– ಆನೆ-ಮಾನವ ಸಂಘರ್ಷ ತಡೆ, ಪುಂಡಾನೆಗಳ ಸೆರೆ ಕಾರ್ಯಾಚರಣೆಗೆ ಆನೆಗಳ ಬಳಕೆ
ಬೆಂಗಳೂರು: ಇಂದು ಆಂಧ್ರ (Andhra Pradesh) ಡಿಸಿಎಂ ಪವನ್ ಕಲ್ಯಾಣ್ (Pavan Kalyan) ರಾಜ್ಯಕ್ಕೆ ಭೇಟಿ ನೀಡಿದಾಗ ರಾಜ್ಯ ಸರ್ಕಾರ (Karnataka Government) 4 ಕುಮ್ಕಿ ಆನೆಗಳನ್ನು ಹಸ್ತಾಂತರಿಸಿದೆ.
ಆಂಧ್ರದ ಡಿಸಿಎಂ ಹಾಗೂ ಅರಣ್ಯ ಸಚಿವರು ಕೂಡ ಆಗಿರುವ ಪವನ್ ಕಲ್ಯಾಣ್ ಅವರು ಆಂಧ್ರಪ್ರದೇಶಕ್ಕೆ 8 ಕುಮ್ಕಿ ಆನೆಗಳನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಇವುಗಳನ್ನು ಆನೆ-ಮಾನವ ಸಂಘರ್ಷ ತಡೆ, ಪುಂಡಾನೆಗಳ ಸೆರೆ ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತದೆ. ಕರ್ನಾಟಕ ಸರ್ಕಾರ 6 ಆನೆಗಳನ್ನು ನೀಡಲು ಸಮ್ಮತಿಸಿದ್ದು, ಇಂದು 4 ಆನೆಗಳನ್ನು ಹಸ್ತಾಂತರಿಸಿದ್ದಾರೆ.ಇದನ್ನೂ ಓದಿ: ರಾಜ್ಯದ ಪ್ರಭಾರ ಡಿಜಿ & ಐಜಿಪಿಯಾಗಿ ಎಂ.ಎ.ಸಲೀಂ ನೇಮಕ
ಕುಮ್ಕಿ ಆನೆಗಳಾಗಿ ಜ್ಯೂನಿಯರ್ ಅಭಿಮನ್ಯು, ರಂಜನ್, ಕೃಷ್ಣ, ದೇವ ಆನೆಗಳನ್ನು ಹಸ್ತಾಂತರಿಸಿದ್ದು, 1 ತಿಂಗಳ ಕಾಲ ಮಾವುತರು ಆಂಧ್ರಪ್ರದೇಶದವರಿಗೆ ತರಬೇತಿ ಕೊಡಲಿದ್ದಾರೆ.
ಆನೆಗಳನ್ನು ಸ್ವೀಕರಿಸಿ ಪವನ್ ಕಲ್ಯಾಣ್ ಅವರು ಮಾತನಾಡಿ, ಈ ಪುಣ್ಯಭೂಮಿಗೆ ಹಾಗೂ ಕರ್ನಾಟಕ ಜನತೆಗೆ ನಮಿಸುತ್ತಾ, ಕಳೆದ ವರ್ಷ ನಾನು ಇಲ್ಲಿಗೆ ಬಂದಿದ್ದೆ. ಆಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕುಮ್ಕಿ ಆನೆಗಳನ್ನು ಹಸ್ತಾಂತರದ ಬಗ್ಗೆ ಚರ್ಚಿಸಿದ್ದೆವು. ಅಂದು ಆಡಿದ ಮಾತಿನಂತೆ ಇಂದು ಕುಮ್ಕಿ ಆನೆಗಳನ್ನು ಹಸ್ತಾಂತರ ಮಾಡಿದಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವ ಈಶ್ವರ್ ಖಂಡ್ರೆ ಅವರಿಗೆ ಕನ್ನಡದಲ್ಲಿ ಧನ್ಯವಾದ ತಿಳಿಸಿದರು. ಆದಷ್ಟು ಕನ್ನಡದಲ್ಲಿ ಮಾತನಾಡಿದ ಅವರು, ಭಾಷಣದುದ್ದಕ್ಕೂ ಕುವೆಂಪು ಅವರ ಸಾಲುಗಳನ್ನು ಅಲ್ಲಲ್ಲಿ ಬಳಸಿಕೊಂಡರು.
ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಈಶ್ವರ್ ಖಂಡ್ರೆ, ದಿನೇಶ್ ಗುಂಡೂರಾವ್, ಜಾರ್ಜ್, ಭೈರತಿ ಸುರೇಶ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.ಇದನ್ನೂ ಓದಿ: NOC ನೀಡಲು 10 ಲಕ್ಷಕ್ಕೆ ಬೇಡಿಕೆ – ಬೆಂಗಳೂರಲ್ಲಿ ‘ಲೋಕಾ’ ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು