ಬೆಂಗಳೂರು: ಕರ್ನಾಟಕದಲ್ಲೇ ನೆಲೆಸಿ, ಇಲ್ಲಿನ ನೆಲ, ಜಲ, ಸಕಲ ಸೌಕರ್ಯ ಅನುಭವಿಸುತ್ತ. ಕನ್ನಡಿಗರ ಅಸ್ಮಿತೆ ಕೆಣಕಿ, ಶಾಂತಿ ಕದಡುತ್ತಿರುವ ನಾಡದ್ರೋಹಿಗಳ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಟ್ಟ ಕ್ರಮ ತೆಗೆದುಕೊಂಡಿದ್ದಾರೆ.
Advertisement
ಕನ್ನಡಿಗರು ಎಷ್ಟು ಶಾಂತಿಪ್ರಿಯರೋ ಕೆಣಕಿದರೆ ಅಷ್ಟೇ ಕೆಚ್ಚೆದೆವುಳ್ಳವರು ಅಂತ ಪುಂಡರ ವಿರುದ್ಧ ಕಾನೂನಾತ್ಮಕ ಭಾಷೆಯಲ್ಲೇ ಉತ್ತರ ಕೊಟ್ಟಿದ್ದಾರೆ. ಎಂಇಎಸ್ ಗೂಂಡಾಗಿರಿಯಿಂದ 4 ದಿನಗಳಿಂದ ರಾಜ್ಯದಲ್ಲಿ ಮನೆ ಮಾಡಿರುವ ಕಾರ್ಮೋಡವನ್ನು ತಿಳಿಗೊಳಿಸಿದ ಸಿಎಂ, ಕೆಚ್ಚೆದೆಯ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಮತಾಂತರ ತಡೆ ಮಸೂದೆಗೆ ವಿರೋಧ ಇದೆ: ಸಿದ್ದರಾಮಯ್ಯ
Advertisement
Advertisement
ತಂಟೆಕೋರರ ವಿರುದ್ಧ ಬೆಳಗಾವಿ ಕನ್ನಡಸೌಧದಲ್ಲಿ ಖಂಡನಾ ನಿರ್ಣಯ ಕೈಗೊಂಡು ಗಡಿ, ಕನ್ನಡ ಭಾಷೆ, ಕನ್ನಡಿಗರ ರಕ್ಷಣೆಯ ಸಂಕಲ್ಪ ತೊಟ್ಟಿದ್ದಾರೆ. ಮಹಾರಾಷ್ಟ್ರದ ಗಡಿಯ 40 ಗ್ರಾಮಗಳು ಕರ್ನಾಟಕ ಸೇರಲು ಮಹಾರಾಷ್ಟ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿದೆ. ಅವರು ರಾಜ್ಯಕ್ಕೆ ಬರುವಂತಿದ್ದರೆ ಬರಲಿ ಇದು ವಿವಾದ ಆಗುತ್ತದೆ ಎಂದು ಗೊತ್ತಿದೆ ಆದರೂ ಆಗಲಿ ರಾಜ್ಯಕ್ಕೆ ಬನ್ನಿ ಅಂತ ಆಹ್ವಾನ ನೀಡಿದ್ದಾರೆ. ಇದನ್ನೂ ಓದಿ: ಎಂಇಎಸ್ ಪುಂಡಾಟಿಕೆ ಹಿಂದೆ ಕಾಂಗ್ರೆಸ್ ಇದೆ – ಡಿಕೆಶಿ ವಿರುದ್ಧ ಸಿ.ಟಿ.ರವಿ ಆಕ್ರೋಶ
Advertisement
ಎಂಇಎಸ್ ತಂಟೆಕೋರರ ವಿರುದ್ಧ ದೇಶದ್ರೋಹ, ಗೂಂಡಾ ಕಾಯಿದೆ ಹಾಕುತ್ತೇವೆ. ಗಲಭೆ ಹಿಂದಿನ ಕೈವಾಡ ಬಯಲು ಮಾಡುತ್ತೇವೆ. ಕನ್ನಡಸೌಧದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸುತ್ತೇವೆ ಎಂದು ಸರ್ಕಾರ ನಿರ್ಣಯ ತೆಗೆದುಕೊಂಡಿದೆ. ಪದೇ ಪದೇ ಕ್ಯಾತೆ ತೆಗೆಯುವ ಎಂಇಎಸ್ ನಿಷೇಧಕ್ಕೆ ಸದನ ಒಕ್ಕೊರಲಾಗಿ ಆಗ್ರಹಿಸಿದೆ. ಈ ಬಗ್ಗೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತೇವೆ. ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮವಾಗಿದ್ದರೂ ಕೆಲವು ಸಂಘಟನೆಗಳು, ಪುಂಡರು ಹಿಂಸೆ ಸೃಷ್ಟಿಸುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಕಳುಹಿಸುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಎಂಇಎಸ್ ವಿರುದ್ಧದ ಖಂಡನಾ ನಿರ್ಣಯವನ್ನು ವಿಧಾನಸಭೆ ಒಕ್ಕೊರಲಿನಿಂದ ಅಂಗೀಕರಿಸಿದೆ. ಇದನ್ನೂ ಓದಿ: ಬೆಂಗಳೂರು ಪುಂಡರ ಮೇಲೆ ಗೂಂಡಾ ಕಾಯ್ದೆ ಪ್ರಯೋಗ – ಈ ಕಾಯ್ದೆಯ ವಿಶೇಷತೆ ಏನು?