ಬೆಂಗಳೂರು: ರಾಜ್ಯ ಗೆಜೆಟ್‌ನಲ್ಲಿ ಕರಡು ಅಧಿಸೂಚನೆ ಹೊರಡಿಸಿರುವ ಸರ್ಕಾರ ಬಿಬಿಎಂಪಿಯ 243 ವಾರ್ಡ್ ವಿಂಗಡಣೆ ಪೂರ್ಣಗೊಳಿಸಿ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ 40ಕ್ಕೂ ಹೆಚ್ಚು ವಾರ್ಡ್‌ಗಳು ಸೇರ್ಪಡೆಯಾಗಿವೆ.
243 ವಾರ್ಡ್‌ಗಳ ಹೆಸರು, ವ್ಯಾಪ್ತಿ, ಗಡಿ ನಿಗದಿಗೊಳಿಸಿದ್ದು, ಸಾರ್ವಜನಿಕ ಆಕ್ಷೇಪಣೆಗೆ ಸಲ್ಲಿಕೆಗೆ 15 ದಿನ ಕಾಲಾವಕಾಶ ನೀಡಿದೆ. ಇದನ್ನೂ ಓದಿ: ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರಲು ಮುಸ್ಲಿಂ ಯುವಕರಿಗೆ ಉತ್ತೇಜನ – ವಿಶೇಷ ಅಭಿಯಾನ
ಜೂನ್ 9ರಂದು ಬಿಬಿಎಂಪಿ ಸಲ್ಲಿಸಿದ್ದ ಡಿ ಲಿಮಿಟೇಷನ್ ವರದಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಹೊಸ ರಚನಾ ವರದಿಯ ಕರಡನ್ನು ಪ್ರಕಟಿಸಿದೆ. ಇದರಿಂದ 198 ಇದ್ದ ವಾರ್ಡ್ 243ಕ್ಕೆ ಅಧಿಕೃತವಾಗಿ ಏರಿಕೆಯಾಗಿದೆ. ಹೊಸ ವಾರ್ಡ್ ರಚನೆ ಕುರಿತು ಸಾರ್ವಜನಿಕ ಆಕ್ಷೇಪಣೆಗಳಿದ್ದಲ್ಲಿ 15 ದಿನಗಳ ಒಳಗೆ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ.
ಈಗಾಗಲೇ 243 ವಾರ್ಡ್‌ಗಳ ನಕ್ಷೆ, ಚೆಕ್ ಬಂದಿ ಸಹಿತ ವಾರ್ಡ್ ವಿವರವನ್ನು ಬಿಡುಗಡೆ ಮಾಡಿದೆ. ಆಕ್ಷೇಪಣೆ ಪರಿಶೀಲನೆ, ಬದಲಾವಣೆಗಳ ನಂತರ ಅಂತಿಮ ವರದಿ ಪ್ರಕಟಿಸಲಾಗುತ್ತದೆ ಎಂದು ಇಲಾಖೆ ಹೇಳಿದೆ. ಇದನ್ನೂ ಓದಿ: ಮೊದಲ ದಲಿತ, ಮುಸ್ಲಿಂ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ- ಟ್ವೀಟ್ ಮಾಡಿ ಮುಜುಗರಕ್ಕೀಡಾದ ಕೋಟಾ
ವಾರ್ಡ್ ವಿಂಗಡಣೆಯಿಂದಾಗಿ ಪಾಲಿಕೆ ಚುನಾವಣೆಗೆ ತೊಡಕಾಗಿದ್ದ ಡಿ ಲಿಮಿಟೇಷನ್ ವಿಘ್ನವೂ ನಿವಾರಣೆಯಾದಂತಾಗಿದೆ.