– ಡಿನ್ನರ್ ಮೀಟಿಂಗ್‌ನಲ್ಲಿ ಮಹತ್ವದ ವಿಷಯಗಳ ಕುರಿತು ಚರ್ಚೆ
ಬೆಂಗಳೂರು: ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಬಿಬಿಎಂಪಿ ಚುನಾವಣೆ (BBMP Elections) ನಡೆಸುವ ಬಗ್ಗೆ ಸಚಿವರಿಗೆ ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಡಿ.ಕೆ.ಸುರೇಶ್ ನಿವಾಸದಲ್ಲಿ ಸಚಿವರ ಡಿನ್ನರ್ ಮೀಟಿಂಗ್‌ನಲ್ಲಿ (Dinner Meeting) ಹಲವು ವಿಚಾರಗಳ ಕುರಿತು ಮಾಹಿತಿ ಹಂಚಿಕೊಂಡ ಸಿಎಂ ಹಾಗೂ ಡಿಸಿಎಂ, ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಬಿಬಿಎಂಪಿ ಚುನಾವಣೆ ನಡೆಸುವ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ರಾಗಾ ಒಬ್ಬ ಮಹಾನ್ ವ್ಯಕ್ತಿ, ಗಾಂಧೀಜಿ ಕನಸು ನನಸು ಮಾಡ್ತಿದ್ದಾರೆ: ಪ್ರಮೋದ್ ಕೃಷ್ಣಂ ಕಿಡಿ
Advertisement
Advertisement
ಡಿಸೆಂಬರ್ ಸುಮಾರಿಗೆ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಜೊತೆಗೆ ಲೋಕಸಭಾ ಚುನಾವಣಾ ಫಲಿತಾಂಶದ (Lok Sabha Election Result) ನಂತರ ಬೃಹತ್ ಗ್ಯಾರಂಟಿ ಸಮಾವೇಶ ನಡೆಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ಕನಿಷ್ಠ 10ಕ್ಕಿಂತ ಜಾಸ್ತಿ ಸ್ಥಾನ ಬಂದರೆ ಅದ್ಧೂರಿ ಸಮಾವೇಶಕ್ಕೆ ಪ್ಲ್ಯಾನ್ ಸಹ ಮಾಡಿದ್ದಾರೆ ಎನ್ನಲಾಗಿದೆ.
Advertisement
ಪೆನ್ ಡ್ರೈವ್ ಪ್ರಕರಣದಲ್ಲಿ ಮುಲಾಜಿಲ್ಲದೇ ಮಾತನಾಡುವ ಬಗ್ಗೆಯೂ ಚರ್ಚೆ ನಡೆದಿದ್ದು ಆರೋಪಿ ವಿರುದ್ಧ ಮಾತನಾಡಿ ಯಾವುದೇ ಸಂಕೋಚ ಬೇಡ. ಪ್ರಜ್ವಲ್ ರಾಜ್ಯಕ್ಕೆ ಬಂದ ನಂತರ ವಿಷಯ ಮತ್ತಷ್ಟು ಮಹತ್ವ ಪಡೆದುಕೊಳ್ಳಲಿದೆ. ಇದು ಸರ್ಕಾರ ಹಾಗೂ ಆಡಳಿತ ಪಕ್ಷ ಎರಡಕ್ಕೂ ಸವಾಲಿನ ವಿಚಾರ. ಪೆನ್ ಡ್ರೈವ್ ಆರೋಪಿ (Pendrive Accused) ಬಗ್ಗೆ ಮಾತನಾಡುವಾಗ ಯಾವುದೇ ಮುಲಾಜು ಬೇಡ ಎಂಬ ಸಂದೇಶ ನೀಡಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
Advertisement
ಲೋಕಸಭೆ ಚುನಾವಣೆ ಬಳಿಕ ಸಚಿವರ ಬದಲಾವಣೆ ಏನೇ ಇದ್ದರೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಮ್ಮ ಮಟ್ಟದಲ್ಲಿ ಅದು ಇಲ್ಲ. ಹೈಕಮಾಂಡ್ ಮನಸ್ಸು ಮಾಡಿದರೇ ಏನು ಬೇಕಾದರೂ ಆಗಬಹುದು. ಎಲ್ಲದಕ್ಕೂ ಸಿದ್ಧವಿರಿ ಎಂಬ ಸಂದೇಶವನ್ನು ಸಿಎಂ ಹಾಗೂ ಡಿಸಿಎಂ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದತಿಗೆ ಸಿಎಂ 2ನೇ ಪತ್ರ- ಪ್ರಧಾನಿಗೆ ಬರೆದ ಲೆಟರ್‌ನಲ್ಲಿ ಏನಿದೆ?