ರಾಜ್ಯಾದ್ಯಂತ 10,889 ಮಸೀದಿಗಳಿಗೆ ಲೌಡ್ ಸ್ಪೀಕರ್ ಬಳಸಲು ಅನುಮತಿ ನೀಡಿದ ಸರ್ಕಾರ

Public TV
2 Min Read
mosque-loudspeakers
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕದಲ್ಲಿ (Karnataka) ಆಜಾನ್ (Azaan) ದಂಗಾಲ್ ಹಿನ್ನೆಲೆ ಪರವಾನಗಿ ಇಲ್ಲದೇ ಲೌಡ್ ಸ್ಪೀಕರ್ (Loudspeaker) ಬಳಸುವಂತಿಲ್ಲ ಎಂದು ಸರ್ಕಾರ ನಿರ್ಬಂಧ ಹೇರಿತ್ತು. ಆ ಬಳಿಕ ಇದೀಗ ಪರವಾನಿಗೆ ನೀಡಿ ಒಟ್ಟು 10,889 ಮಸೀದಿಗಳಿಗೆ (Mosques)  ಲೌಡ್ ಸ್ಪೀಕರ್ ಬಳಸಲು ಅನುಮತಿ ನೀಡಿದೆ.

loudspeakers

ಆಜಾನ್ ವಿರುದ್ಧ ವಿರೋಧ ಕೇಳಿ ಬಂದ ಬಳಿಕ ರಾಜ್ಯ ಸರ್ಕಾರ ಲೌಡ್ ಸ್ಪೀಕರ್‌ಗೆ ಬ್ರೇಕ್ ಹಾಕಲು ಮುಂದಾಗಿತ್ತು. ಪರವಾನಗಿ ಇಲ್ಲದೇ ಲೌಡ್ ಸ್ಪೀಕರ್ ಬಳಸುವಂತಿಲ್ಲ ಎಂದು ನಿರ್ಬಂಧ ಹೇರಲಾಗಿತ್ತು. ಆ ಬಳಿಕ ಪರವಾನಿಗೆ ನೀಡಲು ಮಸೀದಿ, ದೇವಾಲಯ (Temples), ಚರ್ಚ್‍ಗಳಿಗೆ (Churche) ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ನೀಡಿತ್ತು. ಪರವಾನಗಿ ನೀಡುವ ಅಧಿಕಾರವನ್ನು ಸರ್ಕಾರ ರಾಜ್ಯ ಪೊಲೀಸರಿಗೆ ನೀಡಿತ್ತು. ಈ ಹಿನ್ನೆಲೆ ಮಂದಿರ, ಮಸೀದಿ, ಚರ್ಚ್‍ಗಳಿಂದ 17 ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ರಾಜ್ಯಾದ್ಯಂತ 10,889 ಮಸೀದಿಗಳಿಗೆ ಲೌಡ್ ಸ್ಪೀಕರ್ ಬಳಸಲು ಅನುಮತಿ ನೀಡಿ ಕರ್ನಾಟಕ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: ಈ ಬಾರಿ ಸಂಪುಟ ವಿಸ್ತರಣೆಯೋ, ಪುನರ್‌ ರಚನೆಯೋ ಕಾದು ನೋಡಿ: ಬೊಮ್ಮಾಯಿ

loud speaker

17 ಸಾವಿರದ 850 ಅರ್ಜಿಗಳ ಪೈಕಿ 10 ಸಾವಿರ ಅರ್ಜಿಗಳಿಗೆ ಸರ್ಕಾರ ಎರಡು ವರ್ಷಗಳ ಅವಧಿಗೆ ಅನುಮತಿ ನೀಡಿ ಆದೇಶ ಮಾಡಿದೆ. 450 ರೂಪಾಯಿ ಶುಲ್ಕ ಪಡೆದು ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಪಡೆಯಲಾಗಿತ್ತು. ಈ ಪೈಕಿ ಬೆಂಗಳೂರಿನಲ್ಲಿ (Bengaluru) 1,841 ಮಸೀದಿಗಳಿಗೆ ಅನುಮತಿ ನೀಡಲಾಗಿದೆ. ರಾಜ್ಯಾದ್ಯಂತ ಮೂರು ಸಾವಿರಕ್ಕೂ ಹೆಚ್ಚು ಹಿಂದೂ ದೇವಾಲಯ, 1,400ಕ್ಕೂ ಹೆಚ್ಚು ಚರ್ಚ್‍ಗಳಿಗೆ ಸರ್ಕಾರ ಅನುಮತಿ ನೀಡಿದೆ. ಇದನ್ನೂ ಓದಿ: ಜನಪ್ರತಿನಿಧಿಗಳೇ ಬದುಕಿದ್ದೀರಾ? ಅಧಿಕಾರಿಗಳೇ ಇತ್ತ ಗಮನಿಸಿ – ಫ್ಲೆಕ್ಸ್‌ಗೆ ಚಪ್ಪಲಿ ಹಾರ ಹಾಕಿ ಆಕ್ರೋಶ

 17 ಸಾವಿರದ 850 ಅರ್ಜಿಗಳನ್ನು ಪರಿಶೀಲಿಸಿ ಸದ್ಯ 10 ಸಾವಿರ ಅರ್ಜಿದಾರರಿಗೆ ಲೌಡ್ ಸ್ಪೀಕರ್ ಬಳಸಲು ಅನುಮತಿ ನೀಡಿರುವ ರಾಜ್ಯ ಸರ್ಕಾರ ಕೆಲ ನಿಯಮಾವಳಿಗಳನ್ನು ಜಾರಿಗೆ ತಂದಿದೆ.

mosque

ನಿಯಮಾವಳಿಗಳು:
ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಲೌಡ್ ಸ್ಪೀಕರ್ ಬಳಸಬೇಕು. ನಿಯಮಿತ ಡೆಸಿಬಲ್ ಮಾತ್ರ ಬಳಸಬೇಕು. ಡೆಸಿಬಲ್ ನಿಯಂತ್ರಿಸೋ ಉಪಕರಣ ಅಳವಡಿಕೆ ಕಡ್ಡಾಯ. ರೆಸಿಡೆನ್ಸಿಯಲ್, ಕಮರ್ಷಿಯಲ್, ಕೈಗಾರಿಕಾ ಪ್ರದೇಶಗಳ ಅನುಗುಣವಾಗಿ ಡೆಸಿಬಲ್ ಅಳವಡಿಕೆ, ಮಸೀದಿ – ಮಂದಿರದ ಆವರಣದ ಒಳಗೆ ಲೌಡ್ ಸ್ಪೀಕರ್‌ಗಳು ಇರಬೇಕು. ಪೊಲೀಸರು ಸೂಚಿಸಿರುವಷ್ಟು ಮಾತ್ರ ಲೌಡ್ ಸ್ಪೀಕರ್ ಬಳಸಬೇಕು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *