ಬೆಂಗಳೂರು: ರಾಜ್ಯದ ಜಿಲ್ಲೆಗಳಲ್ಲಿ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ (BPL Card) ಹೊಂದಿದ್ದ ಅಂಕಿ-ಸಂಖ್ಯೆಗಳು ಲಭ್ಯವಾಗಿವೆ. 31 ಜಿಲ್ಲೆಗಳ ಪೈಕಿ 21 ಜಿಲ್ಲೆಗಳ ಅಂಕಿ ಅಂಶಗಳು ಸಿಕ್ಕಿವೆ.
ಈ ಪೈಕಿ ಅತಿ ಹೆಚ್ಚು ಕಲಬುರಗಿ (Kalaburagi) ಜಿಲ್ಲೆಯಲ್ಲಿ 360, ಉಡುಪಿಯಲ್ಲಿ (Udupi) ಅತೀ ಕಡಿಮೆ 13 ಮಂದಿ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದರು. ಈ ಎಲ್ಲಾ ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ 2,021 ಬಿಪಿಎಲ್ ಕಾರ್ಡುಗಳು ಎಪಿಎಲ್‌ಗೆ ಮಾರ್ಪಾಡು
Advertisement
Advertisement
ಯಾವ ಜಿಲ್ಲೆಯಲ್ಲಿ ಎಷ್ಟು?
ಕಲಬುರಗಿ – 360, ಬಾಗಲಕೋಟೆ – 196, ದಕ್ಷಿಣ ಕನ್ನಡ – 189, ವಿಜಯಪುರ – 171, ಬಳ್ಳಾರಿ – 168, ಬೀದರ್ – 146, ಹಾಸನ – 102, ಹಾವೇರಿ – 100, ರಾಯಚೂರು- 96, ಚಾಮರಾಜನಗರ – 93, ರಾಮನಗರ – 93.
Advertisement
ಕೋಲಾರ – 80, ಧಾರವಾಡ – 48, ಉತ್ತರ ಕನ್ನಡ – 45, ಮಂಡ್ಯ – 36, ದಾವಣಗೆರೆ 34, ಚಿತ್ರದುರ್ಗ – 32, ಚಿಕ್ಕಬಳ್ಳಾಪುರ – 31, ಕೊಡಗು – 27, ಚಿಕ್ಕಮಗಳೂರು – 17, ಉಡುಪಿ – 13.