ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಇಬ್ಬರು ಹೆಚ್ಚು ಕಮ್ಮಿ ಒಂದೇ ವಯಸ್ಸಿನ ಆಸುಪಾಸಿನವರು. ತಮ್ಮದೇ ರೀತಿಯಲ್ಲಿ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನ ನೀಡಿದ್ದಾರೆ. ಹಾಗಾಗಿ ಇಬ್ಬರ ಬರ್ತಡೇಯನ್ನ ವಿಶೇಷವಾಗಿ ಆಚರಿಸಲು ಕರ್ನಾಟಕ ಫಿಲ್ಮ್ಂ ಚೇಂಬರ್ ನಿರ್ಧರಿಸಿದೆ.
ಸಿನಿಮಾರಂಗದಲ್ಲಿ ಶಿವಣ್ಣ ಅವರು 125ಕ್ಕೂ ಅಧಿಕ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ರವಿಚಂದ್ರನ್ ಅವರು ನಟನೆಯ ಜತೆಗೆ ನಿರ್ಮಾಪಕನಾಗಿ, ನಿರ್ದೇಶಕನಾಗಿ ಸೈ ಎನಿಸಿಕೊಂಡಿದ್ದಾರೆ. ಶಿವಣ್ಣಗೆ 60 ವರ್ಷ ವಯಸ್ಸು. ರವಿಚಂದ್ರನ್‌ಗೆ 61 ವರ್ಷ ತುಂಬಿದೆ. ಈಗ ಇಬ್ಬರ ಬರ್ತ್ಡೇಯನ್ನು ಒಟ್ಟಾಗಿ ಆಚರಿಸಲು ಕರ್ನಾಟಕ ಫಿಲಂ ಚೇಂಬರ್ ನಿರ್ಧರಿಸಿದೆ. ಶಿವರಾಜ್‌ಕುಮಾರ್ ಜುಲೈ 12ರಂದು ಜನಿಸಿದ್ದಾರೆ. ರವಿಚಂದ್ರನ್ ಅವರು ಜನಿಸಿದ್ದು ಮೇ 30ರಂದು. ಇವರ ಬರ್ತ್ಡೇಯನ್ನು ದೊಡ್ಡದಾಗಿ ಆಚರಿಸಲು ಪ್ಲ್ಯಾನ್ ಮಾಡಿದ್ದಾರೆ. ಫಿಲ್ಮಂ ಚೇಂಬರ್ ವತಿಯಿಂದ ಈ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ. ಈ ಬಗ್ಗೆ ಕರ್ನಾಟಕ ಫಿಲ್ಮ್ಂ ಚೇಂಬರ್ ಅಧ್ಯಕ್ಷ ಭಾ.ಮಾ. ಹರೀಶ್ ಯೋಚಿಸಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣ ನಟನೆಯ `ಸೀತಾ ರಾಮಂ’ ಸಿನಿಮಾ ಹಲವು ದೇಶಗಳಲ್ಲಿ ಬ್ಯಾನ್
Advertisement
ಶಿವರಾಜ್‌ಕುಮಾರ್ ಅವರು ಈ ಬಾರಿ 60ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಹುಟ್ಟುಹಬ್ಬವನ್ನು ದೊಡ್ಡದಾಗಿ ಆಚರಿಸಲು ಪುನೀತ್ ರಾಜ್‌ಕುಮಾರ್ ಈ ಮೊದಲೇ ನಿರ್ಧರಿಸಿದ್ದರು. ಆದರೆ, ಪುನೀತ್ ಅಕಾಲಿಕ ಮರಣ ಇಡೀ ಚಿತ್ರರಂಗಕ್ಕೆ ಶಾಕ್ ಕೊಟ್ಟಂತೆ ಆಗಿದೆ. ಬಾರದ ಲೋಕಕ್ಕೆ ಅಪ್ಪು ಹೋಗಿರೋದು ಶಿವಣ್ಣನ ಕುಟುಂಬಕ್ಕೆ ಶಾಕ್ ಕೊಟ್ಟಿದೆ. ಈ ನೋವಿನಲ್ಲಿ ಅವರು ಈ ಬಾರಿ ಬರ್ತ್ಡೇ ಆಚರಿಸಿಕೊಂಡಿಲ್ಲ. ಈ ಕಾರಣಕ್ಕೆ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಶಿವಣ್ಣ ಹಾಗೂ ರವಿಚಂದ್ರನ್ ಬರ್ತ್ಡೇ ದೊಡ್ಡದಾಗಿ ಆಯೋಜಿಸುವ ಸಾಧ್ಯತೆ ಇದೆ. ಈ ಕಾರ್ಯಕ್ರಮಕ್ಕೆ ಇಡೀ ಚಿತ್ರರಂಗವೇ ಸಾಥ್ ನೀಡಲಿದೆ.