ಎಲ್ಲಾ ಸಚಿವರಿಗೆ ಕಾರು ಭಾಗ್ಯ – 33 ಮಂದಿಗೆ ಸಿಗಲಿದೆ ಇನ್ನೋವಾ ಹೈಕ್ರಾಸ್‌ ಹೈಬ್ರಿಡ್‌

Public TV
1 Min Read
Karnataka govt approves new Innova Hycross Hybrid cars priced 30 lakhs for ministers

ಬೆಂಗಳೂರು: ಎಲ್ಲಾ ಸಚಿವರಿಗೆ ಸರ್ಕಾರ ಹೊಸ ಕಾರಿನ ಭಾಗ್ಯ (Car gift) ನೀಡಿದೆ. 33 ಸಚಿವರಿಗೆ ಹೊಸ ಇನ್ನೋವಾ ಹೈಕ್ರಾಸ್‌-ಹೈಬ್ರಿಡ್‌ (Innova Hycross Hybrid) ಎಂಪಿವಿ ಕಾರು ಖರೀದಿಗೆ ಸರ್ಕಾರದ ಹಣ ಬಿಡುಗಡೆ ಮಾಡಿದೆ.

ಒಂದು ಕಾರಿಗೆ 30 ಲಕ್ಷ ರೂ.(ಜಿಎಸ್‌ಟಿ ಒಳಗೊಂಡಂತೆ ಎಕ್ಸ್‌ ಶೋ ರೂಮ್‌ ಬೆಲೆ) ನಂತೆ 33 ಕಾರು ಖರೀದಿಗೆ ಒಟ್ಟು 9.90 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಸರ್ಕಾರ ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಪ್ರೈ.ಲಿ (Toyota Kirloskar Motor PVT Ltd) ಕಂಪನಿಯಿಂದ ನೇರವಾಗಿ ಕಾರು ಖರೀದಿಸಲಿದೆ. ಇದನ್ನೂ ಓದಿ: ಗೃಹಬಳಕೆಯ ಬೆನ್ನಲ್ಲೇ ವಾಣಿಜ್ಯ ಬಳಕೆಯ LPG ಬೆಲೆ 158 ರೂ. ಇಳಿಕೆ

karnataka congress ministers

2022ರ ಡಿಸೆಂಬರ್‌ನಲ್ಲಿ ಈ ಕಾರು ದೇಶದ ಮಾರುಕಟ್ಟೆಗೆ 8 ವಿವಿಧ ಮಾದರಿಯಲ್ಲಿ ಬಿಡುಗಡೆಯಾಗಿದೆ. 18.30 ಲಕ್ಷ ರೂ.ನಿಂದ ಆರಂಭಗೊಂಡು ಟಾಪ್‌ ಮಾಡೆಲ್‌ ಕಾರಿಗೆ 30.26 ಲಕ್ಷ ದರ ಇದೆ. ಇದು ಎಕ್ಸ್‌ ಶೋ ರೂಮ್‌ ಬೆಲೆಯಾಗಿದ್ದು ಜೆಎಸ್‌ಟಿ, ರಸ್ತೆ ತೆರಿಗೆ ಸೇರಿದಾಗ ಜಾಸ್ತಿಯಾಗುತ್ತದೆ.

ಇನ್ನೋವಾ ಹೈಕ್ರಾಸ್ ಹೈಬ್ರಿಡ್‌ ಕಾರು 4,755 ಎಂಎಂ ಉದ್ದ, 1,850 ಎಂಎಂ ಅಗಲ ಮತ್ತು 1,795 ಎಂಎಂ ಎತ್ತರವನ್ನು ಹೊಂದಿದೆ.

 

Web Stories

Share This Article