ಬೆಂಗಳೂರು: ಒಂದು ಭಾವುಟ ಇರುವಾಗ, ಪಾಟೀಲ್ ಪುಟ್ಟಪ್ಪ ಹೇಳಿದ್ದಾರೆ ಎನ್ನುವ ಕಾರಣಕ್ಕೆ ಧ್ವಜ ವಿನ್ಯಾಸಕ್ಕೆ ಯಾರನ್ನು ಕೇಳಿ ಮುಂದಾಗಿದ್ದೀರಿ ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯನ್ನು ಆಯೋಜಿಸಿ ಮಾತನಾಡಿದ ಅವರು, ನಾನು ರಾಮಮೂರ್ತಿ ಸೇರಿ ಬಾವುಟ ಮೊದಲು ಹಾರಿಸಿದ್ದೇವೆ. ಹಳದಿ, ಕೆಂಪು ಬಣ್ಣದ ಧ್ವಜಕ್ಕೆ ನಾನು ಮತ್ತು ರಾಮಮೂರ್ತಿ ಕಾರಣ. ನಾನು ಹೋರಾಟಗಾರನಾಗಿದ್ದು, ನನ್ನ ಒಂದು ಮಾತನ್ನು ಕೇಳಿಲ್ಲ ಎಂದು ಪ್ರಶ್ನಿಸಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
ಮೊದಲು ಯಾವ ಬಾವುಟ ವಿನ್ಯಾಸ ಮಾಡೋದಕ್ಕೆ ಹೊರಟಿದ್ದೀರಿ?. ಅದು ಯಾವ ಬಣ್ಣ, ಸಮಿತಿಯ ಅಜೆಂಡಾ ಏನು ಎನ್ನುವುದನ್ನು ಮೊದಲು ಬಹಿರಂಗಪಡಿಸಿ. ಸಾಹಿತಿಗಳು ಯಾರೂ ಬೇಕಾಗಿಲ್ಲ. ಈ ಇತಿಹಾಸ ಯಾವ ಸಾಹಿತಿಗಳಿಗೂ ಗೊತ್ತಿಲ್ಲ, ಯಾವ ಕಾರಣಕ್ಕೂ ಬಾವುಟದ ಒಂದು ಗೆರೆಯನ್ನು ಬದಲಾಯಿಸಲು ಬಿಡಲ್ಲ. ಮೊದಲು ನೇಮಿಸಿದ ಸಮಿತಿಯನ್ನು ರದ್ದು ಮಾಡಿ ಎಂದು ಅವರು ಹೇಳಿದರು.
Advertisement
ರಾಷ್ಟ್ರ ಧ್ವಜಕ್ಕೆ ವಿರೋಧವಿಲ್ಲ. ಆದರೆ ಇದು ಕನ್ನಡಿಗರ ಧ್ವಜ, ಜುಲೈ 29 ರಂದು ಕನ್ನಡ ಭಾವುಟ ಸಮ್ಮೇಳನ ಹಾಗೂ ರಾಜ್ಯಾದ್ಯಂತ ಕನ್ನಡ ಧ್ವಜದ ಬೃಹತ್ ಮರವಣಿಗೆ ಮಾಡಲಿದ್ದೇವೆ. ಬಾವುಟದ ವಿಚಾರದಲ್ಲಿ ಕನ್ನಡಿಗರನ್ನು ತಡೆಯಬೇಡಿ ಎಂದು ಅವರು ರಾಜ್ಯ ಸರ್ಕಾರ ಹಾಗೂ ವಿರೋಧ ಪಕ್ಷದವರಲ್ಲಿ ಕೇಳಿಕೊಂಡರು.
Advertisement
ಬಿಜೆಪಿಯವರಿಗೆ ಧ್ವಜದ ಬಗ್ಗೆ ಮಾತಾನಾಡಲು ಯಾವುದೇ ನೈತಿಕತೆ ಇಲ್ಲ. ಬಿಜೆಪಿಯವರಿಗೆ ತಾಕತ್ತು ಇದ್ದರೆ ಮಹದಾಯಿ ವಿಚಾರ ನೋಡಿಕೊಳ್ಳಲಿ. ಧ್ವಜದ ವಿಚಾರ ಮಾತನಾಡುವುದು ಬೇಡ ಎಂದು ವಾಟಾಳ್ ವಾಗ್ದಾಳಿ ನಡೆಸಿದರು.
Advertisement
ಇದನ್ನೂ ಓದಿ: ಪ್ರತ್ಯೇಕ ನಾಡ ಧ್ವಜ ಚರ್ಚೆ: ಕಾಂಗ್ರೆಸ್, ಬಿಜೆಪಿ ಹೇಳಿದ್ದೇನು? ಡಿವಿಎಸ್ ಹೊರಡಿಸಿದ ಸುತ್ತೋಲೆ ಏನಾಯ್ತು?