ಬೆಂಗಳೂರು: ಲೋಕಾಯುಕ್ತದವರು ರಾಜ್ಯಪಾಲರಿಗೆ ಬರೆದ ರಹಸ್ಯ ಪತ್ರ ಸೋರಿಕೆಯಾದ ಬಗ್ಗೆ ಮಾಹಿತಿ ಕೊಡಿ ಎಂದು ಸರ್ಕಾರಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ (Thawarchand Gehlot) ಪತ್ರ ಬರೆದಿದ್ದಾರೆ.
ರಾಜ್ಯ ಸರ್ಕಾರಕ್ಕೆ ಮತ್ತೊಂದು ಪತ್ರ ಬರೆಯಲಾಗಿದ್ದು, ಆ.28 ರಂದು ಸರ್ಕಾರದಿಂದ ಸ್ಪಷ್ಟನೆ ಕೇಳಿ ರಾಜ್ಯಪಾಲರು ಪತ್ರ ಬರೆದಿದ್ದಾರೆ. ವಿಪಕ್ಷ ನಾಯಕರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೇಳಿ ಲೋಕಾಯುಕ್ತದಿಂದ (Lokayukta) ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ. ಈ ಪತ್ರದ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ನಿರ್ಣಯ ಕೈಗೊಂಡು ರಾಜ್ಯಪಾಲರಿಗೆ ಕ್ಯಾಬಿನೆಟ್ ನಿರ್ಣಯ ಕಳುಹಿಸಿಕೊಡಲಾಗಿದೆ. ಆದರೆ ಲೋಕಾಯಕ್ತದವರು ರಾಜ್ಯಪಾಲರಿಗೆ ಬರೆದ ರಹಸ್ಯ ಪತ್ರದ ಬಗ್ಗೆ ಸರ್ಕಾರಕ್ಕೆ ಹೇಗೆ ಮಾಹಿತಿ ಬಂತು? ಅದರ ಬಗ್ಗೆ ಸ್ಪಷ್ಟನೆ ನೀಡಿ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ವಿಪಕ್ಷ ನಾಯಕರನ್ನು ಟಾರ್ಗೆಟ್ ಮಾಡಿದ್ದಾರೆ: ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ
Advertisement
Advertisement
ಕ್ಯಾಬಿನೆಟ್ ನಿರ್ಣಯ ಹಾಗೂ ಪ್ರಾಸಿಕ್ಯೂಷನ್ ಕೇಳಿ ಲೋಕಾಯುಕ್ತ ಬರೆದ ಪತ್ರದ ಬಗೆಗಿನ ನಿರ್ಣಯಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಲೋಕಾಯುಕ್ತ, ಎಸ್‌ಐಟಿಗೂ ಪತ್ರ ಬರೆದಿರುವ ಗವರ್ನರ್ ರಹಸ್ಯ ಮಾಹಿತಿ ಸೋರಿಕೆ ಬಗ್ಗೆ ಮಾಹಿತಿ ಕೇಳಿದ್ದಾರೆ. ತನಿಖೆ ನಡೆಸಿ ವರದಿ ನೀಡಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
Advertisement
ರಾಜ್ಯಪಾಲರ ಪತ್ರದಲ್ಲಿ ಏನಿದೆ?
ಆ.26ನೇ ತಾರೀಕು ಸಂಜೆ 5 ಕ್ಕೆ ರಾಜಭವನಕ್ಕೆ ಸರ್ಕಾರದಿಂದ ಪತ್ರ ಬಂದಿದೆ. ಕ್ಯಾಬಿನೆಟ್ ನಿರ್ಣಯದ ದಾಖಲೆಗಳ ಕುರಿತು ಮುಚ್ಚಿದ ಲಕೋಟೆ ಬಂದಿದೆ. ಆದರೆ ಆ ಲಕೋಟೆಯೊಳಗೆ 16ನೇ ಸಚಿವ ಸಂಪುಟ ಸಭೆಯ ಅಜೆಂಡಾ ಹಾಗೂ 17ನೇ ಸಚಿವ ಸಂಪುಟದ ಹೆಚ್ಚುವರಿ ಅಜೆಂಡಾ ಕಾಪಿ ಮಾತ್ರ ಇತ್ತು. ಸಭೆಯಲ್ಲಿ ಕೈಗೊಂಡಿರುವ ನಿರ್ಣಯದ ಬಗ್ಗೆ ದಾಖಲೆಗಳು ಇರಲಿಲ್ಲ. ಕ್ಯಾಬಿನೆಟ್ ವಿಭಾಗಕ್ಕೆ ದೂರವಾಣಿ ಮೂಲಕ ಕರೆ ಮಾಡಿ ಮಾಹಿತಿ ತಿಳಿಸಲಾಗಿದೆ. ಮಾಹಿತಿ ನೀಡಿದ ಬಳಿಕ 27 ರಂದು ಡಿಸಿಎಂ ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಕ್ಯಾಬಿನೆಟ್ ಕೈಗೊಂಡ ನಿರ್ಣಯಗಳ ದಾಖಲೆ ರಾಜಭವನಕ್ಕೆ ಸಲ್ಲಿಸಲಾಗಿದೆ. ಇದನ್ನೂ ಓದಿ: ಮುನಿರತ್ನ, ಹೆಚ್‌ಡಿಕೆ ವಿರುದ್ಧದ ಪ್ರಕರಣಗಳ ತನಿಖೆಗೆ ಒಕ್ಕಲಿಗ ಸಚಿವರು, ಶಾಸಕರ ನಿಯೋಗದಿಂದ ಸಿಎಂಗೆ ಮನವಿ
Advertisement
ಆ ಮಾಹಿತಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಮೀಟಿಂಗ್ ಹೆಚ್ಚುವರಿ ಅಜೆಂಡಾದ ನಿರ್ಣಯಗಳು ನಮಗೆ ಲಭ್ಯವಾಗಿಲ್ಲ. ಆದರೆ 23 ರಂದು ಮಾಧ್ಯಮಗಳಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಲು ಕ್ಯಾಬಿನೆಟ್ ರಾಜ್ಯಪಾಲರಿಗೆ ಸಲಹೆ ನೀಡಿದೆ ಎಂದು ವರದಿ ಆಗಿದೆ. ಗೌಪ್ಯವಾದ ಮಾಹಿತಿ ಸಚಿವ ಸಂಪುಟ ಸಭೆಯಲ್ಲಿ ಹೇಗೆ ಚರ್ಚಿಸಲಾಯಿತು?
ಕ್ಯಾಬಿನೆಟ್ ನೋಟ್‌ನಲ್ಲಿ ಯಾವ ದಿನಾಂಕದಂದು ಲೋಕಾಯುಕ್ತ ಸಂಸ್ಥೆ ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್ ಅನುಮತಿ ಕೇಳಿದೆ ಎಂಬುದನ್ನ ಉಲ್ಲೇಖಿಸಲಾಗಿದೆ. ನನಗೆ ಈಗ ಕುತೂಹಲ ಹೆಚ್ಚಾಗಿದೆ. ಹೇಗೆ ಲೋಕಾಯುಕ್ತ ವಿಶೇಷ ತನಿಖಾ ತಂಡ ರಾಜ್ಯಪಾಲರಿಗೆ ಬರೆದ ಪತ್ರ ಬಹಿರಂಗವಾಯಿತು? ಲೋಕಾಯುಕ್ತ ಎಂಬುದು ಸ್ವಾಯತ್ತ ತನಿಖಾ ಸಂಸ್ಥೆ, ಲೋಕಾಯುಕ್ತ ಎಸ್‌ಐಟಿ ಗೌಪ್ಯವಾಗಿ ಅಭಿಯೋಜನಾ ಮಂಜೂರಾತಿಯನ್ನ ಕೇಳಿದ ಪತ್ರ ಸರ್ಕಾರ ಹಾಗೂ ಕ್ಯಾಬಿನೆಟ್‌ಗೆ ತಲುಪಿದ್ದು ಹೇಗೆ? ಹೀಗಾಗಿ ಈ ಪತ್ರ ತಲುಪಿದ ಕೂಡಲೇ ಪ್ರಾಮಾಣಿಕವಾಗಿ ರಾಜಭವನಕ್ಕೆ ವರದಿ ನೀಡಿ ಎಂದು ರಾಜ್ಯಪಾಲರು ಸೂಚಿಸಿದ್ದಾರೆ. ಇದನ್ನೂ ಓದಿ: ಮುಡಾ ಹಗರಣಕ್ಕೂ ನನಗೂ ಸಂಬಂಧವೇ ಇಲ್ಲ, ಏಕೆ ರಾಜೀನಾಮೆ ಕೊಡ್ಬೇಕು? – ಹೆಚ್‌ಡಿಕೆ ಗರಂ