ಬೆಂಗಳೂರು: ನಾಲ್ಕು ತಿಂಗಳಲ್ಲಿ ಆಗಬೇಕಿದ್ದ ಮಳೆ ಕೇವಲ ಒಂಬತ್ತು ದಿನಗಳಲ್ಲಿಯೇ ಸುರಿದಿದೆ.
ಜೂನ್‍ನಿಂದ ಸೆಪ್ಟೆಂಬರ್‍ವರೆಗೆ ಸುರಿಯಬೇಕಿದ್ದ ಮಳೆ ಕೇವಲ 9 ದಿನಗಳಲ್ಲಿಯೇ ಸುರಿಯುವ ಮೂಲಕ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಆಗಸ್ಟ್ 1ರಿಂದ 9ರವರೆಗೆ ಭಾರೀ ಮಳೆಯಿಂದಾಗಿ ಸಾಕಷ್ಟು ಹಾನಿ ಸಂಭವಿಸಿದೆ. 10 ದಿನಗಳಲ್ಲಿ ಕಂಡುಕೇಳರಿಯದ ವರ್ಷಧಾರೆಯಾಗಿದೆ.
Advertisement
Advertisement
ಬೆಳಗಾವಿ, ಧಾರವಾಡ- ವಾಡಿಕೆಗಿಂತ 6 ಪಟ್ಟು ಹೆಚ್ಚು ಮಳೆಯಾಗಿದೆ. ಹಾವೇರಿಯಲ್ಲಿ ವಾಡಿಕೆಗಿಂತ 7 ಪಟ್ಟು ಮಳೆಯಾದರೆ ಹಾಸನ, ಹಾವೇರಿ, ಶಿವಮೊಗ್ಗ, ಕೊಡಗಲ್ಲಿ 4 ಪಟ್ಟು ಮಳೆಯಾಗಿದೆ. ಒಟ್ಟಿನಲ್ಲಿ ಹಿಂದೆಂದೂ ಕಂಡು ಕೇಳರಿಯದಂತೆ ಮಳೆಯಾಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಕೇವಲ ಮನುಷ್ಯರಷ್ಟೇ ಅಲ್ಲ ಮೂಕ ಪ್ರಾಣಿಗಳು ಕೂಡ ನಲುಗಿ ಹೋಗಿವೆ.
Advertisement
ಸೋಮವಾರದವರೆಗೂ ಪ್ರಳಯ ಮಳೆ ಎಚ್ಚರಿಕೆಯಿದ್ದು, ಕರ್ನಾಟಕದ 6 ಜಿಲ್ಲೆಗಳಲ್ಲಿ ಈಗಾಗಲೇ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.