ಬೆಂಗಳೂರು: ಕೋವಿಡ್ (Covid 19) ನಿಯಮ ಮೀರಿ ಮೇಕೆದಾಟು ಪಾದಯಾತ್ರೆ (Mekedatu Padayatra) ನಡೆಸಿದ್ದ ಡಿಸಿಎಂ ಡಿಕೆ ಶಿವಕುಮಾರ್‌ಗೆ (DK Shivakumar) ಹೈಕೋರ್ಟ್‌ನಿಂದ (Karnataka Highcourt) ಬಿಗ್ ರಿಲೀಫ್ ಸಿಕ್ಕಿದೆ.
ವಿಚಾರಣೆ ನಡೆಸಿದ್ದ ಹೈಕೋರ್ಟ್ ಒಂದು ಪ್ರಕರಣ ರದ್ದು ಮಾಡಿ ಎರಡು ಕೇಸ್‌ಗಳಿಗೆ ತಡೆಯಾಜ್ಞೆ ನೀಡಿದೆ. ಇದನ್ನೂ ಓದಿ: ಇತಿಹಾಸ ಹೇಳಿದ್ರೆ ಕಾಂಗ್ರೆಸ್‌ನವ್ರಿಗೆ ಮೈಯೆಲ್ಲಾ ಉರಿಯುತ್ತೆ, ಜನಕ್ಕೆ ಮೊದಲು ಗ್ಯಾರಂಟಿ ಕೊಡಿ – ಸೂಲಿಬೆಲೆ ತಿರುಗೇಟು
ಏನಿದು ಪ್ರಕರಣ?
ಮೇಕೆದಾಟು ಪಾದಯಾತ್ರೆ ವೇಳೆ ಕೊರೊನಾ ನಿಯಮ ಉಲ್ಲಂಘನೆ, ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ವಿವಿಧ ಠಾಣೆಗಳಲ್ಲಿ 8 ಕೇಸ್ ದಾಖಲಾಗಿದ್ದವು. ತಮ್ಮ ವಿರುದ್ಧ ದಾಖಲಾದ ಪ್ರಕರಣಗಳನ್ನ ರದ್ದು ಮಾಡುವಂತೆ ಡಿಕೆಶಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಡೆದ ಪಾದಯಾತ್ರೆ ವೇಳೆ ಕೊರೊನಾ ನಿಯಮ ಉಲ್ಲಂಘನೆ ಮತ್ತು ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಕೇಸ್ ದಾಖಲಾಗಿತ್ತು.