ನವದೆಹಲಿ: ಮುಂದಿನ 23 ದಿನಗಳ ಕಾಲ ನಿತ್ಯ 2,600 ಕ್ಯೂಸೆಕ್ ನೀರು ತಮಿಳುನಾಡಿಗೆ (Tamil Nadu) ಹರಿಸುವಂತೆ ಕರ್ನಾಟಕಕ್ಕೆ (Karnataka) ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಆದೇಶಿಸಿದೆ. ಇಂದು (ಶುಕ್ರವಾರ) ದೆಹಲಿಯಲ್ಲಿ ಸಭೆ ನಡೆಸಿದ ಪ್ರಾಧಿಕಾರದ ಅಧ್ಯಕ್ಷ ಎಸ್‌ಕೆ ಹಲ್ದಾರ್ ನೀರು ಹರಿಸಲು ನಿರ್ದೇಶನ ನೀಡಿದ್ದಾರೆ.
ಅಕ್ಟೋಬರ್ 30 ರಂದು ಸಭೆ ನಡೆಸಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಅಧ್ಯಕ್ಷ ವಿನೀತ್ ಗುಪ್ತಾ, ನವೆಂಬರ್ 1 ರಿಂದ 23 ದಿನಗಳ ಕಾಲ ನಿತ್ಯ 2,600 ಕ್ಯೂಸೆಕ್ ನೀರು ಹರಿಸಲು ಶಿಫಾರಸು ಮಾಡಿದ್ದರು. ಇದೇ ಆದೇಶವನ್ನು ಕಾವೇರಿ ನೀರು (Cauvery Water) ನಿರ್ವಹಣಾ ಪ್ರಾಧಿಕಾರ ಎತ್ತಿ ಹಿಡಿದಿದೆ.
Advertisement
Advertisement
ಇಂದಿನ ಸಭೆಯಲ್ಲಿ ಕರ್ನಾಟಕ ಮೇಕೆದಾಟು ಬಗ್ಗೆ ಚರ್ಚೆಗೆ ಪಟ್ಟು ಹಿಡಿದಿತ್ತು. ಆದರೆ ಈ ಸಭೆಯಲ್ಲಿ ಚರ್ಚಿಸಲು ತಮಿಳುನಾಡು ವಿರೋಧ ವ್ಯಕ್ತಪಡಿಸಿತು. ಈ ಹಿನ್ನೆಲೆ ಮೇಕೆದಾಟು ಬಗ್ಗೆ ಚರ್ಚಿಸಲು ಮತ್ತೊಂದು ಸಭೆ ನಡೆಸಲು ತೀರ್ಮಾನ ಮಾಡಿದ್ದು ಶೀಘ್ರದಲ್ಲಿ ದಿನಾಂಕ ನಿಗದಿ ಮಾಡಲಾಗುವುದು ಎಂದು ಎಸ್‌ಕೆ ಹಲ್ದಾರ್ ಹೇಳಿದ್ದಾರೆ. ಇದನ್ನೂ ಓದಿ: ಶೀಘ್ರವೇ ವಿಪಕ್ಷ ನಾಯಕನ ಆಯ್ಕೆ: ಯಡಿಯೂರಪ್ಪ
Advertisement
Advertisement
ಸಭೆಯ ಬಳಿಕ ಮಾತನಾಡಿದ ಎಸಿಎಸ್ ರಾಕೇಶ್ ಸಿಂಗ್, ತಮಿಳುನಾಡು 13,000 ಕ್ಯೂಸೆಕ್ ನೀರು ಬಿಡಲು ಆಗ್ರಹಿಸಿತು. ನವೆಂಬರ್ 23 ರ ತನಕ 2,600 ಕ್ಯೂಸೆಕ್ ನೀರು ಬಿಡಲು ಪ್ರಾಧಿಕಾರ ಆದೇಶಿಸಿದೆ. ಈ ನಡುವೆ ಮತ್ತೊಂದು ಸಕಾರಾತ್ಮಕ ಬೆಳವಣಿಗೆ ಆಗಿದೆ. ಮೇಕೆದಾಟು ಯೋಜನೆ ಚರ್ಚೆಗೆ ಪ್ರತ್ಯೇಕ ದಿನಾಂಕ ನಿಗದಿ ಮಾಡಲು ಪ್ರಾಧಿಕಾರ ಒಪ್ಪಿದೆ. ಶೀಘ್ರದಲ್ಲೇ ದಿನಾಂಕ ನಿಗದಿ ಮಾಡಲಾಗುತ್ತದೆ. ತಮಿಳುನಾಡಿನವರು ಇಂಟರ್ ಲಿಂಕಿಂಗ್ ಯೋಜನೆ ಚರ್ಚೆ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಕರ್ನಾಟಕದ ಆಕ್ಷೇಪ ಇದೆ. ಪ್ರತ್ಯೇಕ ಸಭೆಯಲ್ಲಿ ಈ ಎರಡು ಯೋಜನೆಗಳು ಚರ್ಚೆಗೆ ಬರಬಹುದು ಎಂದರು. ಇದನ್ನೂ ಓದಿ: ಪರಮೇಶ್ವರ್ ಸಿಎಂ ಆಗ್ತಾರೆ; AICC ಸೂಚನೆಗೆ ಹೆದರಲ್ಲ: ಕೆಎನ್ ರಾಜಣ್ಣ ಸಂಚಲನದ ಹೇಳಿಕೆ
Web Stories