ಬೆಂಗಳೂರು: ಶಾಲಾ ಕೊಠಡಿಗಳಿಗೆ ಕೇಸರಿ (Saffron) ಬಣ್ಣ ಹೊಡೆಯುವ ವಿವಾದ ಬೆನ್ನಲ್ಲೇ ರಾಜ್ಯ ಸರ್ಕಾರ (Government Of Karnataka) ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಸೋಮವಾರ ವಿವೇಕ ಯೋಜನೆ ಅಡಿ ಶಂಕು ಸ್ಥಾಪನೆ ಮಾಡಿರುವ 7,600 ಶಾಲಾ ಕೊಠಡಿಗಳ ಮುಂದೆ ವಿವೇಕಾನಂದರ (Swamy Vivekananda) ಫೋಟೋ ಮುದ್ರಣ ಮಾಡಲು ಶಿಕ್ಷಣ ಇಲಾಖೆ (Education Department) ತೀರ್ಮಾನ ಮಾಡಿದೆ. ಇದನ್ನೂ ಓದಿ: ಮುಸ್ಲಿಮರ ವೋಟು ಪಡೆಯೋಕೆ ಕಾಂಗ್ರೆಸ್ ಕೇಸರಿ ವಿರೋಧ ಮಾಡ್ತಿದೆ – ಬಿ.ಸಿ.ನಾಗೇಶ್ ಕಿಡಿ
Advertisement
Advertisement
ಈ ಕುರಿತು `ಪಬ್ಲಿಕ್ ಟಿವಿ’ (Public TV) ಜೊತೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್ (BC Nagesh), ವಿವೇಕಾನಂದರು ಜ್ಞಾನದ ಸಂಕೇತ. ಅವರ ಹೆಸರಿನಲ್ಲಿ ನಾವು ವಿವೇಕ ಯೋಜನೆ ಪ್ರಾರಂಭ ಮಾಡಿದ್ದೇವೆ. ಅವರ ಚಿಂತನೆಗಳು ಮಕ್ಕಳಲ್ಲಿ ಬರಬೇಕು. ಅದಕ್ಕಾಗಿ ನೂತನವಾಗಿ ನಿರ್ಮಾಣ ಆಗುತ್ತಿರುವ ಕೊಠಡಿಗಳ ಮುಂದೆ ವಿವೇಕಾನಂದರ ಭಾವಚಿತ್ರ ಮುದ್ರಣ ಮಾಡುವ ಚಿಂತನೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಾಮಿಯ ವಿವಾದ- ನಾಳೆ ಹೈಕೋರ್ಟ್‍ನಲ್ಲಿ PIL ಸಲ್ಲಿಕೆ
Advertisement
ವಿವೇಕಾನಂದರ ಫೋಟೋ ಮುದ್ರಿಸುವ ಬಗ್ಗೆ ಚರ್ಚೆಯಾಗಿದೆ. ಮಕ್ಕಳಿಗೆ ವಿವೇಕಾನಂದ ಅದರ್ಶಗಳು ತಿಳಿಯುವುದು ಮುಖ್ಯ. ಮಕ್ಕಳಿಗೆ ನೀವು ಏನು ಆಗಬೇಕು ಎಂದರೆ ವಿವೇಕಾನಂದ ಆಗಬೇಕು ಎನ್ನಬೇಕು. ಹೀಗಾಗಿ ಶಾಲಾ ಕೊಠಡಿಗಳ ಮುಂದೆ ವಿವೇಕಾನಂದರ ಚಿತ್ರ ಮುದ್ರಣ ಮಾಡ್ತೀವಿ ಅಂತ ತಿಳಿಸಿದರು.