– 20.71 ಕೋಟಿ ರೂ. ಬೇಡಿಕೆಯಿಟ್ಟ ದುಷ್ಕರ್ಮಿಗಳು
ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿ ಇನ್ನೂ ಕೈಗೆ ಸಿಕ್ಕಿಲ್ಲ. ಈ ಬೆನ್ನಲ್ಲೇ ಇದೀಗ ರಾಜ್ಯ ರಾಜಧಾನಿಗೆ ಮತ್ತೊಂದು ಬಾಂಬ್ ಬೆದರಿಕೆ ಇಮೇಲ್ ಬಂದಿದೆ.
ಶಾಹಿದ್ ಖಾನ್ ಎಂಬ ಹೆಸರಲ್ಲಿ ಸರ್ಕಾರಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಸಿಎಂ, ಡಿಸಿಎಂ, ಗೃಹ ಸಚಿವರಿಗೆ ಮೇಲ್ ಮಾಡಿರುವ ದುಷ್ಕರ್ಮಿಗಳು, ಶನಿವಾರ ಮಧ್ಯಾಹ್ನ 2:48ಕ್ಕೆ ಬ್ಲಾಸ್ಟ್ ಮಾಡುವುದಾಗಿ ಉಲ್ಲೇಖಿಸಿದ್ದಾರೆ. ಅಲ್ಲದೇ ಬಸ್ಸು, ರೈಲು, ದೇವಸ್ಥಾನ, ಹೋಟೆಲ್‍ಗಳಲ್ಲಿ ಬಾಂಬ್ ಇಡ್ತೀವಿ. ಸ್ಫೋಟಿಸಬಾರದು ಅಂದ್ರೆ 2.5 ಮಿಲಿಯನ್ ಡಾಲರ್ (20.71 ಕೋಟಿ ರೂ.) ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಸಂಬಂಧ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ತಂಡ ತನಿಖೆ ನಡೆಸುತ್ತಿದೆ.
Advertisement
Advertisement
ಅನುಮಾನ ಹುಟ್ಟಿಸಿದ ಥ್ರೆಟ್: ಬಾಂಬ್ ಬೆದರಿಕೆಯ ಇ-ಮೇಲ್ ಸದ್ಯ ಭಾರೀ ಅನುಮಾನ ಹುಟ್ಟಿಸಿದೆ. ಶಂಕಿತನು ಅಲರ್ಟ್-02 ಅಂತ ಇ-ಮೇಲ್ ಹೆಡ್ಡರ್ ಹಾಕಿ ಇಮೇಲ್ ಮಾಡಿದ್ದಾನೆ. ಅಲ್ಲದೆ ಹೇಗಿತ್ತು ಮೂವಿ ಟ್ರೈಲರ್..?, ಇನ್ನೊಂದು ಟ್ರೈಲರ್ ತೋರಿಸಬೇಕಾ ನಿಮಗೆ..? ಅಂತ ಅದರಲ್ಲಿ ಉಲ್ಲೇಖಿಸಲಾಗಿದೆ. ಇದೀಗ ರಾಮೇಶ್ವರಂ ಬಾಂಬ್ ಬ್ಲಾಸ್ಟ್‍ಗೆ ಮುನ್ನ ಇ-ಮೇಲ್ ಬಂದಿತ್ತಾ?, ರಾಮೇಶ್ವರಂ ಬ್ಲಾಸ್ಟ್ ಅನ್ನೇ ಟ್ರೈಲರ್ ಅಂದ್ನಾ ಎನ್ನುವ ಪ್ರಶ್ನೆ ಎದ್ದಿದೆ. ಸದ್ಯ ಬಾಂಬ್ ಬೆದರಿಕೆ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದು, ತನಿಖೆ ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಬಾಂಬ್ ಬ್ಲಾಸ್ಟ್ ತನಿಖೆಗಿಳಿದ ಎನ್ಐಎ – ಸಿಸಿಬಿಯಿಂದ ತನಿಖಾ ಫೈಲ್ NIAಗೆ ಹಸ್ತಾಂತರ
Advertisement
Advertisement
ಕೆಎಸ್‍ಆರ್ ಟಿಸಿ ಅಲರ್ಟ್: ಕೆಎಸ್ ಆರ್ ಟಿಸಿಯ ಅಂಬಾರಿ ಉತ್ಸವ ಬಸ್ ಗೆ ಬಾಂಬ್ ಇಡುತ್ತೇವೆ ಎಂಬ ಇ-ಮೇಲ್ ಬೆದರಿಕೆ ಹಿನ್ನೆಲೆಯಲ್ಲಿ ಕೆಎಸ್ ಆರ್ ಟಿಸಿ ಪುಲ್ ಅಲರ್ಟ್ ಆಗಿದೆ. ಡ್ರೈವರ್, ಕಂಡೆಕ್ಟರ್ ಗಳಿಗೆ ಸೂಚನೆ ನೀಡಲಾಗಿದೆ. ಅನುಮಾನಸ್ಪದ ವಸ್ತುಗಳು, ವಸ್ತುಗಳು ಕಂಡು ಬಂದ್ರೇ ತಕ್ಷಣವೇ ಮಾಹಿತಿ ನೀಡಬೇಕು. ಹೀಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.