– ಸಮೀಕ್ಷೆಯಲ್ಲಿ ಭಾಗವಹಿಸುವುದು ಕುಟುಂಬ & ಜನರ ಸ್ವ-ಇಚ್ಛೆಗೆ ಬಿಟ್ಟಿದ್ದು
ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವಿಚಾರವಾಗಿ ರಾಜ್ಯದ ಜನತೆಗೆ ಹಿಂದುಳಿದ ವರ್ಗಗಳ ಆಯೋಗ ಬಿಗ್ ಅಪ್ಡೇಟ್ ನೀಡಿದೆ.
ಸಮೀಕ್ಷೆಯಲ್ಲಿ ರಾಜ್ಯದ ಜನರು ಭಾಗವಹಿಸಲು ಒತ್ತಾಯ ಇಲ್ಲ. ಸಮೀಕ್ಷೆಯಲ್ಲಿ ಭಾಗವಹಿಸುವುದು ಕುಟುಂಬ ಮತ್ತು ಜನರ ಸ್ವಇಚ್ಛೆಗೆ ಬಿಟ್ಟಿದ್ದು ಎಂದು ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದೆ.
ಒತ್ತಾಯವಾಗಿ ಸಮೀಕ್ಷೆಗೆ ಮಾಹಿತಿ ನೀಡಬೇಕು ಎಂದೇನಿಲ್ಲ. ಸಾರ್ವಜನಿಕರು ಸಮೀಕ್ಷೆಗೆ ಮಾಹಿತಿಯನ್ನ ಸ್ವಇಚ್ಛೆಯಿಂದ ನೀಡಬಹುದು ಅಥವಾ ನೀಡದೇನು ಇರಬಹುದು ಎಂದು ಆಯೋಗ ತಿಳಿಸಿದೆ.
ಜಾತಿಗಣತಿ ಸಮೀಕ್ಷೆಗೆ ಸಂಬಂಧಿಸಿದಂತೆ ಶಿಕ್ಷಕರಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಆ್ಯಪ್, ಸರ್ವರ್ ಸಮಸ್ಯೆ ಇದ್ದು, ಸರಿಯಾಗಿ ಸರ್ವೆ ನಡೆಸಲು ಆಗುತ್ತಿಲ್ಲ ಎಂದು ದೂರಿದ್ದಾರೆ.