ಬೆಂಗಳೂರು: ಪೊಲೀಸರಿಗೆ ಸಿಹಿ ಸುದ್ದಿ. ಬ್ರಿಟೀಷರ ಬಳುವಳಿ ಎಂಬಂತೆ ಪೊಲೀಸ್ ಇಲಾಖೆಯಲ್ಲಿ ಬಂದಿದ್ದ ಆರ್ಡರ್ಲಿ ಪದ್ಧತಿಗೆ ತಿಲಾಂಜಲಿ ಇಡಬೇಕು ಅನ್ನೋ ಕೂಗಿಗೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಶೇ.50 ರಷ್ಟು ಸಿಬ್ಬಂದಿಯನ್ನು ಈ ಕೂಡಲೇ ಎಲ್ಲಾ ಅಧಿಕಾರಿಗಳು ವಾಪಸ್ ಕಳುಹಿಸುವಂತೆ ಸೂಚಿಸಿ ಗೃಹ ಇಲಾಖೆ ಆದೇಶ ಹೊರಡಿಸಿದೆ.
ಬಿಡುಗಡೆಗೊಂಡ ಸಿಬ್ಬಂದಿಯ ಸ್ಥಳದಲ್ಲಿ ಖಾಸಗಿ ಅನುಯಾಯಿಗಳನ್ನು ನೇಮಿಸಿಕೊಳ್ಳುವಂತೆ ಸೂಚಿಸಿದ್ದು, ಭತ್ಯೆ ರೂಪದಲ್ಲಿ ಹಣ ಪಾವತಿ ಮಾಡುವುದಾಗಿ ಗೃಹ ಇಲಾಖೆ ಕೂಡ ಆದೇಶದಲ್ಲಿ ತಿಳಿಸಿದೆ. ಬೆಂಗಳೂರೊಂದರಲ್ಲೇ ವಿವಿಧ ದರ್ಜೆ ಅಧಿಕಾರಿಗಳ ಮನೆಗಳಲ್ಲಿ 1239 ಮಂದಿ ಸಿಎಆರ್ ಸಿಬ್ಬಂದಿ ಆರ್ಡರ್ಲಿ ಪದ್ಧತಿಯ ಅಡಿಯಲ್ಲಿ ಕೆಲಸ ಮಾಡ್ತಿದ್ದಾರೆ.
Advertisement
ಸಾಕಷ್ಟು ಖರ್ಚು ಮಾಡಿ ತರಬೇತಿ ನೀಡಿರೋ ಪೊಲೀಸ್ ಸಿಬ್ಬಂದಿಯನ್ನು ಮನೆಗಳ ಕೆಲಸಕ್ಕೆ ಬಳಕೆ ಮಾಡೋದು ಎಷ್ಟು ಸರಿ ಅನ್ನೋ ಕೂಗು ಹತ್ತಾರು ವರ್ಷಗಳಿಂದಲೂ ಕೇಳಿಬರ್ತಿತ್ತು. ಈಗ ರಾಜ್ಯ ಸರ್ಕಾರ ಅರ್ಧದಷ್ಟು ಸಿಬ್ಬಂದಿಯನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ.