– ತೆರಿಗೆ ವಿನಾಯಿತಿ ದೊಡ್ಡ ವಿಷಯ ಅಲ್ಲ ಎಂದ ಡಿಸಿಎಂ
ನವದೆಹಲಿ: ಕರ್ನಾಟಕಕ್ಕೆ (Karnataka) ಎಲ್ಲಾ ಥರದಲ್ಲಿ ಅನ್ಯಾಯವಾಗಿದೆ. ಇಷ್ಟು ನಿರಾಶೆ, ನಿರ್ಲಕ್ಷ್ಯ ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
Advertisement
ಕೇಂದ್ರ ಬಜೆಟ್ (Union Budget 2025) ಕುರಿತು ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಜೆಟ್ ಪ್ರತಿಯ ಪ್ರತಿ ಲೈನ್ ಓದಿದೆ. ನಮ್ಮ ರಾಜ್ಯಕ್ಕೆ ಏನು ಅನುಕೂಲ ಆಗಿದೆ ಎಂದು ನಮ್ಮ ಕೇಂದ್ರ ಮಂತ್ರಿಗಳು, ಸಂಸದರು ಹೇಳಬೇಕು. ತೆರಿಗೆ ಕಟ್ಟುವ ಎರಡನೇ ಅತಿ ದೊಡ್ಡ ರಾಜ್ಯ ನಮ್ಮದು. ಐಟಿ ರಫ್ತಿನಲ್ಲಿ ನಾವೇ ಮುಂದೆ ಇದ್ದೇವೆ. ನಾವು ಸಾಕಷ್ಟು ಮನವಿ ಮಾಡಿದ್ದೆವು. ಪ್ರಧಾನಮಂತ್ರಿಗಳಿಗೆ, ಹಣಕಾಸು ಸಚಿವರಿಗೆ ಮನವಿ ಮಾಡಿದ್ದೆವು. ತೆರಿಗೆ ವಿನಾಯಿತಿ ದೊಡ್ಡ ವಿಷಯ ಅಲ್ಲ. ಎಷ್ಟು ಜನ ಟ್ಯಾಕ್ಸ್ ಕಟ್ಟೋರು ಇದ್ದಾರೆ. ಬೆಲೆ ಏರಿಕೆ ಜಾಸ್ತಿ ಆಗಿದೆ, ಇದರಲ್ಲಿ ದೊಡ್ಡ ಪ್ರಯೋಜನ ಏನಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ನವೆಂಬರ್ 15, 16ಕ್ಕೆ ಸಿಎಂ ಬದಲಾವಣೆ – ವಿಪಕ್ಷ ನಾಯಕ ಅಶೋಕ್ ಭವಿಷ್ಯ
Advertisement
Advertisement
ಬಜೆಟ್ ಓದಬೇಕು ಓದಿದ್ದಾರೆ. ಬೇರೆ ರಾಜ್ಯಗಳ ಸುದ್ದಿ ಬೇಡ. ಕರ್ನಾಟಕಕ್ಕೂ 5,400 ಕೋಟಿ ಕೊಡುತ್ತಾರೆ ಎಂದು ಕೊಟ್ಟರಾ? ಹಾಗೇ ಇತರೆ ರಾಜ್ಯಗಳಿಗೂ ಆಗಬಹುದು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಧ್ಯಮ ವರ್ಗದ ಜನತೆ ಪ್ರಧಾನಿ ಮೋದಿ ಹೃದಯದಲ್ಲಿದ್ದಾರೆ: ಅಮಿತ್ ಶಾ
Advertisement