ಓಲಾ, ಉಬರ್ ದರ ನಿಗದಿ ಸಭೆ – ಯಾವುದೇ ನಿರ್ಧಾರಕ್ಕೆ ಬಾರದ ಮೀಟಿಂಗ್

Advertisements

ಬೆಂಗಳೂರು: ಗ್ರಾಹಕರನ್ನು ಮತ್ತು ಚಾಲಕರನ್ನು ಸುಲಿಗೆ ಮಾಡುತ್ತಿದ್ದ ಓಲಾ (Ola), ಉಬರ್ (Uber), ರ್‍ಯಾಪಿಡೋ (Rapido) ಆಟೋಗಳ (Auto) ಕಂಪನಿಗಳಿಗೆ ಹೊಸದಾಗಿ ದರ ನಿಗದಿಪಡಿಸಲು ಸರ್ಕಾರ ಮುಂದಾಗಿದೆ.

Advertisements

15 ದಿನದೊಳಗೆ ಹೊಸ ದರ ನಿಗದಿ ಮಾಡುವಂತೆ ಹೈಕೋರ್ಟ್ (High Court) ಸೂಚಿಸಿದ್ದ ಬೆನ್ನಲ್ಲೇ ಸರ್ಕಾರ ಇಂದು ಓಲಾ, ಉಬರ್ ರ್‍ಯಾಪಿಡೋ ಹಾಗೂ ಆಟೋ ಯೂನಿಯನ್ ಸಭೆ ನಡೆಸಿದೆ. ಸದ್ಯ ಸಾರಿಗೆ ಇಲಾಖೆ 2ಕೀ ಮೀಟರ್‌ಗೆ 30 ರೂ. ನಿಗದಿ ಮಾಡಿದ್ದು. ಮಿನಿಮಮ್ ದರ ಎರಡು ಕಿ.ಮೀಗೆ 50 ರೂ. ಹಾಗೂ ನಂತರದ ಪ್ರತೀ ಕಿ.ಮೀಗೆ 25 ರೂ. ಮಾಡಿ ಅಂತಾ ಓಲಾ, ಉಬರ್ ಕಂಪನಿಗಳು ಡಿಮ್ಯಾಂಡ್ ಮಾಡಿವೆ. ಈ ಎಲ್ಲದರ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಸರ್ಕಾರ ನಿರ್ಧಾರವನ್ನು ಸ್ಪಷ್ಟಪಡಿಸಿಲ್ಲ. ನವೆಂಬರ್ 7ಕ್ಕೆ ಕೋರ್ಟ್‍ಗೆ ಸಾರಿಗೆ ಇಲಾಖೆ ವರದಿ ಸಲ್ಲಿಕೆಯಾಗಬೇಕಿದ್ದು, ಕೋರ್ಟ್ ಬೆಳವಣಿಗೆ ನಂತರ ದರ ನಿಗದಿಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಎಸ್ಟಿಗೆ ತಳವಾರ, ಪರಿವಾರ ಜಾತಿಗಳ ಸೇರ್ಪಡೆ – ಒಬಿಸಿ ಮೀಸಲಾತಿ ಪಟ್ಟಿಯಿಂದ ತೆಗೆದು ಸರ್ಕಾರ ಆದೇಶ

Advertisements

ಹೈಕೋರ್ಟ್ ಸೂಚನೆಯ ಬಳಿಕ ಓಲಾ, ಉಬರ್ ಆ್ಯಪ್ (App) ಕಂಪನಿಯು ಅ.17 ರಿಂದ ಆಟೋರಿಕ್ಷಾ ಪ್ರಯಾಣ ದರ ಸುಲಿಗೆಯನ್ನು ನಿಲ್ಲಿಸಿದ್ದವು. ಇದೀಗ ಸಾಮಾನ್ಯ ಆಟೋರಿಕ್ಷಾಗಳಿಗೆ ಸರ್ಕಾರ ನಿಗದಿಪಡಿಸಿರುವ ಮೀಟರ್ ದರದ ಜೊತೆ ಶೇ. 10 ಹಾಗೂ ಜಿಎಸ್‍ಟಿ ಒಳಗೊಂಡ ದರವನ್ನು ಪ್ರಯಾಣಿಕರಿಂದ ಪಡೆಯುತ್ತಿವೆ. ಸದ್ಯ ಓಲಾ, ಉಬರ್ ಎರಡೂ ಆ್ಯಪ್‍ಗಳಲ್ಲಿಯೂ ಎರಡು ಕಿ.ಮೀ.ಗೆ 40 ರೂ.ಗಿಂತ ಕಡಿಮೆ ದರವಿದೆ. ಇದನ್ನೂ ಓದಿ: SSLC ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ – ಏಪ್ರಿಲ್‌ 1ರಿಂದ ಪರೀಕ್ಷೆ ಆರಂಭ

Live Tv

Advertisements
Advertisements
Exit mobile version