ಬೆಂಗಳೂರು: ಕೇರಳದಲ್ಲಿ ಮಂಕಿಪಾಕ್ಸ್ ಸೋಂಕಿನ 2 ಪ್ರಕರಣ ಪತ್ತೆಯಾಗಿದ್ದು, ದೇಶದ ಜನತೆಯಲ್ಲಿ ಭೀತಿ ಹುಟ್ಟಿಸಿದೆ. ನೆರೆ ರಾಜ್ಯದಲ್ಲಿ ಈ ಸೋಂಕು ಪತ್ತೆಯಾಗಿರುವುದು ಕರ್ನಾಟಕದಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಿ, ಮಾರ್ಗಸೂಚಿ ಹೊರಡಿಸಿದೆ.
ಮಂಕಿಪಾಕ್ಸ್ ಕುರಿತು ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಮಂಕಿಪಾಕ್ಸ್ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಇದನ್ನೂ ಓದಿ: ಕೈ ಕೊಟ್ಟ ಮೋದಿ ಪ್ಲಾನ್ – ಕಾಡುಗಳ್ಳರ ಪತ್ತೆ ಹಚ್ಚಲು ವಿಫಲವಾಯ್ತು ಮುಧೋಳ ತಳಿಯ ಶ್ವಾನ
Advertisement
Advertisement
ಮಂಕಿಪಾಕ್ಸ್ ರೋಗ ಲಕ್ಷಣಗಳ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ. ಈ ಕುರಿತು ಜನತೆಯಲ್ಲಿ ಅರಿವು ಮೂಡಿಸಬೇಕು. ವಿಮಾನ ನಿಲ್ದಾಣ, ಬಂದರುಗಳಲ್ಲಿ ಪ್ರಯಾಣಿಕರ ತಪಾಸಣೆಗೆ ಕ್ರಮವಹಿಸಬೇಕು. ರೋಗ ಲಕ್ಷಣ ಇರುವವರ ಚಿಕಿತ್ಸೆ ಕುರಿತು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
Advertisement
ರೋಗ ಲಕ್ಷಣಗಳೇನು?
ಜ್ವರ, ಚಳಿ, ಬೆವರುವಿಕೆ, ಹಾಲ್ರಸ ಗ್ರಂಥಗಳ ಊತ, ತಲೆ ನೋವು, ಮಾಂಸಖಂಡಗಳ ನೋವು ಮತ್ತು ಊತ, ಗಂಟಲ ಉರಿ ಹಾಗೂ ಕೆಮ್ಮು, ಚರ್ಮದ ಮೇಲಿನ ದದ್ದುಗಳು.
Advertisement
ಮಂಕಿಪಾಕ್ಸ್ ವಿರುದ್ಧ ಆರೋಗ್ಯ ಇಲಾಖೆ ಹೊರಡಿಸಿರೋ ಮುನ್ನೆಚ್ಚರಿಕಾ ಕ್ರಮಗಳೇನು?
ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ವಿದೇಶದಿಂದ ಬರುವ ಪ್ರಯಾಣಿಕರಿಗೆ ಸ್ಕ್ರೀನಿಂಗ್ ಕಡ್ಡಾಯ, ಸೋಂಕಿತ ಪ್ರದೇಶಗಳಿಂದ ಬಂದ ಜನರಿಗೆ ರೋಗ ಲಕ್ಷಣ ಇದೆಯಾ ಅಂತಾ ಪತ್ತೆ ಹಚ್ಚುವುದು, ರೋಗ ಲಕ್ಷಣರಹಿತ ವ್ಯಕ್ತಿಗಳ ವಿವರ ಕಡ್ಡಾಯವಾಗಿ ದಾಖಲಿಸಬೇಕು. ಏನಾದ್ರು ಸೋಂಕಿನ ಲಕ್ಷಣ ಕಾಣಿಸಿಕೊಳ್ಳುತ್ತಾ ಅಂತಾ 21 ದಿನಗಳ ಕಾಲ ನಿಗಾ ವಹಿಸಬೇಕು. ಇದನ್ನೂ ಓದಿ: ಇಡಿ ವಿರುದ್ಧ ಆಕ್ರೋಶ – ಎರಡು ಕಾರುಗಳಿಗೆ ಬೆಂಕಿ ಹಚ್ಚಿದ ಕೈ ಕಾರ್ಯಕರ್ತರು
ಮಂಕಿಪಾಕ್ಸ್ ಸೋಂಕಿನ ಶಂಕಿತರನ್ನು ಬೆಂಗಳೂರಿನ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ಮತ್ತು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಿ ನಿಗಾ ವಹಿಸಬೇಕು. ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದವರನ್ನು 21 ದಿನಗಳ ಕಾಲ ಐಸೊಲೇಟ್ ಮಾಡಿ ನಿಗಾವಹಿಸಬೇಕು. ಸೋಂಕು ಕಂಡು ಬಂದರೆ ಪ್ರತ್ಯೇಕವಾಗಿ ಐಸೂಲೇಟ್ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.