ಬೆಂಗಳೂರು: ರಸ್ತೆ ಗುಂಡಿಗಳ (Potholes) ವಿಚಾರವಾಗಿ ಬಿಬಿಎಂಪಿಯನ್ನು (BBMP) ಮತ್ತೊಮ್ಮೆ ಹೈಕೋರ್ಟ್ (High Court) ತರಾಟೆಗೆ ತೆಗೆದುಕೊಂಡಿದೆ.
ಕೋರ್ಟ್ ಆದೇಶಗಳು ಕೇವಲ ಆದೇಶಕ್ಕೆ ಮಾತ್ರ ಸೀಮಿತ ಆಗಿವೆ. ಆರು ವರ್ಷಗಳಿಂದ ಬೆಂಗಳೂರಿನ (Bengaluru) ರಸ್ತೆಗಳು ದುಸ್ಥಿತಿಯಲ್ಲಿಯೇ ಇವೆ. ರಸ್ತೆ ಗುಂಡಿಗಳಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚಿದೆ. ಆದರೂ ಬಿಬಿಎಂಪಿ (BBMP) ತಲೆಕೆಡಿಸಿಕೊಳ್ಳುತ್ತಿಲ್ಲ. ಕಳಪೆ ಕಾಮಗಾರಿಗಳು ನಡೆಯುತ್ತಿವೆ. ಬಿಬಿಎಂಪಿ ಅಧಿಕಾರಿಗಳನ್ನು ನಂಬಲು ನಾವು ಸಿದ್ಧ ಇಲ್ಲ. 3ನೇ ಸಂಸ್ಥೆಯಿಂದ ಕಾಮಗಾರಿ ದೃಢೀಕರಣದ ಅಗತ್ಯವಿದೆ. ಗುಣಮಟ್ಟ ಪರಿಶೀಲನೆಗೆ ಒಂದು ವಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್, ಹಿರಿಯ ಎಂಜಿನಿಯರ್‌ಗಳನ್ನು ನಿಯೋಜನೆ ಮಾಡಬೇಕು ಎಂದು ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಇದನ್ನೂ ಓದಿ: ಬಾಲಕೃಷ್ಣ ಕಾರಿನ ಮೇಲೆ ಕಲ್ಲು ತೂರಾಟ – ಅಶ್ವಥ್ ನಾರಾಯಣ ಸಂಬಂಧಿ ಕಾರಣ ಎಂದ ಮಾಜಿ ಶಾಸಕ
ಎನ್‍ಹೆಚ್‍ಎಐ (NHAI) ಎಂಜಿನಿಯರ್‌ಗಳಿಗೆ ಬಿಬಿಎಂಪಿ ಎಲ್ಲಾ ರೀತಿಯ ಸಹಕಾರ ಕೊಡಬೇಕು. ಗುಣಮಟ್ಟ ಪರಿಶೀಲನಾ ವರದಿಯನ್ನು ಹೈಕೋರ್ಟ್‍ಗೆ ಎನ್‍ಹೆಚ್‍ಎಐ ನೀಡಬೇಕು. ಬಿಬಿಎಂಪಿ ಅಧಿಕಾರಿಗಳ ಕರ್ತವ್ಯ ಲೋಪದ ಬಗ್ಗೆ ವರದಿ ಮಾಡಬೇಕು. ಸಲಹೆಗಳನ್ನು ಕೂಡ ವರದಿ ರೂಪದಲ್ಲಿ ನೀಡಬಹುದು ಎಂದು ಎನ್‍ಹೆಚ್‍ಎಐಗೆ ಹೈಕೋರ್ಟ್ ತಿಳಿಸಿದೆ. ಮುಂದಿನ ವಿಚಾರಣೆ ಡಿಸೆಂಬರ್ 7ಕ್ಕೆ ನಡೆಯಲಿದೆ. ಈ ಮಧ್ಯೆ, ಬಿಬಿಎಂಪಿ ಮುಖ್ಯ ಆಯುಕ್ತರು ರಸ್ತೆ ಗುಂಡಿ ಮುಚ್ಚಲು ನೀಡಿದ್ದ ಗಡುವನ್ನು ನವೆಂಬರ್ 5 ರಿಂದ ನವೆಂಬರ್ 10ಕ್ಕೆ ವಿಸ್ತರಣೆ ಮಾಡಿದ್ದಾರೆ. ಇನ್ನೂ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಕಾರಣ, ಹೂಡಿಕೆದಾರರಿಗೆ ಗುಂಡಿ ದರ್ಶನ ತಪ್ಪಿಸಲು ಅರಮನೆ ಮೈದಾನದ ಸುತ್ತಮುತ್ತಲ ರಸ್ತೆಗಳಿಗೆ ರಾತ್ರೋರಾತ್ರಿ ಡಾಂಬರೀಕರಣದ ಭಾಗ್ಯ ಕರುಣಿಸಲಾಗಿದೆ. ಜಯಮಹಲ್ ರಸ್ತೆಗೆ ಡಾಂಬರು ಹಾಕಲಾಗಿದೆ. ಆದ್ರೆ, ಪಕ್ಕದ ರಸ್ತೆಗಳ ಗುಂಡಿಗಳನ್ನು ಹಾಗೆಯೇ ಬಿಡಲಾಗಿದೆ. ಇದನ್ನೂ ಓದಿ: ಗೆಹ್ಲೋಟ್ ಹೊಗಳಿದ ಮೋದಿ – ಲಘುವಾಗಿ ಪರಿಗಣಿಸಬಾರದು ಎಂದು ಎಚ್ಚರಿಸಿದ ಪೈಲಟ್