– ಸಾರಿಗೆ ಇಲಾಖೆಯಿಂದ ದರ ನಿಗದಿ
ಬೆಂಗಳೂರು: ಓಲಾ, ಉಬರ್(Ola, Uber) ಆಟೋ ಬಳಕೆಗೆ ಸಾರಿಗೆ ಇಲಾಖೆ ದರವನ್ನು ನಿಗದಿ ಮಾಡಿದೆ. ಕನಿಷ್ಠ ಶುಲ್ಕದ ಜೊತೆ ಶೇ.5 ಸೇವಾ ಶುಲ್ಕ ಅಥವಾ ಕಮಿಷನ್ ದರ ನಿಗದಿ ಮಾಡಿದೆ.
Advertisement
ಈ ದರ ಅಲ್ಲದೇ ಸರಕು ಮತ್ತು ಸೇವಾ ತೆರಿಗೆ(GST)) ಸೇರಿಸಬಹುದು ಎಂದು ಸರ್ಕಾರ ಹೈಕೋರ್ಟ್‌ಗೆ (Hig Court)ತಿಳಿಸಿದೆ. ಇದನ್ನೂ ಓದಿ: ತಡೆಯಾಜ್ಞೆ ತೆರವು – ಕಾಂತಾರ ವರಾಹರೂಪಂ ಹಾಡು ಬಳಕೆಗೆ ಅನುಮತಿ
Advertisement
Advertisement
ಆಪ್ ಆಧಾರಿತ ಸೇವೆ ಓಲಾ, ಉಬರ್ ಆಟೋ ಬಳಕೆಗೆ ದರ ನಿಗದಿ ಮಾಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ನ.25ರ ಒಳಗಡೆ ದರವನ್ನು ನಿರ್ಧಾರ ಮಾಡಿ ತಿಳಿಸಲಾಗುವುದು ಎಂದು ಸರ್ಕಾರ ಹೇಳಿತ್ತು.
Advertisement
ಆ್ಯಪ್ ಆಧಾರಿತ ಆಟೋ ರಿಕ್ಷಾಗಳಿಗೆ ನಿರ್ಬಂಧ ವಿಧಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಉಬರ್ ಇಂಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿತ್ತು. ಅಲ್ಲದೆ ದರ ಹೆಚ್ಚಳಕ್ಕೆ ಕೋರಿ ಓಲಾ, ಉಬರ್ ಸಂಸ್ಥೆಗಳು ಮಧ್ಯಂತರ ಅರ್ಜಿ ಸಲ್ಲಿಸಿದ್ದವು.
ಸರ್ಕಾರ ಈಗ ದರ ನಿಗದಿ ಮಾಡಿದ್ದು ಮುಂದಿನ ವಿಚಾರಣೆ ನ.28 ಸೋಮವಾರದಂದು ಹೈಕೋರ್ಟ್‌ನಲ್ಲಿ ನಡೆಯಲಿದೆ.