ಬೆಂಗಳೂರು: ಕೊನೆಗೂ ರಾಜ್ಯದ 10 ಮಹಾನಗರ ಪಾಲಿಕೆಗಳ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳಿಗೆ ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ವಿವಿಧ ಕ್ಯಾಟಗರಿಗಳಿಗೆ ಮೇಯರ್, ಉಪಮೇಯರ್ ಸ್ಥಾನವನ್ನ ನಿಯೋಜನೆ ಮಾಡಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ.
ಬಳ್ಳಾರಿ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು ಹಾಗೂ ವಿಜಯಪುರ ಮಹಾನಗರ ಪಾಲಿಕೆಗಳ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ. ಇದನ್ನೂ ಓದಿ: ವಾಯುವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ಸ್ಥಾನದಿಂದ ವಿ.ಎಸ್ ಪಾಟೀಲ್‍ರನ್ನು ಕಿತ್ತುಹಾಕಿದ ಸರ್ಕಾರ
Advertisement
Advertisement
ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಒಬಿಸಿ ಮೀಸಲು ಗೊಂದಲವಾಗಿತ್ತು. ಇದರಿಂದ ಹೊಸ ಮೀಸಲು ಪಟ್ಟಿ ಪ್ರಕಟ ಮಾಡಿರಲಿಲ್ಲ. ಇದೀಗ ಐದು ತಿಂಗಳು ವಿಳಂಬದ ಬಳಿಕ ಮೀಸಲಾತಿ ಪ್ರಕಟಿಸಲಾಗಿದೆ. ಹೊಸ ಮೀಸಲು ಪ್ರಕಟವಾಗುವವರೆಗೂ ಕೆಲವು ಮಹಾನಗರ ಪಾಲಿಕೆಗಳಲ್ಲಿ ಹಿಂದಿನ ಮೀಸಲಿನ ಮೇಯರ್ ಮತ್ತು ಉಪಮೇಯರ್‌ಗಳೇ ಮುಂದುವರಿದಿದ್ದರು. ಇನ್ನೂ ಕೆಲವು ಮಹಾನಗರ ಪಾಲಿಕೆಗಳಲ್ಲಿ ಚುನಾವಣೆ ನಡೆದು ಒಂದು ವರ್ಷವಾದರೂ ಮೇಯರ್, ಉಪಮೇಯರ್ ಆಯ್ಕೆ ಆಗಿರಲಿಲ್ಲ. ಇದನ್ನೂ ಓದಿ: ಕಾಂಗ್ರೆಸ್ ಮುಖಂಡರು ಮನೆಯಲ್ಲಿ ಡ್ರಾಫ್ಟ್ ರೆಡಿ ಮಾಡಿ, ಮೋದಿಗೆ ಗುತ್ತಿಗೆದಾರರ ಸಂಘ ಪತ್ರ ಬರೆದಿದೆ: ರೇಣುಕಾಚಾರ್ಯ
Advertisement
Advertisement
ಯಾವ ನಗರಕ್ಕೆ ಯಾರು?
ಬಳ್ಳಾರಿ: ಮೇಯರ್ -ಒಬಿಸಿ (ಮಹಿಳೆ) , ಉಪಮೇಯರ್ -ಸಾಮಾನ್ಯ (ಮಹಿಳೆ)
ಬೆಳಗಾವಿ: ಮೇಯರ್ -ಸಾಮಾನ್ಯ , ಉಪಮೇಯರ್ -ಎಸ್‌ಸಿ (ಮಹಿಳೆ)
ದಾವಣಗೆರೆ: ಮೇಯರ್ - ಸಾಮಾನ್ಯ (ಮಹಿಳೆ) , ಉಪಮೇಯರ್ -ಒಬಿಸಿ (ಮಹಿಳೆ)
ಹುಬ್ಬಳ್ಳಿ-ಧಾರವಾಡ: ಮೇಯರ್ -ಸಾಮಾನ್ಯ (ಮಹಿಳೆ), ಉಪಮೇಯರ್ -ಸಾಮಾನ್ಯ
ಕಲಬುರಗಿ: ಮೇಯರ್ -ಎಸ್‌ಸಿ, ಉಪಮೇಯರ್ – ಸಾಮಾನ್ಯ
ಮಂಗಳೂರು: ಮೇಯರ್ -ಸಾಮಾನ್ಯ , ಉಪಮೇಯರ್ – ಸಾಮಾನ್ಯ (ಮಹಿಳೆ)
ಮೈಸೂರು: ಮೇಯರ್ -ಸಾಮಾನ್ಯ, ಉಪಮೇಯರ್ – ಒಬಿಸಿ (ಮಹಿಳೆ)
ಶಿವಮೊಗ್ಗ: ಮೇಯರ್ -ಒಬಿಸಿ, ಉಪಮೇಯರ್ -ಸಾಮಾನ್ಯ (ಮಹಿಳೆ)
ತುಮಕೂರು: ಮೇಯರ್ -ಎಸ್‌ಸಿ (ಮಹಿಳೆ), ಉಪಮೇಯರ್ – ಒಬಿಸಿ
ವಿಜಯಪುರ: ಮೇಯರ್ -ಎಸ್‌ಟಿ, ಉಪಮೇಯರ್ – ಒಬಿಸಿ