ಬೆಂಗಳೂರು: ವಿರೋಧಕ್ಕೆ ಕಾರಣವಾಗಿದ್ದ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾ ಮಂಡಳಿ ಅಧ್ಯಕ್ಷನಿಗೆ ನೀಡಿದ್ದ ರಾಜ್ಯ ಸಚಿವ ಸಂಪುಟ ಸ್ಥಾನವನ್ನ ಸರ್ಕಾರ ಹಿಂಪಡೆದಿದೆ.
ಬಿ.ಡಿ.ಭೂಕಾಂತ್ ಅವರಿಗೆ ನೀಡಿದ್ದ ರಾಜ್ಯ ಸಂಪುಟ ಸ್ಥಾನವನ್ನ ಸರ್ಕಾರ ಹಿಂಪಡೆದಿದೆ. ಬಿ.ಡಿ.ಭೂಕಾಂತ್ ಅವರು ಬಿಜೆಪಿ ಕಾರ್ಯಕರ್ತ ಆಗಿದ್ದರು. ಬಿಜೆಪಿ ಕಾರ್ಯಕರ್ತನಿಗೆ ರಾಜ್ಯ ಸಚಿವ ಸ್ಥಾನ ನೀಡಿದ್ದಕ್ಕೆ ದೊಡ್ಡಮಟ್ಟದ ವಿರೋಧ ಪಕ್ಷದಲ್ಲಿ ಉಂಟಾಗಿತ್ತು. ಪಕ್ಷದಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಸಚಿವ ಸ್ಥಾನ ಹಿಂಪಡೆದು ಸರ್ಕಾರ ಆದೇಶ ಹೊರಡಿಸಿದೆ.

