ಬಿಜೆಪಿಯಲ್ಲಿ ಬಿಎಸ್‍ವೈ ವಿರುದ್ಧವೇ ಷಡ್ಯಂತ್ರ: ಆರ್.ಬಿ.ತಿಮ್ಮಾಪುರ

Public TV
1 Min Read
timmapur bsy

-ಮೋದಿ ಹೃದಯದಲ್ಲಿ ಕರ್ನಾಟಕಕ್ಕೆ ಜಾಗವಿಲ್ಲ
-25 ಸಂಸದರಿಗೆ ಬಾಯಿಯೇ ಇಲ್ಲ

ಬಾಗಲಕೋಟೆ: ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿಯಲ್ಲಿಯೇ ಷಡ್ಯಂತ್ರ ರಚಿಸಲಾಗಿದೆ. ಸ್ವಪಕ್ಷದ ನಾಯಕರ ಸಂಚಿಗೆ ಸಿಲುಕಿ ಯಡಿಯೂರಪ್ಪ ಅಸಹಾಯಕರಾಗಿದ್ದಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಆರ್.ಬಿ.ತಿಮ್ಮಾಪುರ ಸ್ಫೋಟಕ ಹೇಳಿಕೆ ನೀಡಿದ್ದಾರೆ.

nalin 1

ಬಿಜೆಪಿಯಲ್ಲಿ ಲಿಂಗಾಯತ ನಾಯಕನನ್ನು ಮುಗಿಸಲು ಷಡ್ಯಂತ್ರ ರಚಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಆರ್‍ಎಸ್‍ಎಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಸಂತೋಷ್ ಸೇರಿ ಬಿಎಸ್‍ವೈ ವಿರುದ್ಧ ಪಿತೂರಿ ನಡೆಸಿದ್ದಾರೆ. ಲಿಂಗಾಯತರು ಯಡಿಯೂರಪ್ಪನವರ ಮುಖ ನೋಡಿ ಮತ ಹಾಕಿದ್ದಾರೆ ಹೊರತು ನಳಿನ್ ಕುಮಾರ್ ಮುಖ ನೋಡಿ ಅಲ್ಲ. ಕಟೀಲ್‍ಗೆ ಈ ಭಾಗದ ಪರಿಚಯವೇ ಇಲ್ಲ. ಯಡಿಯೂರಪ್ಪನವರ ಮೇಲೆ ಮೂವರು ಡಿಸಿಎಂಗಳನ್ನು ತಂದಿದ್ದು, ಇನ್ನೆರೆಡು ತಿಂಗಳಲ್ಲಿ ಈ ಇಬ್ಬರು ಬಿಎಸ್‍ವೈ ಅವರ ರಾಜಕೀಯ ಜೀವನವನ್ನು ಮುಗಿಸಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪವರಿಗೆ ಟಿಕೆಟ್ ನೀಡಲ್ಲ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ನೆರೆ ಪರಿಹಾರ ಕೊಡದ ಕೇಂದ್ರ ಸರ್ಕಾರ – ಎಲ್ಲಾ ಚೆನ್ನಾಗಿದೆ ಎಂದ ಮೋದಿ ವಿರುದ್ಧ ಕಿಡಿ

smg bl santhosh

ಐವತ್ತಾರು ಇಂಚಿನ ಎದೆ ಇದೆ ಎಂದು ಪೋಸ್ ಕೊಡುವ ಪ್ರಧಾನಿ ಮೋದಿ ಅವರ ಹೃದಯದಲ್ಲಿ ಕರ್ನಾಟಕಕ್ಕೆ ಜಾಗವಿಲ್ಲ. ರಾಜ್ಯದ ಜನತೆ 25 ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದರಿಂದ ಪ್ರಧಾನಿ ಹೃದಯದಲ್ಲಿ ಸಣ್ಣ ಜಾಗವಿದೆ ಅಂತಾ ತಿಳಿದುಕೊಂಡಿದ್ದಿವಿ. ಆದ್ರೆ ನಮ್ಮ ನಂಬಿಕೆ ಸುಳ್ಳಾಗಿದೆ. ನಮ್ಮ ಸಂಸದರಿಗೆ ಬಾಯಿಯೇ ಇಲ್ಲ. ಒಂದಿಂಚು ಸಹ ಜಾಗ ಇರಲಾರದಂತಹ 56 ಇಂಚು ಎದೆ ಇದ್ದರೆಷ್ಟು, ಬಿಟ್ಟರೆಷ್ಟು. ಕರ್ನಾಟಕ ಜನತೆಗೆ ನೋವು ಮಾತ್ರ ತಪ್ಪಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪನವರೇ ನೀವಿಲ್ಲಿಗೆ ಬರಬೇಡಿ – ಸಂತ್ರಸ್ತರ ಆಕ್ರೋಶ

Share This Article
Leave a Comment

Leave a Reply

Your email address will not be published. Required fields are marked *