ಧಾರವಾಡ: ಪದವೀಧರ ಶಿಕ್ಷಕರ ಹುದ್ದೆಗಳ ನೇಮಕಾತಿಯ ಸಂಬಂಧ ಬಿಡುಗಡೆಯಾದ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಅಭ್ಯರ್ಥಿಗಳ ಅಸಮಾಧಾನಗೊಂಡಿದ್ದಾರೆ.
2022ರ ಮೇ ತಿಂಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು 15 ಸಾವಿರ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಈ ಶಿಕ್ಷಕರ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು(Karnataka Graduate Teacher Recruitment 2022 selection list ) ಪ್ರಕಟ ಮಾಡಿದ್ದಕ್ಕೆ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Advertisement
Advertisement
ಸರ್ಕಾರ 2022 ರ ಮೇ ತಿಂಗಳಿನಲ್ಲಿ ಸಿಇಟಿ ಪರೀಕ್ಷೆ ನಡೆಸಿ, ಆ ಮೂಲಕ ಶಿಕ್ಷಕರ ನೇಮಕಾತಿ ನಡೆಸಿತ್ತು. ಈ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಂದ ದಾಖಲೆಗಳ ಪರಿಶೀಲನೆಯನ್ನೂ ಸರ್ಕಾರ ನಡೆಸಿತ್ತು. ವಿಪರ್ಯಾಸವೆಂದರೆ ಸಿಇಟಿ ಪರೀಕ್ಷೆ ಪಾಸಾಗಿ ದಾಖಲೆಗಳ ಪರಿಶೀಲನೆಗೆ ಹಾಜರಾಗದ ಅಭ್ಯರ್ಥಿಗಳ ಹೆಸರನ್ನೂ ಇದೀಗ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಪ್ರಕಟ ಮಾಡಲಾಗಿದ್ದು, ಇದು ಅರ್ಹ ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: 1 ರೂ.ಗೆ ಲೀಸ್ ಪಡೆದಿದ್ದ ಅವಧಿ ಮುಕ್ತಾಯ – ಜಾಗ ಬಿಟ್ಟುಕೊಡುವಂತೆ ಕೇಳಿದ ದೇವಸ್ಥಾನ ಮಂಡಳಿ
Advertisement
ರಾಯಚೂರು ಜಿಲ್ಲೆಯ ಸತೀಶ್, ಜಲಲರೆಡ್ಡಿ, ಅನೀಲ್, ಕವಿತಾ ಜಿ, ತೋಗಾಂವ, ಪ್ರಿಯಾಂಕ್ ಬಸವರಾಜ್, ಅಜ್ಜಪ್ಪ, ಶರಣಪ್ಪ, ಪೂರ್ಣಚಂದ್ರ ಹಾಗೂ ಅನುರಾಜ್ ಎಂಬುವವರು ದಾಖಲೆಗಳ ಪರಿಶೀಲನೆಗೆ ಹಾಜರಾಗದೇ ಇದ್ದರೂ ಅವರ ಹೆಸರನ್ನು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಪ್ರಕಟ ಮಾಡಲಾಗಿದೆ. ಸ್ವತಃ ಈ ಅಭ್ಯರ್ಥಿಗಳೇ ತಾವು ದಾಖಲೆಗಳ ಪರಿಶೀಲನೆಗೆ ಹಾಜರಾಗಿಲ್ಲ ಎಂದೂ ಹೇಳಿಕೊಂಡಿದ್ದಾರೆ. ಇದು ಸರಿಯಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಮಾಡಿದ ದೊಡ್ಡ ಅನ್ಯಾಯ. ಈ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ತಡೆಹಿಡಿದು ಮರುಪಟ್ಟಿ ಬಿಡುಗಡೆ ಮಾಡಬೇಕು ಎಂದು ರಾಯಚೂರಿನ ಅಭ್ಯರ್ಥಿಗಳು ಧಾರವಾಡದಲ್ಲಿ ಒತ್ತಾಯ ಮಾಡಿದ್ದಾರೆ.