ಬೆಂಗಳೂರು: ಉನ್ನತ ಶಿಕ್ಷಣಕ್ಕೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ನಮ್ಮ ಸರ್ಕಾರ ಬಂದಮೇಲೆ ಶೇ.28 ಕ್ಕೇರಿದೆ. ಈ ಸಂಖ್ಯೆ ಏರಿಕೆಯಾಗಲು ಸರ್ಕಾರ ಉನ್ನತ ಶಿಕ್ಷಣದಲ್ಲಿ ಜಾರಿ ಮಾಡಿದ ಯೋಜನೆಗಳು ಕಾರಣ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, 1,86,000 ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನವೆಂಬರ್ ತಿಂಗಳಲ್ಲಿ ಲ್ಯಾಪ್ ಟಾಪ್ ವಿತರಣೆಯಾಗಲಿದೆ. ಈಗಾಗಲೇ ಗ್ಲೋಬಲ್ ಟೆಂಡರ್ ಆಹ್ವಾನಿಸಿದ್ದೇವೆ ಎಂದರು.
Advertisement
ರಾಯಚೂರು ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆಗೆ ಸುಗ್ರೀವಾಜ್ಞೆ ತರಲು ಚರ್ಚೆ ನಡೆಯುತ್ತಿದೆ. ರಾಜ್ಯದ ವಿವಿಗಳಲ್ಲಿ ನೂರಾರು ಕೋಟಿ ಅಕ್ರಮ ಆಗಿದೆ. ವಿಟಿಯು ವಿವಿ ಒಂದರಲ್ಲಿ 200 ಕೋಟಿ ಹಗರಣ ನಡೆದಿದೆ. ವಿವಿಗಳ ಅಧಿಕಾರ ರಾಜ್ಯಪಾಲರಿಗೆ ಇದೆ. ಹೀಗಾಗಿ ಯಾವುದೇ ಕ್ರಮ ತೆಗದುಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ವಿಟಿಯು ಕುಲಪತಿಯಾಗಿದ್ದ ಮಹೇಶ್ವರಪ್ಪ ಅವರನ್ನು ಕಾಂಗ್ರೆಸ್ ಸರ್ಕಾರವೇ ಸಸ್ಪೆಂಡ್ ಮಾಡಿದೆ. ಅವರು ಈಗ ಕಾಂಗ್ರೆಸ್ ಪರ ಪ್ರಚಾರ ಮಾಡ್ತಿದ್ದಾರೆ. ಅದಕ್ಕೂ ಕಾಂಗ್ರೆಸ್ ಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.
Advertisement
ವೀರಶೈವ ಲಿಂಗಾಯತ ಅಂತಾ ಬೀದಿ ಜಗಳ ಬಿಟ್ಟು ಸರ್ಕಾರದ ಬಳಿ ಬಂದ್ರೆ ಪ್ರತ್ಯೇಕ ಧರ್ಮ ಮಾಡಬಹುದು. ಬೀದಿಯಲ್ಲಿ ಬಡಿದಾಡಿಕೊಳ್ಳುತ್ತಿರುವುದಕ್ಕೆ ರಾಜ್ಯ ಸರ್ಕಾರ ಕಾರಣ ಅಲ್ಲ. ವೀರಶೈವ ಲಿಂಗಾಯತರ ನಡುವೆ ಒಮ್ಮತದ ಅಭಿಪ್ರಾಯ ಮೂಡಿಸೋದು ರಾಜಕಾರಣಿಗಳ ಕೆಲಸ ಅಲ್ಲ. ಸ್ವಾಮೀಜಿಗಳು ಈ ಕೆಲಸ ಮಾಡಬೇಕು ಎಂದರು.
Advertisement
ಯಡಿಯೂರಪ್ಪ ಒಳಗೊಂದು ಹೊರಗೊಂದು ಹೇಳ್ತಾರೆ. ಹಿಂದುತ್ವ ಬಿಟ್ಟು ಬಿಜೆಪಿಯಲ್ಲಿ ಇರಲು ಅವರು ಸಾಧ್ಯವಿಲ್ಲ. ಬಿಜೆಪಿಯ ಎಲ್ಲ ಬಿಜೆಪಿ ಲಿಂಗಾಯತ ನಾಯಕರು ಆರ್‍ಎಸ್ ಎಸ್ ಕಪಿಮುಷ್ಠಿಯಲ್ಲಿದ್ದಾರೆ ಎಂದು ಹೇಳಿದರು.