ಬೆಂಗಳೂರು: ಅನ್ನಭಾಗ್ಯ, ಕ್ಷೀರಭಾಗ್ಯ ಅಂತೆಲ್ಲಾ ಭಾಗ್ಯಗಳ ಕೊಟ್ಟು ಭಾಗ್ಯಗಳ ಸರದಾರ ಅಂತ ಕರೆಸಿಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ ಈಗ ರಾಜ್ಯದ ಜನತೆಗೆ `ಸಾಲಭಾಗ್ಯ’ವನ್ನೂ ಕರುಣಿಸಿದ್ದಾರೆ. ವಿಧಾನಸಭೆಯಲ್ಲಿ ಇಲಾಖೆಗಳ ಬೇಡಿಕೆಗಳು ಹಾಗು ಸಾಲಮನ್ನಾ ಬಗ್ಗೆ ಚರ್ಚೆ ವೇಳೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವ್ರು ಸಿದ್ದರಾಮಯ್ಯ ಸರ್ಕಾರ 2 ಲಕ್ಷದ 42 ಸಾವಿರದ 420 ಕೋಟಿ ಸಾಲದ ಹೊರೆ ಹೇರಿದೆ ಅಂತ ತರಾಟೆಗೆ ತೆಗೆದುಕೊಂಡ್ರು.
ಮುಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಸಿದ್ದರಾಮಯ್ಯ ಅವಧಿಯಲ್ಲಿ ಮಾಡಿರುವ ಆರ್ಥಿಕ ದುಸ್ಥಿತಿಯನ್ನ ನಾವು ಸರಿಮಾಡಿ ಸಾಲ ತೀರಿಸಬೇಕಾಗಿದೆ ಅಂದ್ರು. ಅಲ್ಲದೆ, ಉತ್ತರ ಪ್ರದೇಶ, ಮಹಾರಾಷ್ಟ್ರ ಸರ್ಕಾರಗಳನ್ನ ಪ್ರಸ್ತಾಪಿಸಿ ನಮ್ಮ ರಾಜ್ಯದಲ್ಲಿ ರೈತರ ಸಾಲಮನ್ನಾ ಮಾಡಲು ಏನಾಗಿದೆ ಅಂತ ರಾಹುಲ್ ಗಾಂಧಿ ಅವರಿಗೂ ಶೆಟ್ಟರ್ ಬಿಸಿಮುಟ್ಟಿಸಿದ್ರು. ಕೇಂದ್ರದ ಜೊತೆ ವಿತಂಡವಾದ ಮಾಡದೇ ಈಗಲೇ ಸಾಲಮನ್ನಾ ಮಾಡಿ ಅಂತ ಆಗ್ರಹಿಸಿದ್ರು.
Advertisement
ಜಗದೀಶ್ ಶೆಟ್ಟರ್ ಅವ್ರು ಯಾರ್ಯಾರ ಕಾಲದಲ್ಲಿ ಎಷ್ಟೆಷ್ಟು ಸಾಲವಾಗಿದೆ ಅಂತ ಅಂಕಿ ಅಂಶಗಳ ಸಮೇತ ಸದನಕ್ಕೆ ವಿವರಿಸಿದ್ದು ಆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
Advertisement
ಸಿದ್ದರಾಮಯ್ಯ – 2,42, 420 ಕೋಟಿ ರೂ. (4 ವರ್ಷ)
* 2013 – 18,590 ಕೋಟಿ ರೂ. ಸಾಲ
* 2014 – 1,36,700 ಕೋಟಿ ರೂ.ಗೆ ಏರಿಕೆ
* 2015 – 1,57,00 ಕೋಟಿ ರೂ.ಗೆ ಏರಿಕೆ
* 2016 – 1,80,000 ಕೋಟಿ ರೂ.ಗೆ ಸಾಲ ಹೆಚ್ಚಳ
* 2017 – 2,42,420 ಕೋಟಿ ರೂ.ಗೆ ಹೆಚ್ಚಳ
Advertisement
* ಎಸ್.ಎಂ. ಕೃಷ್ಣ – 35,902 ಕೋಟಿ (5 ವರ್ಷ)
* ಯಡಿಯೂರಪ್ಪ – 25,653 ಕೋಟಿ (40 ತಿಂಗಳು)
* ಧರ್ಮಸಿಂಗ್ – 15,635 ಕೋಟಿ (20 ತಿಂಗಳು)
* ಜಗದೀಶ್ ಶೆಟ್ಟರ್ – 13,463 ಕೋಟಿ (10 ತಿಂಗಳು)
* ಸದಾನಂದಗೌಡ – 9,357 ಕೋಟಿ (11 ತಿಂಗಳು)
* ಕುಮಾರಸ್ವಾಮಿ – 3,545 ಕೋಟಿ (20 ತಿಂಗಳು)
Advertisement
ಎಚ್ ಡಿ ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ರಾಜ್ಯದ ಪ್ರತಿಯೊಬ್ಬ ಪ್ರಜೆ ಮೇಲೆ ಅಂದಾಜು 11 ಸಾವಿರ ರೂಪಾಯಿ ಸಾಲವಿತ್ತು. ಆದ್ರೆ, ಪ್ರಸ್ತುತ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಈಗ 35 ಸಾವಿರ ರೂಪಾಯಿಗೆ ಏರಿದೆ.