ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಕೆಟ್ಟ ಆಡಳಿತದಿಂದ ಕರ್ನಾಟಕ ದರೋಡೆಕೋರರ ಸ್ವರ್ಗವಾಗಿದೆ ಎಂದು ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರು ಬ್ಯಾಂಕ್ ದರೋಡೆ ಪ್ರಕರಣ ಮತ್ತು ಬೀದರ್ ಎಟಿಎಮ್ ದರೋಡೆ ಪ್ರಕರಣದ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕ ಈಗ ಲಾಲು ಪ್ರಸಾದ್ ಯಾದವ್ ರಾಜ್ಯದ ತರಹ ಪ್ರಸಿದ್ಧಿ ಆಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೆ ಆಗಿದೆ. ಮಂಗಳೂರಿನಲ್ಲಿ 5 ನಿಮಿಷದಲ್ಲಿ 15 ಕೋಟಿ ರೂ. ಲೂಟಿ ಆಗಿದ್ದು, ಹಾಲಿವುಡ್ ಸಿನಿಮಾ ರೀತಿ ದರೋಡೆ ಆಗಿದೆ ಎಂದು ಕಿಡಿಕಾರಿದರು.ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಅಪ್ಪಂದಿರ ಮನೆಯಿಂದ ಈ ಸರ್ಕಾರ ಅನುದಾನ ಕೊಡ್ತಿಲ್ಲ – ಪ್ರಿಯಾಂಕ್ ಖರ್ಗೆ ವಿರುದ್ಧ ಅಶೋಕ್ ಕಿಡಿ
Advertisement
Advertisement
ಸಿಎಂ ಮಂಗಳೂರಿನಲ್ಲಿ ಇದ್ದಾಗಲೇ ದರೋಡೆ ಮಾಡಿದ್ದಾರೆ. ಕರ್ನಾಟಕದ ಪೊಲೀಸರ ಬಗ್ಗೆ ಅವರಿಗೆ ಎಷ್ಟು ಭಯ ಇದೆ ಎಂದು ಗೊತ್ತಾಗುತ್ತದೆ. ಫಟಾಫಟ್ ಅಂತ ರಾಹುಲ್ ಗಾಂಧಿ ಹೇಳಿದ್ದರು, ಇಲ್ಲಿ 5 ನಿಮಿಷಗಳಲ್ಲಿ ಫಟಾಫಟ್ ಅಂತ 15 ಕೋಟಿ ರೂ. ಲೂಟಿ ಆಗಿದೆ. ಸಿಎಂ ಸಮಕ್ಷಮದಲ್ಲಿ ದರೋಡೆ ಆಗಿದೆ ಅಂತ ಹೇಳಬಹುದು. ಸಿಎಂ ಆಡಳಿತಕ್ಕೆ ಹಿಡಿದ ಕೈಗನ್ನಡಿ, ಅವರ ಅಸಹಾಯಕತೆಯಿಂದ ಹೀಗೆ ಆಯ್ತು ಅಂತ ಹೇಳಿದ್ದಾರೆ. ಕರ್ನಾಟಕದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅನ್ನೋದಕ್ಕೆ ಇದೇ ಸಾಕ್ಷಿ ಎಂದು ಕಿಡಿಕಾರಿದರು.
Advertisement
ಬೀದರ್‌ನಲ್ಲಿ ಹಾಡುಹಗಲೆ ಎಟಿಎಮ್ ದರೋಡೆ ಆಗಿದೆ. ಬೆಳಗ್ಗೆ 11 ಗಂಟೆ ಸಮಯದಲ್ಲಿ ಪೀಕ್ ಟೈಂನಲ್ಲಿ ದರೋಡೆ ಆಗಿದೆ. ಈ ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆಗೆ ಬೆಲೆ ಇಲ್ಲ. ದರೋಡೆಕಾರರಿಗೆ ಸ್ವರ್ಗದ ಸರ್ಕಾರ ಇದು. ಬನ್ನಿ ದರೋಡೆ ಮಾಡಿಕೊಂಡು ಹೋಗಿ ಅಂತ ಹೇಳುತ್ತಿದ್ದಾರೆ. ಇಷ್ಟು ದಿನ ರಾಜ್ಯದ ಒಳಗೆ ಆಗ್ತಿತ್ತು. ಈಗ ಹೊರರಾಜ್ಯದಿಂದ ಬಂದು ದರೋಡೆ ಆಗ್ತಿದೆ. ಸಿಎಂ, ಗೃಹ ಸಚಿವರು ಇದ್ದಾರಾ? ಇನ್ನು ಮುಂದೆ ಜನರು ಬ್ಯಾಂಕ್‌ಗೆ ಹೋಗುವಾಗ ನಿಮ್ಮನ್ನು ನೀವೇ ರಕ್ಷಣೆ ಮಾಡಿಕೊಳ್ಳಿ. ಈ ಘಟನೆಯಿಂದ ಇಡೀ ಕರ್ನಾಟಕ ಬೆಚ್ಚಿಬಿದ್ದಿದೆ. ದರೋಡೆಕೋರರ ಜಾತ್ರೆ ಕರ್ನಾಟಕದಲ್ಲಿ ನಡೆಯುತ್ತಿದೆ. ರಾಜ್ಯದಲ್ಲಿ ರೌಡಿಗಳ ಅಟ್ಟಹಾಸ ನಡೆಯುತ್ತಿದೆ. ಪೊಲೀಸರ ಬಳಿ ಗನ್ ಇಲ್ಲ. ದಡೋರೆಕೋರರು, ರೌಡಿಗಳ ಬಳಿ ದೊಡ್ಡ ದೊಡ್ಡ ವೆಪನ್ ಇದೆ. ಇದು ಪೊಲೀಸರು ತಲೆ ತಗ್ಗಿಸುವ ಘಟನೆ ಎಂದು ವಾಗ್ದಾಳಿ ನಡೆಸಿದರು.
Advertisement
ಪೊಲೀಸರು ಬೀಟ್‌ನಲ್ಲಿ ಇದ್ದರೂ ಕೂಡ ಯಾರನ್ನು ಬಂಧಸಿಲ್ಲ. ಸಿಎಂ ಅವರೇ ಟೋಲ್ ಏನ್ ಆಯ್ತು ಎಂದು ಪೊಲೀಸರಿಗೆ ಹೇಳಿದ್ದಾರೆ. ಸಿಸಿಟಿವಿ ವ್ಯವಸ್ಥೆ ಇರುತ್ತದೆ. ಪೊಲೀಸರ ಬಳಿ ಸಿಎಂ ಅಂಗಲಾಚುವ ಸ್ಥಿತಿ ಬಂದಿದೆ. ಸಿಎಂಗೆ ಮಾಹಿತಿ ಇಲ್ಲದಂತೆ ಆಗಿದೆ. ಕಾನೂನು ಸುವ್ಯವಸ್ಥೆ ಜನ ನೋಡಿದ್ದಾರೆ. ಹುಬ್ಬಳ್ಳಿ ನೇಹಾ ಕೊಲೆ, ಪಾಕಿಸ್ತಾನ ಜಿಂದಾಬಾದ್ ಕೇಸ್, ಹಸು ಕೆಚ್ಚಲು ಕೊಯ್ದರು ಕ್ರಮ ಆಗಿಲ್ಲ. ಸಿದ್ದರಾಮಯ್ಯ ಸರ್ಕಾರ ಬಂದಾಗಿನಿAದ ಪ್ರತಿ ತಿಂಗಳು ರಾಜ್ಯದ ಜನರಿಗೆ ಒಂದೊಂದು ಗಿಫ್ಟ್ ಸಿಕ್ಕಿದೆ. ಪೊಲೀಸ್ ಇಲಾಖೆ ವರ್ಗಾವಣೆ ಮಾಫಿಯಾದಲ್ಲಿ ಸಿಕ್ಕಿ ಹಾಕಿಕೊಂಡಿದೆ. ವರ್ಗಾವಣೆಗೆ ಹಣ ಕೊಟ್ಟು ಬಂದವರಿಂದ ಹೇಗೆ ಕೆಲಸ ನಿರೀಕ್ಷೆ ಮಾಡೋಕೆ ಸಾಧ್ಯ. ಈ ಸರ್ಕಾರದಲ್ಲಿ ಟ್ರಾನ್ಸ್ಫರ್ ದಂಧೆ ಲೂಟಿ ಆಗಿದೆ. ಕರ್ನಾಟಕದ ಹೆಸರು ಮಣ್ಣುಪಾಲು ಆಗಿದೆ ಎಂದು ಸರ್ಕಾರ ಮತ್ತು ಸಿಎಂ ವಿರುದ್ಧ ಕಿಡಿಕಾರಿದರು.
ಇಷ್ಟೆಲ್ಲ ದೊಡ್ಡ ಘಟನೆಗಳು ಆದರೂ ಸಿದ್ದರಾಮಯ್ಯ ಗೃಹ ಇಲಾಖೆಗೆ ಪ್ರಶ್ನೆ ಮಾಡಿಲ್ಲ. ಪಾಪ ಅವರಿಗೆ ಸಮಯ ಇಲ್ಲ ಎಂದು ಕಾಣುತ್ತದೆ. ಸಿಎಂಗೆ ಬೆಳಗಾವಿ ಅಧಿವೇಶ ಗಲಾಟೆ, ಡಿಕೆಶಿ, ಲಕ್ಷ್ಮಿ ಹೆಬ್ಬಾಳ್ಕರ್ ಗಲಾಟೆ, ಸಿಎಂ ಕುರ್ಚಿ ಕಾದಾಟ, ಅಧ್ಯಕ್ಷ ಕುರ್ಚಿ ಕಾದಾಟದಲ್ಲಿ ಸರ್ಕಾರ ಮುಳುಗಿ ಹೋಗಿದೆ. ಕಾಂಗ್ರೆಸ್‌ನಲ್ಲಿ ಅಧಿಕಾರದ ಕಿತ್ತಾಟ ಜಾಸ್ತಿ ಆಗಿದೆ. ತಬ್ಬಲಿ ನೀನಾದೆ ಮಗನೇ ಅನ್ನುವ ರೀತಿ ಕರ್ನಾಟಕ ಕಾನೂನು ಸುವ್ಯವಸ್ಥೆಯಲ್ಲಿ ಆಗಿದೆ. ಕರ್ನಾಟಕ ದರೋಡೆ ರಾಜ್ಯವಾಗಿ ಪರಿವರ್ತನೆ ಆಗಿದೆ. ಮಾನ ಮರ್ಯಾದೆ ಇದ್ದರೆ ಕುರ್ಚಿ ಜಗಳ ಬಿಟ್ಟು, ಅಧಿಕಾರ ವ್ಯಾಮೋಹ ಬಿಟ್ಟು ಕಾನೂನು ಸುವ್ಯವಸ್ಥೆ ಉಳಿಸುವ ಕೆಲಸ ಮಾಡಲಿ ಎಂದು ಆಗ್ರಹಿಸಿದರು.
ಇದನ್ನೂ ಓದಿ: ಭಾರತೀಯ ಆಟೋ ಕ್ಷೇತ್ರಕ್ಕೆ ಹಸಿರು ಬಲ – ಕೇಂದ್ರದ ಒತ್ತಾಸೆಯಿಂದ ಇವಿ ವಾಹನ ಮಾರಾಟ ಹೆಚ್ಚಳ: ಹೆಚ್‌ಡಿಕೆ