದಲ್ಲಿ ಟ್ವಿಟ್ಟರ್ ಬ್ಲೂ ಟಿಕ್ ಬೇಕಾದ್ರೆ ಶುಲ್ಕ ಪಾವತಿಸಿ
Advertisement
Advertisement
ಅರ್ಜಿದಾರರ ಕ್ರಿಮಿನಲ್ ಹಿನ್ನೆಲೆಯನ್ನು ಬಹಿರಂಗಪಡಿಸಿಲ್ಲ. ಪಿಐಎಲ್ ನಿಯಮಗಳನ್ನು ಪಾಲಿಸದೇ ವಾಸ್ತವಾಂಶವನ್ನು ಮುಚ್ಚಿಟ್ಟು ಸಲ್ಲಿಸಲಾಗಿದೆ ಎಂದು ಇಶಾ ಫೌಂಡೇಶನ್ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡಿಸಿದ್ದರು.
Advertisement
ಏನಿದು ಪ್ರಕರಣ?
ಚಿಕ್ಕಬಳಾಪುರ ಕಸಬಾ ಹೋಬಳಿಯ ಚಂಬಳ್ಳಿಯ ಎಸ್. ಕ್ಯಾತಪ್ಪ ಮತ್ತಿತರರು ಕಾನೂನು ಉಲ್ಲಂಘಿಸಿ ಇಶಾ ಫೌಂಡೇಷನ್ ಆದಿಯೋಗಿ ಪ್ರತಿಮೆ ಸ್ಥಾಪನೆಯ ಅನುಮತಿ ನೀಡಲಾಗಿದೆ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರರ ಪರ ಎಂ.ಶಿವಪ್ರಕಾಶ್, ನಂದಿ ಗಿರಿಧಾಮದ ಬೆಟ್ಟ (Nandi Hills) ಸೇರಿದಂತೆ ನರಸಿಂಗ ದೇವರ ಬೆಟ್ಟಗಳ ಸಾಲುಗಳು ಈ ಭಾಗದ ಜಲ ಮೂಲಗಳಾಗಿದೆ. ನರಸಿಂಹ ದೇವರ ವಲಯಕ್ಕೆ ಸೇರಿವೆ. ಈ ಬೆಟ್ಟಗಳ ಸಾಲಿನಲ್ಲಿ ಔಷಧ ಸಸ್ಯಗಳು ದಟ್ಟವಾಗಿವೆ. ಸಾಲು ಬೆಟ್ಟಗಳ ಮಧ್ಯಭಾಗದಲ್ಲಿ ಇಶಾ ಪ್ರತಿಷ್ಠಾನಕ್ಕೆ ಅರಣ್ಯ ಸೇರಿ ನಾನಾ ಕಾಯ್ದೆಗಳನ್ನು ಉಲ್ಲಂಘಿಸಿ ವಾಣಿಜ್ಯ ಉದೇಶಕ್ಕಾಗಿ ಸರಕಾರಿ ಭೂಮಿ ಮಂಜೂರು ಮಾಡಲಾಗಿದೆ ಎಂದು ವಾದಿಸಿದ್ದರು. ಈ ಹಿಂದಿನ ವಿಚಾರಣೆಯ ವೇಳೆ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿ ಮಧ್ಯಂತರ ಆದೇಶ ಪ್ರಕಟಿಸಿತ್ತು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k