ಬೆಂಗಳೂರು: ಶಿವಮೊಗ್ಗ ಹರ್ಷ ಕೊಲೆ ಪ್ರಕರಣವನ್ನು ಎನ್‍ಐಎಗೆ ವಹಿಸಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ, ಈಗ ಚಂದ್ರು ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಿದೆ.
Advertisement
ಚಂದ್ರು ಕೊಲೆಗೆ ಕಾರಣವೇನು ಎಂಬ ವಿಚಾರದಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರು ಮತ್ತು ರಾಜ್ಯ ಬಿಜೆಪಿ ನಾಯಕರ ನಡುವೆ ದೊಡ್ಡ ಸಂಘರ್ಷವೇ ನಡೆದಿದೆ. ಯಾರ ಮಾತು ಸರಿ. ಯಾರ ಮಾತು ತಪ್ಪು ಎಂಬ ಪ್ರಶ್ನೆ ಎದ್ದಿದೆ. ಜೊತೆಗೆ ಬಿಜೆಪಿ ನಾಯಕರು, ಚಂದ್ರು ಕೊಲೆ ಪ್ರಕರಣದ ಕ್ರಿಮಿನಲ್ ಇನ್ವೆಸ್ಟಿಗೇಷನ್ ತಿರುಚಲು ಯತ್ನಿಸಿದ್ರಾ ಎಂಬ ಪ್ರಶ್ನೆ ಎದ್ದಿದೆ. ಚಂದ್ರು ಕೊಲೆ ನಡೆದ ಬೆಳಗ್ಗೆ ಜೆಜೆ ನಗರ ಠಾಣೆಯಲ್ಲಿ ದೂರುದಾರ ಮತ್ತು ಸಾಕ್ಷಿ ಸೈಮನ್ ರಾಜ್, ಬೈಕ್ ಟಚ್ ಆಗಿದ್ದಕ್ಕೆ ಈ ಕೊಲೆ ನಡೆದಿದೆ ಎಂದು ವೀಡಿಯೋ ಹೇಳಿಕೆ ನೀಡಿದ್ದ. ಆದ್ರೇ, ನಿನ್ನೆ ಇದ್ದಕ್ಕಿದ್ದಂತೆ ಉರ್ದು ಮಾತನಾಡಿಲ್ಲ ಅಂತಾ ಕೊಲೆ ಮಾಡಿದ್ರು ಎಂದು ಆರೋಪಿಸಿದ್ದ. ಇದನ್ನೂ ಓದಿ: ಚಂದ್ರು ಕೊಲೆ ಪ್ರಕರಣ- ಜಮೀರ್ ಹೇಳಿಕೆ ಬೆನ್ನಲ್ಲೇ ಸೈಮನ್ ರಾಜ್ ಕಣ್ಮರೆ
Advertisement
Advertisement
ಇದು ಪೊಲೀಸ್ ಇಲಾಖೆ ಮತ್ತು ಬಿಜೆಪಿ ನಾಯಕರ ನಡುವೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಇಷ್ಟೆಲ್ಲಾ ಗೊಂದಲ, ಗೋಜಲು, ಮುಜುಗರ ಆದ ಮೇಲೆ ಸರ್ಕಾರ ಎಚ್ಚೆತ್ತಿದೆ. ಪೊಲೀಸ್ ಆಯುಕ್ತ ಕಮಲ್ ಪಂಥ್ ಮತ್ತು ಬಿಜೆಪಿ ನಡುವೆ ಸಂಘರ್ಷಕ್ಕೆ ತೆರೆ ಎಳೆಯಲು ಮುಖ್ಯಮಂತ್ರಿಗಳು ಪ್ರಕರಣವನ್ನು ಸಿಐಡಿಗೆ ವಹಿಸಿದ್ದಾರೆ. ಆದ್ರೇ, ಗೊಂದಲ ಅನ್ನೋ ಕಾರಣಕ್ಕೆ ತನಿಖೆಯನ್ನು ಸಿಐಡಿಗೆ ವಹಿಸಿಲ್ಲ. ಅಲ್ಲಿರೋದು ನಮ್ಮದೇ ಪೊಲೀಸರಲ್ವಾ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸಮರ್ಥನೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಚಂದ್ರು ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್- ಘಟನೆಯ ಇಂಚಿಂಚು ಮಾಹಿತಿ ನೀಡಿದ ಸ್ನೇಹಿತ ಸೈಮನ್ ರಾಜ್
Advertisement