ಬೆಂಗಳೂರು: ಒನಕೆ ಓಬವ್ವ ಜನ್ಮ ದಿನವಾದ ನವೆಂಬರ್ 11ರಂದು ರಾಜ್ಯಾದ್ಯಂತ ಒನಕೆ ಓಬವ್ವ ಜಯಂತಿಯನ್ನಾಗಿ ಆಚರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Advertisement
ಈ ಕುರಿತಂತೆ ಕನ್ನಡ ಮತ್ತ ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ವೆಂಕಟೇಶಪ್ಪ ನಡಾವಳಿಗಳನ್ನು ಹೊರಡಿಸಿದ್ದು, ಒನಕೆ ಓಬವ್ವ ಹೆಸರು, ಚಿತ್ರದುರ್ಗ ಇತಿಹಾಸದಲ್ಲಿ ಮರೆಯಲಾಗದು. ಅವರನ್ನು ಕರ್ನಾಟಕ ವೀರ ವನಿತೆಯರಾದ ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕರ ಸಾಲಿನಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪುನೀತ್ ನೆನಪಿಗಾಗಿ ಎದೆ ಮೇಲೆ ಹಚ್ಚೆ ಹಾಕಿಸಿಕೊಂಡ ಅಭಿಮಾನಿ
Advertisement
Advertisement
ಒನಕೆ ಓಬವ್ವ 18ನೇ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮುದ್ದಹನುಮಪ್ಪನ ಹೆಂಡತಿ. ಚಿತ್ರದುರ್ಗದ ಮೇಲೆ ಹೈದರಾಲಿ ಸೈನಿಕರು ಹಠತ್ತಾಗಿ ಆಕ್ರಮಣ ಮಾಡಿದಾಗ ಓಬವ್ವ ತನ್ನ ಒನಕೆಯನ್ನು ಅಸ್ತ್ರವನ್ನಾಗಿ ಇಟ್ಟುಕೊಂಡು ಶತ್ರುಗಳನ್ನು ಎದುರಿಸಿದ್ದರು. ಚಿತ್ರದುರ್ಗದ ಕೋಟೆಯ ಕಿಂಡಿಯಿಂದ ಬಂದ ನೂರಾರು ಶತ್ರು ಸೈನಿಕರನ್ನು ತನ್ನ ಒನಕೆಯಿಂದಲೇ ಕೊಂದರು. ಕೊನೆಯಲ್ಲಿ ಎದುರಾಳಿಯು ಬೆನ್ನಹಿಂದೆ ಬಂದದ್ದನ್ನು ಗಮನಿಸಲಾಗದೇ ಶುತ್ರುವಿನ ಕತ್ತಿಗೆ ಬಲಿಯಾದರು. ಅಂದಿನಂದ ಅವರು ಒನಕೆ ಓಬವ್ವ ಎಂದು ಪ್ರಸಿದ್ಧಿ ಹೊಂದಿರುತ್ತಾರೆ. ಇದನ್ನೂ ಓದಿ: 46 ವರ್ಷಕ್ಕೆ ನನ್ನ ತಮ್ಮ ದೇವರಿಗೆ ತುಂಬಾ ಇಷ್ಟ ಆಗ್ಬಿಟ್ಟ: ಶಿವಣ್ಣ
Advertisement
ಈ ಮೇಲ್ಕಂಡಗಳ ಅಂಶಗಳ ಹಿನ್ನಲೆಯಲ್ಲಿ ಒನಕೆ ಓಬವ್ವರ ಜನ್ಮ ದಿನವಾದ ನವೆಂಬರ್ 11 ಅನ್ನು ಒನಕೆ ಓಬವ್ವ ಜಯಂತಿಯನ್ನಾಗಿ ಆಚರಣೆ ಮಾಡುವಂತೆ ಘೋಷಿಸಲಾಗಿದೆ. ಅದರಂತೆ ನವೆಂಬರ್ 11ರಂದು ಒನಕೆ ಓಬವ್ವ ಜಯಂತಿಯನ್ನು ರಾಜ್ಯಾದ್ಯಂತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಚರಿಸಲು ಸರ್ಕಾರ ಆದೇಶಿಸಿದೆ ಎಂದು ತಿಳಿಸಿದ್ದಾರೆ.